ರಂಗು ರಂಗಿನ ಹೋಳಿ ಸಂಭ್ರಮ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.25: ದೇಶದೆಲ್ಲಡೆಯಂತೆ ಬಿಸಿಲ ನಾಡು ಬಳ್ಳಾರಿಯಲ್ಲಿಯೂ ಇಂದು ಜನತೆ ರಂಗು ರಂಗಿನ ಹೋಳಿ ಹಬ್ಬದ ಆಚರಣೆಯಲ್ಲಿ ತೊಡಗಿದ್ದರು.
ಒಂದಡೆ ಮಕ್ಕಳಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಬಿಸಿ. ಅವರು ಹಬ್ಬದ ಸಂಭ್ರಮದಿಂದ ದೂರವಾದಂತೆ ಕಂಡರೆ‌  ಇನ್ನು ಪರೀಕ್ಷೆ ಮುಗಿದಿರುವ ಪಿಯು, ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಪಾಲಕ ಪೋಷಕರು ಇಂದು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.