7.50 ಲಕ್ಷ ರೂ.ಮೊತ್ತದ 380 ಟ್ರ್ಯಾಕ್ಟರ್ ಮರಳು ಜಪ್ತಿ
ಕಲಬುರಗಿ,ಮಾ.25-ಅಫಜಲಪುರ ಪೊಲೀಸ್ ಠಾಣೆ ವ್ಯಾಪ್ತಿಯ ಭೀಮಾ ನದಿ ತೀರದ ದೇಸಾಯಿ ಕಲ್ಲೂರ, ಗುಡ್ಡೇವಾಡಿ ಹಾಗೂ ಘತ್ತರಗಾ ಗ್ರಾಮಗಳ ವಿವಿಧ ಸರ್ವೆ ನಂಬರ್‍ಗಳ ಜಮೀನುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟಿದ್ದ ಮರಳು ದಾಸ್ತಾನಗಳ ಮೇಲೆ ದಾಳಿ ನಡೆಸಿರುವ ಪೊಲೀಸರು 7.50 ಲಕ್ಷ ರೂ.ಮೊತ್ತದ 380 ಟ್ರ್ಯಾಕ್ಟರ್ ಟ್ರ್ಯಾಲಿ ಮರಳು ಜಪ್ತಿ ಮಾಡಿದ್ದಾರೆ.
ಎಸ್‍ಪಿ ಅಕ್ಷಯ್ ಹಾಕೆ, ಹೆಚ್ಚುವರಿ ಎಸ್‍ಪಿ ಶ್ರೀನಿಧಿ, ಆಳಂದ ಡಿಎಸ್‍ಪಿ ಮಹ್ಮದ್ ಶರೀಫ್ ರಾವುತರ್ ಅವರ ಮಾರ್ಗದರ್ಶನದಲ್ಲಿ ಅಫಜಲಪುರ ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್‍ಐ ಮಹಿಬೂಬ್ ಅಲಿ, ಸಿಬ್ಬಂದಿಗಳಾದ ಇಮಾಮ್, ಮಹೇಶ್ ಪಾಟೀಲ, ವಿಶ್ವನಾಥ, ರಾಜಶೇಖರ ರಾಠೋಡ್ ಮತ್ತು ಮಹೇಶ್ ಅವರು ದಾಳಿ ನಡೆಸಿ ದೇಸಾಯಿ ಕಲ್ಲೂರ್ ಗ್ರಾಮದ ಜಮೀನಿನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ 2.70 ಲಕ್ಷ ರೂ.ಮೊತ್ತದ 135 ಟ್ರ್ಯಾಕ್ಟರ್, ಗುಡ್ಡೇವಾಡಿ ಗ್ರಾಮದ ಜಮೀನಿನಲ್ಲಿ ಸಂಗ್ರಹಿಸಿ ಇಡಲಾಗಿದ್ದ 2.60 ಲಕ್ಷ ಮೊತ್ತದ 130 ಟ್ರ್ಯಾಕ್ಟರ್, ಇದೇ ಗ್ರಾಮದ ಇನ್ನೊಂದು ಜಮೀನಿನಲ್ಲಿ ಸಂಗ್ರಹಿಸಿ ಇಡಲಾಗಿದ್ದ 70 ಸಾವಿರ ರೂ.ಮೌಲ್ಯದ 35 ಟ್ರ್ಯಾಕ್ಟರ್ ಮತ್ತು ಘತ್ತರಗಾ ಗ್ರಾಮದ ಜಮೀನಿನಲ್ಲಿ ಸಂಗ್ರಹಿಸಿ ಇಡಲಾಗಿದ್ದ 80 ಸಾವಿರ ರೂ.ಮೌಲ್ಯದ 40 ಟ್ರ್ಯಾಕ್ಟರ್ ಮರಳು ಜಪ್ತಿ ಮಾಡಿದ್ದಾರೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.