ನೀತಿ ಸಂಹಿತೆ ಜಾರಿ ಹಿನ್ನೆಲೆ ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಭದ್ರತೆಯೊಂದಿಗೆ ತೀವ್ರ ತಪಾಸಣೆ
ಅಫಜಲಪುರ:ಮಾ.25: ಬರುವ ಲೋಕಸಭೆ ಚುನಾವಣೆ ಅಂಗವಾಗಿ ನೀತಿ ಸಂಹಿತೆ ಜಾರಿಯಾಗಿದ್ದು, ಚೆಕ್ ಪೆÇೀಸ್ಟ್ ಗಳಲ್ಲಿ ತಪಾಸಣೆ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಸರಕು ಸಾಗಣೆ ಮಾಡುವವರು ಸೂಕ್ತ ಕಾನೂನು ದಾಖಲೆಗಳನ್ನು ಹೊಂದಿರಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಸೂಚನೆಯ ಮೇರೆಗೆ ಪೆÇಲೀಸ್ ಸಿಬ್ಬಂದಿಗಳು ತೀವ್ರ ತಪಾಸಣೆ ಕೈಗೊಂಡಿದ್ದಾರೆ.
ಅಫಜಲಪುರ ತಾಲೂಕಿನ ಆರಕ್ಷಕ ವೃತ್ತ ನಿರೀಕ್ಷಕರ ವ್ಯಾಪ್ತಿಯಲ್ಲಿ 6 ಚೆಕ್ ಪೆÇೀಸ್ಟ್ ಗಳನ್ನು ನಿರ್ಮಿಸಲಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ಅಂತರ್ ರಾಜ್ಯ ಹೆದ್ದಾರಿಯಲ್ಲಿ 4 ಚೆಕ್ ಪೆÇೀಸ್ಟ್ ಗಳು ಹಾಗೂ ವಿಜಯಪುರ ಮತ್ತು ಕಲಬುರಗಿ ಅಂತರ್ ಜಿಲ್ಲಾ ಸಂಪರ್ಕಿಸುವ ಸೊನ್ನ ಹೆದ್ದಾರಿಯಲ್ಲಿ 1 ಚೆಕ್ ಪೆÇೀಸ್ಟ್ ಮತ್ತು ಕಲಬುರಗಿ ಜಿಲ್ಲೆಗೆ ಸಂಪರ್ಕಿಸುವ ಚವಡಾಪುರ ಹೆದ್ದಾರಿಯಲ್ಲಿ 1 ಚೆಕ್ ಪೆÇೀಸ್ಟ್ ನಿರ್ಮಿಸಲಾಗಿದ್ದು ಒಟ್ಟು 30 ಜನ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಎಲ್ಲ ಚೆಕ್ ಪೆÇೀಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಸಿಪಿಐ ಚನ್ನಯ್ಯ ಹಿರೇಮಠ ಅವರು ಮಾತನಾಡಿ, ಸರಕು ವಾಹನ ತಪಾಸಣೆ ವೇಳೆ ಮಾಲೀಕರು ಅಥವಾ ಸರಕು ಸಾಗಣೆದಾರರು ಜಿ.ಎಸ್.ಟಿ ಬಿಲ್ ಮತ್ತು ಇತರೆ ದಾಖಲೆಗಳನ್ನು ಇಟ್ಚುಕೊಂಡಿರುವುದು ಅತ್ಯಗತ್ಯವಾಗಿದೆ. ವಸ್ತುವನ್ನು ಖರೀದಿಸಿದ ಸ್ಥಳ, ಉದ್ದೇಶ ಸೇರಿದಂತೆ ಇತರೆ ದಾಖಲೆಗಳನ್ನು ಇಟ್ಟುಕೊಂಡಿರಬೇಕು.
ವಾಣಿಜ್ಯ ಬಳಕೆಗೆ, ಇ-ವೇ ಬಿಲ್ ಕಡ್ಡಾಯವಾಗಿದೆ. ಇದು ವಾಣಿಜ್ಯ ತೆರಿಗೆ ಇಲಾಖೆಯಿಂದ ನೀಡಲಾಗುವ ಎಲೆಕ್ಟ್ರಾನಿಕ್ ಬಿಲ್ ಆಗಿದೆ. ಕೃಷಿ ಉತ್ಪನ್ನಗಳಿಗೆ, ಯಾವುದೇ ಇ-ವೇ ಬಿಲ್ ಅಗತ್ಯವಿಲ್ಲ, ಆದರೆ ಹಣಕಾಸಿನ ವಹಿವಾಟಿನ ವಿವರಗಳನ್ನು ಪ್ರಮಾಣೀಕರಿಸುವ ಇತರ ಕಾನೂನು ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಅಂಗಡಿ ಅಥವಾ ಕಾರ್ಖಾನೆ ಇದ್ದರೆ, ಡೀಲರ್ ಗಳ ವಿವರಗಳು, ತಯಾರಕರ ವಿವರ, ಗುಣಮಟ್ಟ ಮತ್ತು ವಾಹನದ ವಿವರಗಳು ಅಗತ್ಯವಿರುತ್ತದೆ ಎಂದು ಹೇಳಿದ್ದಾರೆ.
ಚುನಾವಣೆಗೆ ಭದ್ರತೆ ಮುಖ್ಯವಾಗಿದ್ದು, ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳು ಪ್ರತಿ ಟ್ರಕ್ ಮತ್ತು ಸಾಗಣೆದಾರರು, ಸರಕು ಮತ್ತು ಇತರ ವಸ್ತುಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಪರವಾನಿಗೆ ಮತ್ತು ಸರಿಯಾದ ದಾಖಲೆಗಳಿಲ್ಲದ ಯಾವುದೇ ಲಾರಿ ಅಥವಾ ಸರಕುಗಳ ವಾಹನವನ್ನು ವಶಕ್ಕೆ ಪಡೆಯಲಾಗುವುದು.
ಮರಳು, ಕಲ್ಲುಗಳು, ಟೈಲ್ಸ್ ಮತ್ತು ಇತರ ನಿರ್ಮಾಣ ಸಾಮಗ್ರಿಗಳ ಸಾಗಣೆಯ ಸಂದರ್ಭದಲ್ಲಿ, ಐಎಲ್ ಸಂಖ್ಯೆಯನ್ನು ವಿವರಿಸುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ರಾಯಲ್ಟಿ ಪ್ರಮಾಣಪತ್ರವನ್ನು ಹೊಂದಿರುವುದು ಅತ್ಯಗತ್ಯ. ಇದರಲ್ಲಿ ಸ್ಥಳದ ವಿವರಗಳೊಂದಿಗೆ ವಸ್ತುಗಳ ಪ್ರಮಾಣ, ಪ್ರಯಾಣದ ಸಮಯವನ್ನು ಒಳಗೊಂಡಿರಬೇಕು ಹಾಗೂ ಒಂದು ವೇಳೆ ಹಣ ಸಾಗಿಸುತ್ತಿದ್ದರೆ ಅದಕ್ಕೆ ಅಗತ್ಯ ದಾಖಲೆ ನೀಡಬೇಕು ಎಂದು ಮಾಹಿತಿ ನೀಡಿದ ಅವರು ವಾಹನ ಚಾಲಕರು ನಮ್ಮ ಸಿಬ್ಬಂದಿಗಳಿಗೆ ತಪಾಸಣೆ ವೇಳೆ ಸಹಕರಿಸಬೇಕು ಎಂದು ತಿಳಿಸಿದ್ದಾರೆ.