ಜೂಜಾಟ: 10 ಜನರ ಬಂಧನ
ಕಲಬುರಗಿ,ಮಾ.25-ನಗರದ ವಿಜಯ ವಿದ್ಯಾಲಯ ಕಾಲೇಜು ಹಿಂದುಗಡೆ ಇರುವ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಪಿಐ ಶಕೀಲ್ ಅಹ್ಮದ್ ಅಂಗಡಿ ಮತ್ತು ಸಿಬ್ಬಂದಿ ದಾಳಿ ನಡೆಸಿ 10 ಜನರನ್ನು ಬಂಧಿಸಿದ್ದಾರೆ.
ರವಿ ಕಟ್ಟಿಮನಿ, ಅಂಬು ಹಾದಿಮನಿ, ಜಗದೀಶ ಚವ್ಹಾಣ್, ಶ್ರೀಕಾಂತ ಬಾನಸವಾಡಿ, ಸುರೇಶ ಪೂಜಾರ, ರಾಹುಲ್ ಸಿರಸಗಿ, ಪರಶುರಾಮ ದುರ್ಗಿಮುರ್ಗಿ, ಶ್ರೀನಿವಾಸ ಬಡಿಗೇರ, ಮಹೇಶ ದೊಡ್ಡಮನಿ, ಹಣಮಂತ ಭಂಕೂರಕರ ಎಂಬುವವರನ್ನು ಬಂಧಿಸಿ 16020 ನಗದು ಜಪ್ತಿ ಮಾಡಿದ್ದಾರೆ. ಅಂಬರೀಶ ಬನಸವಾಡ ಎಂಬಾತ ಪರಾರಿಯಾಗಿದ್ದಾನೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.