ಬಿ.ವಿ ಪ್ರಸನ್ನಕುಮಾರ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಮಾ.26:- ಸರ್ವಜ್ಞ ವಿವಿದೊದ್ದೇಶ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ವಿ ಪ್ರಸನ್ನಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಮೋಹನ್ ಕುಮಾರ್ ಮುಕ್ಕೋಟಿ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಚೀರನಹಳ್ಳಿ ರಸ್ತೆಯಲ್ಲಿರುವ ಸಂಘದ ಆಡಳಿತ ಕಚೇರಿಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿಯಾಗಿದ್ದ ರಿಟರ್ನಿಂಗ್ ಅಧಿಕಾರಿ ಸವಿತಾ.ಕೆ.ಎಲ್. ರವರು ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದ್ದರು. ಚುನಾವಣೆ ಸಭೆಯಲ್ಲಿ ನಿರ್ದೇಶಕರಾದ ಲಕ್ಷ್ಮಣ, ಲಕ್ಷ್ಮಣಶೆಟ್ಟಿ, ಸನಂದಕುಮಾರ್, ಸುರೇಶ. ಸ್ವಾಮಿಶೆಟ್ಟಿ. ವರಲಕ್ಷ್ಮೀ, ವಸಂತ. ವಿಷ್ಣುವರ್ಧನ, ತಿಮ್ಮಶೆಟ್ರು, ಸೀನಣ್ಣ, ಮಾಜಿ ಅಧ್ಯಕ್ಷ ಕೆ.ಜೆ.ಬಸವರಾಜು ಇದ್ದರು,
ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಕುಂಬಾರ ಸಮಾಜದ ಮುಖಂಡರು ಸೇರಿದಂತೆ ಅಭಿನಂದಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಬಿ.ವಿ ಪ್ರಸನ್ನಕುಮಾರ್ ಸಂಘದ ಎಲ್ಲಾ ನಿರ್ದೇಶಕರಿಗೆ ಹಾಗೂ ನನ್ನ ಸಮಾಜದ ಬಂದುಗಳಿಗೆ ಧನ್ಯವಾದಗಳು ತಿಳಿಸುತ್ತೇನೆ ಹಾಗೇ ನನ್ನ ಅವಧಿಯಲ್ಲಿ ಹೆಚ್ಚು ಷೇರುದಾರರನ್ನು ಮಾಡಿ ಸಾಲ ಸೌಲಭ್ಯವನ್ನು ನೀಡುತ್ತೇವೆ ಎಂದು ಹೇಳಿದರು.