ಇಂಡಿಗನತ್ತ ಗ್ರಾಮಕ್ಕೆ ಜಿಲ್ಲಾಧಿಕಾರಿಗಳ ತಂಡ ಭೇಟಿ: ಮೂಲಭೂತ ಸೌಕರ್ಯ ನೀಡಲು ಭರವಸೆ
ಸಂಜೆವಾಣಿ ವಾರ್ತೆ
ಹನೂರು.ಮಾ.26 :- ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ತುಳಸಿಕೆರೆ ಸುತ್ತಮುತ್ತಲಿನ ಗ್ರಾಮಸ್ಥರು ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಲೋಕಸಭಾ ಚುನಾವಣೆ ಬಹಿಷ್ಕಾರಿಸುವುದಾಗಿ ಪ್ರತಿಭಟಿಸಿದ ಹಿನ್ನೆಲೆ ಗ್ರಾಮಕ್ಕೆ ಜಿಲ್ಲಾಧಿಕಾರಿಗಳ ತಂಡ ಭೇಟಿ ಮೂಲಭೂತ ಸೌಕರ್ಯ ನೀಡುವಂತೆ ಭರವಸೆ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ಇಂಡಿಗನತ್ತ ತೊಳಸಿಕೆರೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾನುವಾರ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಲೋಕಸಭೆ ಚುಣಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಪ್ರತಿಭಟನೆಯನ್ನು ಮಾಡುತಿದ್ದ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ತಂಡ ಇಂಡಿಗನತ್ತ ಗ್ರಾಮಕ್ಕೆ ಬೆಟಿ ನೀಡಿ ಗ್ರಾಮಸ್ಥರೊಡನೆ ಸಮಾಲೋಚನೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ಸ್ವಾತಂತ್ರ ಬಂದು ಇಂದಿಗೆ 76 ವರ್ಷಗಳಾದರು ಸಹ ಇಂದಿಗೂ ಸಹ ಈ ಕುಗ್ರಾಮಗಳು ಮೂಲಬುತ ಸೌಕರ್ಯದಿಂದ ವಂಚಿತರಾಗಿದ್ದು, ಕನಿಷ್ಠ ಮೂಲಬೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆಗಳಂತು ಅಭಿವೃದ್ದಿ ಕಾಣದೆ ನಮ್ಮ ಜೀವನವು ದುಸ್ತರವಾಗಿದೆ. ಇಲ್ಲಿ ಸರಿ ಸುಮಾರು 150 ಕುಟುಂಬಗಳು ವಾಸವಾಗಿದ್ದು, ಇಂದಿಗೂ ದೀಪದ ಬೆಳಕಿನಲ್ಲೇ ಕಾಲ ಕಳೆಯಬೇಕು.
ಪಡಿತರ ಪಡೆಯಬೇಕಾದರೆ 9 ಕಿಲೋ ಮೀಟರ್ ದೂರದಲ್ಲಿರುವ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪಡಿತರವನ್ನು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭದಲ್ಲಿ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಬೇಕು ಹಲವಾರು ಸಂದರ್ಭದಲ್ಲಿ ಮಾರ್ಗ ಮಧ್ಯೆದಲ್ಲೆ ಹೆರಿಗೆಯಾದ ಸಂದರ್ಭಗಳು ಇವೆ.
ಶಾಲಾ ಮಕ್ಕಳು ಕೆಲ ಸಂದರ್ಭದಲ್ಲಿ ಕಾಲ್ನಡಿಗೆಯಲ್ಲೇ ತೆರಳಬೇಕು ಮತ್ತು ಪೌತಿ ಖಾತೆಯನ್ನು ಮಾಡಿಕೊಡಬೇಕು ಹಾಗೂ ಗ್ರಾಮಸ್ಥರ ಸಂಚಾರಕ್ಕೆ ಯಾವುದೇ ರೀತಿಯಾ ಅಡೆ ತಡೆಗಳು ಇರಬಾರದು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶಿಲ್ಪನಾಗ್ ಈಗಾಗಲೆ ನಿಮ್ಮಗಳ ನೋವು ನನಗೆ ತಿಳಿದಿದೆ ಏಕಾ ಏಕಿ ರಸ್ತೆ ವಿಧ್ಯುತ್ ಬೇಕು ಎಂದಾದರೆ ಕೂಡಲೆ ಮಾಡಲಾಗುವುದಿಲ್ಲ ಇದು ಅರಣ್ಯ ವ್ಯಾಪ್ತಿಯಲ್ಲಿ ಬರುವುದರಿಂದ ಸ್ವಲ್ಪ ಸಮಯ ಬೇಕಾಗುತ್ತದೆ ಈಗಾಗಲೆ ನೀವು ಮತವನ್ನು ಮಾಡುವುದಿಲ್ಲವೆಂಬ ತಪ್ಪು ಪರಿಕಲ್ಪನೆಗೆ ಒಳಗಾಗಬೇಡಿ ಕುಡಿಯುವ ನೀರಿನ ಸೌಲಭ್ಯವನ್ನು ಆದಷ್ಟು ಬೇಗ ಕಲ್ಪಿಸಿಕೊಡಲಾಗುವುದು.
ಈಗಾಗಲೆ ವಿಧ್ಯುತ್ ಸಂಪರ್ಕಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ವಿಧ್ಯುತ್ ಸಂಪರ್ಕವನ್ನು ಕಲ್ಪಿಸಲು ವ್ಯವಸ್ಥೆಯನ್ನು ಕಾಮಗಾರಿಯನ್ನು ರೂಪು ರೇಷೆಗಳನ್ನು ಸಿದ್ದಪಡಿಸಲಾಗುವುದು. ರಾಜ್ಯ ಸರ್ಕಾರದ ಆದೇಶದ ಮೇರೆಗೆ ಅರಣ್ಯದೊಳಗೆ ಚಾರಣ ಮಾಡುವುದನ್ನು ನಿಷೇಧಿಸಲಾಗಿದೆ.
ಸ್ಥಳೀಯರಿಗೆ ತಿರುಗಾಡಲು ಯಾವುದೇ ಅಡ್ಡಿಯನ್ನು ಮಾಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜನ-ವನ ಸೇತುವೆ ಸಾರಿಗೆಯನ್ನು ಪ್ರಾಧಿಕಾರದ ವತಿಯಿಂದ ನಿರ್ವಹಿಸಲಾಗುತಿದ್ದು, ಶಾಲಾ ಮಕ್ಕಳಿಗೆ ಹೆಚ್ಚುವರಿ ಸಂಚಾರ ಮಾಡಲು ಸೂಚಿಸಲಾಗುವುದು ಹಂತ ಹಂತವಾಗಿ ಎಲ್ಲಾ ಮೂಲಭುತ ಸೌಕರ್ಯಗಳ್ನು ಒದಗಿಸಲಾಗುವುದು ಎಂದು ತಿಳಿಸಿದರು.
ನಂತರ ಮಾತನಾಡಿದ ಅರಣ್ಯ ಉಪ ಸಂರಕ್ಷಣಾಧಿಕಾರಿ ಸಂತೋಷ್ ಹಲವಾರು ಇಲಾಖೆಗಳ ಜೊತೆಗೂಡಿ ಕಾಮಗಾರಿಯನ್ನು ಯೋಜಿಸಲು ವಿಳಂಭವಾಗಿದೆ ಕಳೆದ ವಾರವಷ್ಟೆ ನನಗೆ ತಮ್ಮ ಗ್ರಾಮದ ಅರ್ಜಿ ದೊರೆತಿದೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಅರ್ಜಿಯನ್ನು ಆದಷ್ಟು ಬೇಗ ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿ ಇಂಡಿಗನತ್ತ ಗ್ರಾಮ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ವಿಧ್ಯುತ್ ಸಂಪರ್ಕವನ್ನು ಕಲ್ಪಿಸಲು ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
ಮಹದೇಶ್ವರ ಬೆಟ್ಟದ ಗ್ರಾಮಪಂಚಾಯಿತಿ ಮುಂದೆ ಪ್ರತಿಭಟನಾ ನಿರತರನ್ನು ಭೇಟಿ ಮಾಡಿದ ತಹಸಿಲ್ದಾರ್ ಗುರುಪ್ರಸಾದ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಮೂಕಲಬೂತ ಸೌಕರ್ಯಗಳ ಬಗ್ಗೆ ಚರ್ಚಿಲಾಗಿದೆ. ಪ್ರತಿಭಟನೆಯನ್ನು ಕೈ ಬಿಡುವಂತೆ ಸೂಚಿಸಿದರು ಇದಕ್ಕ ಒಪ್ಪದ ಗ್ರಾಮಸ್ಥರು ಮೂಲಭೂತ ಸೌಕರ್ಯ ಕಾರ್ಯಾರಂಭ ಶುರು ಮಾಡಿದಾಗಲೇ ನಾವು ಪ್ರತಿಭಟನೆಯನ್ನು ಕೈ ಬಡುತ್ತೇವೆ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮತ್ತೆ ಪ್ರತಿಭಟನೆ ನಡೆಸುತ್ತೇವೆ ಎಂದು ಗ್ರಾಮಸ್ಥರು ಸೋಮವಾರದ ಪ್ರತಿಭಟನೆಯನ್ನು ಮೊಟಕುಗೊಳಿಸಿದರು.
ಸ್ಥಳದಲ್ಲಿ ಪೆÇೀಲೀಸ್ ವರಿಷ್ಟಾಧಿಕಾರಿ ಪದ್ಮಿನಿ ಸಾಹೋ, ತಹಸಿಲ್ದಾರ್ ಗುರುಪ್ರಸಾದ್, ಪೆÇೀಲೀಸ್ ಇನ್ಸ್ಪೆಕ್ಟರ್ ಜಗಧೀಶ್, ಹೆಚ್ಚುವರಿ ವಲಯ ಅರಣ್ಯಾಧಿಕಾರಿ ಚಂದ್ರಶೇಖರ್ ವಲಯ ಅರಣ್ಯಾಧಿಕಾರಿ ಭಾರತಿ ನಂದಿಹಳ್ಳ, ತಾಲೂಕು ಪಂಚಾಯತ್ ಇಒ ಉಮೇಶ್, ಗ್ರಾಮ ಪಂ. ಪಿಡಿಒ ಕಿರಣ್ ಕುಮಾರ್ ಸೇರಿದಂತೆ ಮಹದೇಶ್ವರ ಬೆಟ್ಟ ಸುತ್ತಮುತ್ತ ಗ್ರಾಮದ ರೈತ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.