ಕಾಯಕದಲ್ಲಿ ಕೈಲಾಸ ಕಂಡ ಶರಣ ನುಲಿಯ ಚಂದಯ್ಯ:ಡಿ.ಎಸ್. ಪಾಟೀಲ
ವಿಜಯಪುರ,ಮಾ.25:ಬಸವಣ್ಣನವರ ಸಮಕಾಲೀನ ವಚನ ಕಾರರಲ್ಲಿ ನುಲಿಯ ಚಂದಯ್ಯನವರು ಒಬ್ಬ ಶ್ರೇಷ್ಠ ಕಾಯಕ ನಿಷ್ಠೆ ಯ ಶರಣರು. ಗುರು – ಲಿಂಗ – ಜಂಗಮದಲ್ಲಿ ಅಪಾರ ನಿಷ್ಠೆ ಯುಳ್ಳವರಾಗಿದ್ದರು ಎಂದು ಹಿರಿಯ ನ್ಯಾಯವಾದಿ ಡಿ. ಎಸ್. ಪಾಟೀಲ ಹೇಳಿದರು.
ನಗರದ ಚಾಲುಕ್ಯ ನಗರ ಬಡಾವಣೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಜಿಲ್ಲಾ, ಕದಳಿ ವೇದಿಕೆ ಮತ್ತು ಯುವ ಘಟಕ ಹಾಗೂ ವರಸಿದ್ಧಿ ವಿನಾಯಕ ಮಹಿಳಾ ಭಜನಾ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಲಿಂ. ಶಿವಲಿಂಗಮ್ಮ. ಪರಪ್ಪ. ಮತ್ತು. ಲಿಂ. ಶಾಂತಾ ದೇವಿ.ಮಲ್ಲೇಶಪ್ಪ. ಸಜ್ಜನ ಹಾಗೂಲಿಂ. ಶಂಕರಗೌಡ, ಶರಣಪ್ಪ ಗೌಡ ಇವರ ಸ್ಮರಣಾರ್ಥ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮ ದಲ್ಲಿ ನುಲಿಯ ಚಂದಯ್ಯ ಕಾಯಕ ನಿಷ್ಠೆ ಕುರಿತು ಉಪನ್ಯಾಸ ನೀಡಿದ ಅವರು, ಕಾಯಕ ಮತ್ತು ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿದವರಲ್ಲಿ ನುಲಿಯ ಚಂದಯ್ಯನವರು ಪ್ರಮುಖ ರು. ಮೆದೆ ಹುಲ್ಲಿನ ಹಗ್ಗ ಮಾಡಿ ಅದನ್ನು ಹೊಸೆದು ಮಾರುವ ಕಾಯಕ ಮಾಡುತ್ತಿದ್ದರು. ಅದರಿಂದ ಬಂದ ಆದಾಯದಿಂದ ದಾಸೋಹ ಸೇವೆ ಮಾಡುತ್ತಿದ್ದರು. ‘ಚಂದೇಶ್ವರ ಲಿಂಗ ‘ ಎಂಬ ಅಂಕಿತದಲ್ಲಿ 48 ವಚನಗಳು ಲಭ್ಯ ಇವೆ ಎಂದು ಪಾಟೀಲ ತಿಳಿಸಿದರು
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಶ್ರೀ ಮ.ಗು. ಯಾದವಾಡ ಅವರು ಮಾತನಾಡಿ, 12ನೇ ಶತಮಾನದ ಬಸವಾದಿ ಶರಣರ ತತ್ವ ಆದರ್ಶಗಳನ್ನ ಪ್ರತಿಯೊಬ್ಬರ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅವರ ಚಿಂತನೆಗಳು ಸರ್ವಕಾಲಕ್ಕೂ ಸಲ್ಲುವಂತಹ ಮೌಲ್ಯಗಳು ಆಗಿವೆ ಎಂದು ಹೇಳಿದರು
ಅಧ್ಯಕ್ಷತೆ ವಹಿಸಿದ ಶಕುಂತಲಾ ಹಿರೇಮಠ ಅವರು ಮಾತನಾಡಿ, ಲೋಕದ ಡೊಂಕನ್ನು ತಿದ್ದುವ ಬದಲು ನಮ್ಮನ್ನು ನಾವು ತಿದ್ದುಕೊಳ್ಳುವಂತಹ ಪ್ರಯತ್ನವನ್ನು ಮಾಡಬೇಕು ಎಂದರು
ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷರಾದ ಡಾ. ಉಷಾ ದೇವಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಬಹುದೊಡ್ಡ ಕನಸಿನ ಸಂಕಲ್ಪದ ಕೂಸಾದ ಶರಣ ಸಾಹಿತ್ಯ ತತ್ವ ಪ್ರಸಾರದ ಕಾರ್ಯ ನಾಡಿನದ್ಯಂತ ತುಂಬಾ ಕ್ರಿಯಾಶೀಲವಾಗಿ ಅನೇಕ ವಿನುತನವಾಗಿರುವಂತ ಕ್ರಿಯಾಶೀಲ ಚಟುವಟಿಕೆಗಳನ್ನ ಹಮ್ಮಿಕೊಳ್ಳುತ್ತ,ಜನರ ಮನೆ -ಮನಸುಗಳನ್ನು ತಲುಪಿಸಿ, ಬಸವಾದಿ ಶರಣರ ವಚನಗಳನ್ನು ಪ್ರತಿಯೊಬ್ಬರಿಗೂ ತಲುಪಿಸುತ್ತಾ, ಮಹಿಳೆಯರನ್ನು ಶರಣ ಸಂಸ್ಕøತಿಯ ಚಿಂತನೆಗಳತ್ತ, ವೈಚಾರಿಕ ಚಿಂತನೆಗಳನ್ನು ಅರಹುತ್ತ ಸಮಾಜದಲ್ಲಿ ಪ್ರಗತಿಯನ್ನು ಸಾಧಿಸಿದೆ ಎಂದು ಹೇಳಿದರು ಡಾ. ವಿ.ಎಸ್ ಮಳಗಿ, ಪದ್ಮಜಾ ಪಾಟೀಲ, ಪ್ರಭಾವತಿ ರೆವಡಿಗಾರ, ರಾಜೇಶ್ವರಿ ಹಟಗಾರ, ಸುಜಾತ ಕರ್ಪೂರ ಮಠ, ಜ್ಯೋತಿ ಕೋರಿ, ಪಾರ್ವತಿ ಏಳಗಿ, ಪರಶುರಾಮ ಪೆÇೀಳ, ಜಯಶ್ರೀ ಸಜ್ಜನ, ಸುಜಿತ್ ಪಾಟೀಲ ಉಪಸ್ಥಿತರಿದ್ದರು.
ಪದ್ಮಜಾ ಪಾಟೀಲ ಮತ್ತು ತಂಡದವರು ಪ್ರಾರ್ಥನ ಗೀತೆಯನ್ನು ಹಾಡಿದರು. ಪೆÇ್ರ. ಅಮರೇಶ ಸಾಲಕ್ಕಿ ನಿರೂಪಿಸಿದರು.