ಕಲ್ಯಾಣ ರಾಜ್ಯ ನಿರ್ಮಾಣ : ವಿಚಾರ ಸಂಕಿರಣ
ಕಲಬುರಗಿ,ಮಾ.25: ಜನರಂಗ ಹಾಗೂ ಸುಕಿ ಸಾಂಸ್ಕøತಿಕ ಸಂಸ್ಥೆ ಸಹಯೋಗದಲ್ಲಿ ನಗರದ ರಾಜಾಪುರದ ಬಡೇಪುರ ಬಡಾವಣೆಯ ಜನರಂಗ ಆಪ್ತರಂಗದಲ್ಲಿ ಕಲ್ಯಾಣ ರಾಜ್ಯ ನಿರ್ಮಾಣ ಎಂಬ ವಿಷಯದ ಮೇಲೆ ವಿಚಾರ ಸಂಕಿರಣ ಜರುಗಿತು.ನಮ್ಮ ಸಂವಿಧಾನ ಮತ್ತು ಆರೋಗ್ಯಕರ ಪ್ರಜಾಪಭುತ್ವ ಬಗ್ಗೆ ವಿಷಯ ಮಂಡಿಸಿದ ಪತ್ರಗಾರ ಇಲಾಖೆಯ ಸಹಾಯಕ ನಿರ್ದೇಶಕ ಡಾ ವೀರಶೆಟ್ಟಿ ಗಾರಂಪಳ್ಳಿಯವರು ಅಂಬೇಡ್ಕರ್ ಅವರ ಪ್ರಜಾತಂತ್ರವಾದ ನಡವಳಿಕೆಗಳನ್ನು ಅವರಿಗಾದ ಅಪಮಾನವಾದ ನೆಲೆಯಲ್ಲಿ ನೋಡದೆ ಸಂವಿಧಾನ ರಚಿಸುವ ಅವರ ಮಾನವತಾವಾದಿ ನಿಲುವುಗಳನ್ನು ಮುನ್ನಲೆಗೆ ತಂದು ನೋಡುವ ಅಗತ್ಯವಿದೆ ಮಾನವತಾವಾದಿ ನಿಲವುಗಾರಿಕೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರದ ನಿಲವುಗಳು ಎಂದು ಹೇಳಿದರು.
ಸಂವಿಧಾನ ಮತ್ತು ರಾಜಕೀಯ ಹಕ್ಕುಗಳು ಎಂಬ ವಿಷಯ ಮಂಡಿಸಿದ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ ಕಿರಣ ಗಾಜನೂರ ಅವರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಜನಸಾಮಾನ್ಯರ ಸಹಭಾಗಿತ್ವ ಒಂದು ಮೌಲ್ಯಾ ದರ್ಶದ ಸಾಧನೆಗಾಗಿ ಮಾಡಿದ ಮಹತ್ವದ ಚಳುವಳಿ.ಭಾರತೀಯ ಚಳುವಳಿಗಳಲ್ಲಿ ಮೂರು ಮುಖ್ಯ ಚಳುವಳಿಗಳು ಚಾರಿತ್ರಿಕ ಸತ್ಯ ಸಾರಿದವು. ಒಂದು ಸಾತಂತ್ರ್ಯ ಚಳುವಳಿ, ಸಂವಿಧಾನ ರಚನಾ ಚಳುವಳಿ, ಪ್ರಜಾ ಪ್ರಭುತ್ವದ ಆಶಯ ಸಂಸ್ಥೆಗಳ ಕಟ್ಟುವ ಚಳುವಳಿ-ಇದರಿಂದ ಜನಮುಖಿ ಚಿಂತನೆಗೆ ಕಾರಣವಾಯಿತು- ಇಂದು ಸಂವಿಧಾನ ಉಳಿಸುವ ಹಕ್ಕು ನಮ್ಮದಾಗಬೇಕು ಎಂದರು.ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ ಬಿ ಎಂ ಬಾಯಿನ್ ಅವರು ಅಧ್ಯಕ್ಷತೆವಹಿಸಿ ಮಾತನಾಡಿದರು. ಜನರಂಗದ ಪೋಷಕ ಡಾ ಎಸ್.ಎಸ್ ಗುಬ್ಬಿ ಮಾತನಾಡಿದರು. ಶಂಕರಯ್ಯ ಘಂಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.ಸಂವಾದ ಚರ್ಚೆಯಲ್ಲಿ ಎಚ್. ಎಸ್. ಬಸವಪ್ರಭು, ಡಾ ಅಪ್ಪುಗೆರೆ ಸೋಮಶೇಖರ, ಡಾ ಶಿವಗಂಗಾ ರುಮ್ಮಾ, ಎಂಬಿ ಸಜ್ಜನ ನಂದಪ್ಪ ರಾಮು ಕೆಂಭಾವಿ ಎಸ್.ಎಲ್ ಪಾಟೀಲ್ ಸಂಗನಗೌಡ ಅಸ್ವಿನಿ ಭದ್ರೆ, ಶಿವಯ್ಯ ವಿಜೇಯ ಲಕ್ಷ್ಮೀ ದೊಡ್ಡಮನಿ, ಬಾಬುರಾವ ಸಾಗರ ದತ್ತು ಉದಯಕರ ಡಿ ಎಂ ನದಾಪ್ ವಿಶ್ವನಾಥಭಕರೆ ಚಿತ್ರಶೇಖರ ಕಂಠಿ, ಆಶಾ,ನಯನಾ ಮುಂತಾದವರು ಪಾಲ್ಗೊಂಡಿದ್ದರು. ಆರಂಭದಲ್ಲಿ ಸಿದ್ದಣ ಅವಂಟಿ ಸುಮುಧುರ ಗೀತೆಗಳನ್ನು ಹಾಡಿದರು.ಸುಕಿ ಸಾಂಸ್ಕøತಿಕ ಸಂಸ್ಥೆ ಅಧ್ಯಕ್ಷ ಕಿರಣ ಪಾಟೀಲ ಪ್ರಾರ್ಥನಾಗೀತೆ ಹಾಡಿ ಕಾರ್ಯಕ್ರಮ ನಿರೂಪಿಸಿದರು.