ಸಮಗ್ರ ಕವನ ಪ್ರಕಟವಾಗಲಿ
ಹುಬ್ಬಳ್ಳಿ, ಮಾ25: ದಿ.ವಾಲಿಯವರ ಸಮಗ್ರ ಕವನ ಪ್ರಕಟವಾಗಲಿ ಎಂದು ಹುಬ್ಬಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿರುಪಾಕ್ಷ ಕಟ್ಟಿಮನಿ ಹೇಳಿದರು.
ನುಡಿ ಕನ್ನಡ ಬಳಗದ ವತಿಯಿಂದ ದಿ.ಸುಪ್ರಭಾತ ಕವಿ ಗಂಗಪ್ಪ ವಾಲಿಯವರ ಜನ್ಮ ದಿನಾಚರಣೆ ಆಚರಿಸಲಾಯಿತು.
ನುಡಿ ಕನ್ನಡ ಬಳಗದ ಅಧ್ಯಕ್ಷ ಏಕನಾಥ ಕಲಬುರ್ಗಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಹೂಲಿ, ಮೃತ್ಯುಂಜಯ ಕಮಡೊಳ್ಳಿ ಉಪಸ್ಥಿತರಿದ್ದರು. ಕುಮಾರಿ ನಂದಿತಾ ಕಲಬುರ್ಗಿ, ಕಾರ್ಯಾಧ್ಯಕ್ಷ ವೀರಣ್ಣ ಹೂಲಿ ವಂದಿಸಿದರು.