ದಾ.ರಾ.ಮಹೇಶ್, ಕೆ.ಪ್ರತಾಪ್ ಆಯ್ಕೆ
ಸಂಜೆವಾಣಿ ವಾರ್ತೆ
ಹುಣಸೂರು,ಮಾ.26:- ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ತಾಲ್ಲೂಕಿನ ಪತ್ರಕರ್ತರ ಅಭಿವೃದ್ಧಿ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ದಾ.ರಾ.ಮಹೇಶ್, ಉಪಾಧ್ಯಕ್ಷರಾಗಿ ಸಂಜೆವಾಣಿ ವರದಿಗಾರ ಕೆ. ಪ್ರತಾಪ್ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ದಾ.ರಾ.ಮಹೇಶ್ ಮಾತನಾಡಿ, ಸಹಕಾರಿ ಸಂಘಗಳು ಸರ್ವರಿಗೂ ಸಹಾಯಕವಾಗಲಿದ್ದು, ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಷೇರುದಾರರಿಗೆ ಮುಟ್ಟಿಸುವ ಮೂಲಕ ಸಂಘದ ಏಳಿಗೆಗೆ ಹಾಗೂ ಸಹಕಾರಿ ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ ಎಂದರು.
ನಂತರ ಸಹಕಾರಿ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಹೆಚ್. ಆರ್. ಕೃಷ್ಣಕುಮಾರ್, ಸಚಿತ್ ಧರ್ಮಾಪುರನಾರಯಣ, ಮಹಾದೇವಪ್ಪ, ಸಂಪತ್ ಕುಮಾರ್, ಮಹದೇವ್, ನಾಗರತ್ನ ನಟರಾಜು, ಶಂಕರ್, ಮನುಕುಮಾರ್, ಯೋಗೇಶ್, ಸ್ವಾಮಿ ಗೌಡ ಉಪಸ್ಥಿತರಿದ್ದರು.