ಆಧ್ಯಾತ್ಮಿಕ ಸಾಧನೆಯೊಂದಿಗೆ ದೈವತ್ವಕ್ಕೆ ಏರಿದ ಯೋಗಿ ನಾರೇಯಣ ಯತೀಂದ್ರರು
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.೨೬: ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಆಧ್ಯಾತ್ಮಿಕ ಸಾಧನೆಯೊಂದಿಗೆ ಮಾನವನಿಂದ ದೈವತ್ವಕ್ಕೆ ಏರಿದ ಮಹಾನ್ ಪವಾಡ ಪುರಷ ಯೋಗಿ ನಾರೇಯಣ ಯತೀಂದ್ರರು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಲಾದ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ.ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ಅವರು ಮಾತನಾಡಿದರು.ನಾಯಕನಹಟ್ಟಿಯಂತಯೇ ಕೈವಾರವು ಕೂಡ ಸುಪ್ರಸಿದ್ಧ ಮಹಿಮಾತ್ಮ ಯಾತ್ರ ಕ್ಷೇತ್ರವಾಗಿದೆ. ಮಾನವರಾಗಿ ಸಂಸಾರ, ಸಾಮಾಜಿಕ ಜಂಜಾಟಗಳನ್ನು ಅನುಭವಿಸಿದ ನಾರೇಯಣರು, ಆಧ್ಯಾತ್ಮಕ ಸಾಧನೆ ಮಾಡಿ, ಸಮಾಜಕ್ಕೆ ದಾರಿ ದೀಪವಾದರು. ಈ ಮೂಲಕ ಸಮಾಜದಲ್ಲಿ ಮೂಡನಂಬಿಕೆ ಕಂದಾಚಾರಗಳನ್ನು ತೊಡದು ಹಾಕಿದರು. ಸಧೃಡ ಸಮಾಜ ಕಟ್ಟುವಲ್ಲಿ ಶ್ರಮಿಸಿದರು. ಅಪಾರ ಜ್ಞಾನಶಕ್ತಿಯಿಂದ ಕಾಲಜ್ಞಾನ ಗ್ರಂಥವನ್ನು ಸಹ ರಚಿಸಿದರು. ಈ ಮೂಲಕ ಮುಂದಿನ ದಿನಗಳಲ್ಲಿ ಸಮಾಜ ಎಚ್ಚರಿಕೆಯಿಂದ ಹೇಗೆ ಸಾಗಬೇಕು ಎಂಬುದನ್ನು ತಿಳಿಸಿದರು. ನಾವೆಲ್ಲರೂ ಯೋಗಿ ನಾರೇಯಣ ಯತೀಂದ್ರರು ಬೋಧಿಸಿದ ತತ್ವ ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಪರಸ್ಪರ ಪ್ರೀತಿ ಸಹಬಾಳ್ವೆಯಿಂದ ಬದುಕಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕರೆ ನೀಡಿದರು.ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಕುರಿತು ನಿವೃತ್ತ ಶಿಕ್ಷಕ ಹುರುಳಿ ಬಸವಾರಜ್ ಉಪನ್ಯಾಸ ನೀಡಿದರು. ರಂಗನಿರ್ದೇಶಕ ಕೆ.ಪಿ.ಎಂ. ಗಣೇಶಯ್ಯ ನಾಡಗೀತಿ ಪ್ರಸ್ತುತ ಪಡಿಸಿ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಲಿಜ ಸಮಾಜದ ಮುಖಂಡರುಗಳಾದ ಎಂ.ಜೆ. ಸೂರ್ಯನಾರಾಯಣ, ನಂಜುAಡಸ್ವಾಮಿ, ವೈ. ಹನುಮಂತಪ್ಪ, ಎಂ. ಗಂಗಣ್ಣ, ಸಿ.ಹೆಚ್.ಬಸವರಾಜ್, ಪ್ರಹ್ಲಾದ್ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.