ಖರ್ಜೂರದ ಗರಿಗಳ ಹಬ್ಬ ಆಚರಣೆ
ಕಲಬುರಗಿ,ಮಾ.25-ನಗರದ ಜೆಸ್ಕಾಂ ಕಾರ್ಯಾಲಯ ಹತ್ತಿರ ಇರುವ ಹಿಂದೂಸ್ತಾನಿ ಕಾವನೆಂಟ್ ಚರ್ಚಿನಲ್ಲಿ ಭಾನುವಾರ ಖರ್ಜೂರದ ಗರಿಗಳ ಹಬ್ಬವನ್ನು ಆಚರಿಸಲಾಯಿತು.
ಯೆಸುಕ್ರಿಸ್ತನು ಶಿಲುಬೆಗೆ ಹಾಕುವ ಮುನ್ನ ಯೆರುಸಲೇಮಿಗೆ ಪ್ರವೇಶಿಸಿದನು, ಪ್ರವೇಶಿಸುವಾಗ ಜನರೆಲ್ಲರೂ ಖರ್ಜೂರದ ಗರಿಗಳನ್ನು ತಕ್ಕೊಂಡು ಆತನನ್ನು ಎದುರು ಗೊಳ್ಳುವುದಕ್ಕೆ ಹೋದರು. ಎರೂಸಲೇಮಿನ ಜನರೆಲ್ಲರೂ “ಜಯ ಕರ್ತನಾ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ ಇಸ್ರಾಯೇಲಿನ ಅರಸನಿಗೆ ಆಶೀರ್ವಾದ” ಎಂದು ಆರ್ಭಟಿಸಿದರು.
ಯೇಸು ಕತ್ತೆಮರಿಯನ್ನು ತರಿಸಿಕೊಂಡು ಅದರ ಮೇಲೆ ಕೂತುಕೊಂಡು ಊರೊಳಗೆ ಪ್ರವೇಶಿಸಿದನು . ಶಾಸ್ತ್ರದ ಮಾತು – “ಚಿಯೋನ್ ನಗರಿಗೆ ಹೆದರಬೇಡ ಇಗೋ ನಿನ್ನ ಅರಸನು ಕತ್ತೆ ಮರೆಯ ಮೇಲೆ ಕೂತುಕೊಂಡು ಬರುತ್ತಾನೆ” ನೆರವೇರುವಂತೆ ಇದೆಲ್ಲಾಯಿತು.
ಆದ್ದರಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಸಭೆಯವರೆಲ್ಲರೂ ಸಂತೋಷದಿಂದ ಕೈಯಲ್ಲಿ ಗರಿಗಳನ್ನು ಹಿಡುಕೊಂಡು -“ಇಸ್ರಾಯೇಲ್ ರಾಜನಿಗೆ ಹೊಸನ್ನ ಹೊಸನ್ನ ” ಎಂದು ಕೂಗುತ್ತಾ ಮತ್ತು ಗೀತೆಗಳನ್ನು ಹಾಡುತ್ತಾ ದೇವಾಲಯ ದೊಳಗೆ ಪ್ರವೇಶಿಸಿದರು.
ಇದೇ ಸಂದರ್ಭದಲ್ಲಿ ಘನಭೋದಕರಾದ ಸಾಮುವೇಲ್ ಭಾಲೇಕರ್ ಚರ್ಚಿನ ಸದಸ್ಯರು ಚಿಕ್ಕವರು ಮೊದಲು ಗೊಂಡು ದೊಡ್ಡವರು ಭಾಗವಹಿಸಿದ್ದರು.