ರೇಣುಕಾಚಾರ್ಯರ ತತ್ವ-ಸಿದ್ಧಾಂತಗಳು ಎಲ್ಲ ಕಾಲಕ್ಕೂ ಪ್ರಸ್ತುತ : ಸಾಗರ ಪಾಟೀಲ
ಔರಾದ್:ಮಾ.25: ಮಾನವ ಧರ್ಮಕ್ಕೆ ಜಯವಾಗಲಿ. ಮಾನವ ಧರ್ಮದಿಂದ ಸದೃಢ ಸಮಾಜ ಕಟ್ಟಲು ಅಸಾಧ್ಯವೆಂದು ಸಾರಿದ ರೇಣುಕಾಚಾರ್ಯರ ತತ್ವ, ಸಿದ್ಧಾಂತಗಳು ಎಲ್ಲ ಕಾಲಕ್ಕೂ ಪ್ರಸ್ತುತ, ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮುಖಂಡ ಸಾಗರ ಪಾಟೀಲ ಕೊಳ್ಳೂರ ಹೇಳಿದರು.
ತಾಲ್ಲೂಕಿನ ಕೊಳ್ಳೂರ ಗ್ರಾಮದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೆ ವಿಶ್ವಕ್ಕೆ ಶಾಂತಿ ಎಂಬ ಸಂದೇಶವನ್ನು ರೇಣುಕಾಚಾರ್ಯರು ಸಾರಿದ್ದಾರೆ. ಎಲ್ಲ ಧರ್ಮದವರು ಸಾಮರಸ್ಯದಿಂದ ಬದುಕಬೇಕು ಎಂದು ಹೇಳಿದರು.
ವಿಶ್ವನಾಥ್ ಸ್ವಾಮಿ ಮಾತನಾಡಿ, ಧರ್ಮ ಸ್ಥಾಪಕ ಆದಿ ಜಗದ್ಗುರು ರೇಣುಕಾಚಾರ್ಯರು ಬೋಧಿಸಿರುವ ತತ್ವ-ಸಿದ್ಧಾಂತಗಳು ಕೇವಲ ಬೋಧನೆಗೆ ಸೀಮಿತವಾಗದೆ ಸಮಾಜದ ಸುಧಾರಣೆಗೆ ಸೋಪಾನವಾಗಿವೆ. ರೇಣುಕಾಚಾರ್ಯರು ಯಾವುದೇ ಜಾತಿ, ಮತ-ಪಂತ ನೋಡದೆ ಮಾನವ ಧರ್ಮಕ್ಕೆ ಜಯವಾಗಲಿ ಎಂದವರು, ದೇಶ, ಸಮಾಜಕ್ಕೆ ಅವರು ನೀಡಿರುವ ಕೊಡುಗೆ ಸ್ಮರಣೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಶಿನಾಥ ಧಬಡೆ, ಶಿವಲಿಂಗಯ್ಯ ಸ್ವಾಮಿ, ರಾಜಕುಮಾರ ಹೋನ್ನಶಟ್ಟೆ, ರಾಜಕುಮಾರ ಧಬಡೆ, ಬಸವರಾಜ ಹೊನ್ನಶಟ್ಟೆ, ಸಿದ್ದಪ್ಪ ಫುಲಾರಿ, ಕಾಶಿನಾಥ ಸ್ವಾಮಿ, ಕಲ್ಲಯ್ಯ ಸ್ವಾಮಿ, ಈಶ್ವರ ಧಬಡೆ, ನಿಲಯ್ಯ ಸ್ವಾಮಿ, ಶ್ರೀಕಾಂತ ಸ್ವಾಮಿ, ಶಿವಕಾಂತ್ ಸ್ವಾಮಿ, ನಾಗೇಶ ಮಜಗೆ, ಮಹಾದೇವ ಕುಣಕೆರೆ, ಗುರುಚರಣ ಸ್ವಾಮಿ, ಚಂದ್ರಕಾಂತ ಹೊನ್ನಶಟ್ಟೆ ಇದ್ದರು.