ಸಹೋದರ ಮತ್ತೆ ಬಿಜೆಪಿಗೆ ಬಂದಿದ್ದು ಸಂತೋಷ: ಸೋಮಶೇಖರ ರೆಡ್ಡಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.25 : ಮಾಜಿ ಸಚಿವ, ಗಂಗಾವತಿ ಶಾಸಕ, ನನ್ನ ಕಿರಿಯ  ಸಹೋದರ ಜಿ. ಜನಾರ್ದನ ರೆಡ್ಡಿ ಮತ್ತೆ ಬಿಜೆಪಿ ಪಕ್ಷ ಸೇರಿದ್ದು ಸಂತಸ ತಂದಿದೆ ಎಂದು ನಗರದ ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದ್ದಾರೆ.
ಸಂಜೆವಾಣಿಯೊಂದಿಗೆ ಮಾತನಾಡಿದ ಅವರು. ಸಹೋದರ ಜನಾರ್ಧನ ರೆಡ್ಡಿ ಮತ್ತು ನಮ್ಮ ಮಧ್ಯೆ ಯಾವುದೇ ವೈಮನಸ್ಸಿಲ್ಲ. ಒಟ್ಟಾಗಿದ್ದೇವೆ. ಆತ ಬಿಜೆಪಿ ಗೆ ಬಂದಿದ್ದು ಪಕ್ಷಕ್ಕೆ ಮತ್ತು ನಮಗೆ ಆನೆ ಬಲ ಬಂದಂತಾಗಿದೆಂದರು.
ಹೊಸ ಪಕ್ಷ ಕಟ್ಟಿ ತಪ್ಪು ಮಾಡಿದ್ರು, ಈಗ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಿ ಸರಿಯಾಗಿದೆ. ಜನಾರ್ದನ ರೆಡ್ಡಿ ಚುನಾವಣೆ ಸ್ಟ್ರಾಟರ್ಜಿ ಮಾಡೋದ್ರಲ್ಲಿ ನಿಪುಣರು. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲವು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.