ಲೋಕಸಭಾ ಚುನಾವಣೆ ಪ್ರಯುಕ್ತ: ಪೊಲೀಸ್ ಪಥಸಂಚಲನ
ಕೊಲ್ಹಾರ:ಮಾ.25: ಲೋಕಸಭಾ ಚುನಾವಣಾ ಘೋಷಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಆದಾಗಿನಿಂದ ಯಾವುದೇ ಅಹಿತಕರ ಘಟನೆಗಳು ಜರುಗದೆ ಶಾಂತಿ,ಸೌಹಾರ್ದತೆಯಿಂದ ಚುನಾವಣೆಗಳು ನಡೆಯಬೇಕು ಎಂಬ ಜಾಗೃತಿಯನ್ನು ಮೂಡಿಸುವ ಸಲುವಾಗಿ ಪಟ್ಟಣ ಪೆÇಲೀಸ್ ಠಾಣೆಯ ಪಿಎಸ್‍ಐ ಪ್ರವೀಣ್ ಗರೇಬಾಳ ನೇತೃತ್ವದಲ್ಲಿ ರವಿವಾರ ಸಂಜೆ ಪಥಸಂಚಲನ ನಡೆಯಿತು.
ಬಸವನ ಬಾಗೇವಾಡಿ ಉಪ ವಿಭಾಗದ ಡಿವೈಎಸ್‍ಪಿ ಬಲ್ಲಪ್ಪಾ ನಂದಗಾವ್ ಮತ್ತು 60ಕ್ಕೂ ಹೆಚ್ಚು ಕೇಂದ್ರೀಯ ರಿಸರ್ವ್ ಪೆÇಲೀಸ್ ಪಡೆ ಹಾಗೂ ಪಟ್ಟಣದ ಪೆÇಲೀಸ್ ಠಾಣೆಯ ಸಿಬ್ಬಂದಿಗಳು ವಿವಿಧ ವೃತ್ತಗಳ ಮೂಲಕ ಹಾದು ಪಥಸಂಚಲನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.