ರಾಜ್ಯದ 19 ಕ್ಷೇತ್ರಗಳಲ್ಲಿ ಎಸ್ ಯುಸಿಐ ಸ್ಪರ್ಧೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ,ಮಾ.25: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷವು. ದೇಶದ 151 ಕ್ಷೇತ್ರಗಳಲ್ಲಿ,  ರಾಜ್ಯದ 19 ಕ್ಷೇತ್ರಗಳಲ್ಲಿ, ಬಳ್ಳಾರಿ ಕ್ಷೇತ್ರದಿಂದ ಎ.ದೇವದಾಸ್ ಅವರು ಅಭ್ಯರ್ಥಿಯಾಗಿದ್ದಾರೆ ಎಂದು ಜಿಲ್ಲಾ ಕಾರ್ಯದರ್ಶಿ ರಾಧಕೃಷ್ಣ ಉಪಾಧ್ಯ ಹೇಳಿದ್ದಾರೆ.
ಅವರು ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಪಕ್ಷದ ಜನರ ಸಮಸ್ಯೆಗಳು ಆಧ್ಯತೆಯಾಗಿಲ್ಲ. ಭಾವನಾತ್ಮಕ ವಿಷಯಗಳನ್ನೇ ಜನರ ಮುಂದಿಟ್ಟು ಚುನಾವಣೆ ಗೆಲ್ಲುವ  ಹುನ್ನಾರ ಬಿಜೆಪಿಯದ್ದು. ಅವರದೇನಿದ್ದರೂ ಬಂಡವಾಳ ಶಾಹಿಗಳ, ಕಾರ್ಪೊರೇಟ್ ವಲಯದವರ ಹಿಡಿತಕ್ಕೆ ಸಿಲುಕಿ, ಸಂಪೂರ್ಣ ಖಾಸಗೀಕರಣದತ್ತ ಸಾಗಿದೆ ಮೋದಿ ಸರ್ಕಾರ.
ನಾವು ತಿನ್ನಲ್ಲ, ತಿನ್ನಲು ಬಿಡುವುದಿಲ್ಲ ಎಂದವರೇ ಚುನಾವಣಾ ಬಾಂಡಗಳ ಮೂಲಕ ಹೇಗೆ ತಿಂದಿದ್ದಾರೆಂಬುದು ಬಯಲಾಗಿದೆಂದರು.
ದೇವದಾಸ್ ಮಾತನಾಡಿ, ನಮ್ಮ ಎಸ್ ಯು ಸಿ ಐ ಪಕ್ಷ ಚುಮಾವಣೆಯನ್ನು ಹೋರಾಟವೆಂದೇ ಪರಿಗಣಿಸಿ ಎದುರಿಸಲಿದೆ. ಜನರ ಜೊತೆ ಇರುವಂತಹ ನಮ್ಮ ಪಕ್ಷಕ್ಕೆ ಮತ ನೀಡಿ ಎಂದರು.
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ, ರಿಂಗ್ ರೋಡ್ ಸಮಸ್ಯೆ ಬಗೆಹರಿದಿಲ್ಲ.  ಕೆಎಂಆರ್ ಸಿ ಹಣದ ಸದುಪಯೋಗವಾಗದಿರುವುದು ಆಡಳಿತದ ವಿಫಲತೆಯಾಗಿದೆ. ಇವುಗಳ ಪರಿಹಾರಕ್ಕೆ ನಮ್ಮ‌ಹೋರಾಟ ನಿರಂತರ ಎಂದರು.
ಜನಾರ್ಧನರೆಡ್ಡಿ ಮೇಲೆ ಇದ್ದ ಯಾವುದೇ ಆರೋಪಗಳಿಂದ ಮುಕ್ತ ಆಗಿಲ್ಲ. ಆದರೆ ಅವರನ್ನು ಇಂದು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಬಿಜೆಪಿ ಸೇರಿದಾಕ್ಷಣ ಜನಾರ್ಧನರೆಡ್ಡಿ ಅವರ ಅಕ್ರಮದ ಮಾಫಿನಾ ಎಂದು ನಾಗಲಕ್ಷ್ಮಿ ಪ್ರಶ್ನಿಸಿದರು.
ಚುನಾವಣಾ ಆಯೋಗವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ನ್ಯಾಯಾಂಗ ವ್ಯವಸ್ಥೆಯೂ ಒಂದು ರೀತಿ ಆಡಳಿತ ವ್ಯವಸ್ಥೆಯ ಪ್ರತಿಬಿಂಬದಂತೆ ನಡೆದುಕೊಳ್ಳುತ್ತದೆಂದು ಆರೋಪಿಸಿದರು.
ಪಕ್ಷದ ಮುಖಂಡರುಗಳಾದ, ಸೋಮಶೇಖರಗೌಡ, ನಾಗಲಕ್ಷ್ಮಿ, ಮಂಜುಳ, ಡಾ.ಪ್ರಮೋದ್, ಶಾಂತ ಮೊದಲಾದವರು ಇದ್ದರು.