ಜೀನಿಯಸ್ ಟ್ಯಾಲೇಂಟ್ ಅವಾರ್ಡ್ ಪರೀಕ್ಷೆಯ ಬಹುಮಾನ ವಿತರಣೆ
ಮುದ್ದೇಬಿಹಾಳ: ಮಾ.25:ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್, ಮಠ್ಸ್ ಶಿಕ್ಷಣ ಸಮೂಹ ಸಂಸ್ಥೆಯಲ್ಲಿ ಭಾನುವಾರ ಸಿಬಿಎಸ್ಇ 10 ನೇ ತರಗತಿ ವಿದ್ಯಾರ್ಥಿಗಳ ಜೀನಿಯಸ್ ಟ್ಯಾಲೇಂಟ್ ಅವಾರ್ಡ್ ಪರೀಕ್ಷೆಯ ಬಹುಮಾನ ವಿತರಣಾ ಸಮಾರಂಭ ನಡೆಯಿತು.
ಈ ವೇಳೆ ನಾಗರಬೆಟ್ಟ ಆಕ್ಸಫರ್ಡ್, ಮಠ್ಸ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಬಿ ಜಿ ಮಠ ಅವರು ಮಾತನಾಡಿ ಹಿಂದಿನ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ಬಹಳ ವ್ಯತ್ಯಾಸವಿದೆ ಹಿಂದೆ ಶಿಕ್ಷಣ ಪಡೆದುಕೊಳ್ಳಬೇಕೇಂದರೆ ಅಷ್ಟೋಂದು ಸೌಲಭ್ಯಗಳಿರಲಿಲ್ಲ ಆದರೇ ಇಂದು ಸಾಕಷ್ಟು ಸೌಲಭ್ಯಗಳಿವೆ ಆದರೇ ವಿದ್ಯಾರ್ಥಿಗಳ ಪರಿಶ್ರಮ ಬಹಳ ಪ್ರಮುಖವಾಗಿದೆ.
ಇಂದಿನ ಆಧುನಿಕ ತಂತ್ರಜ್ಞಾನ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಾಲೆಯಲ್ಲಿ ಗುರುಗಳು ಬೋಧನೆ ಮಾಡುವಾಗ ಶೃದ್ಧಾಭಕ್ತಿಯಿಂದ ಕೇಳಿ ಗುಣಮಟ್ಟ ಶಿಕ್ಷಣ ಪಡೆದುಕೊಳ್ಳುವ ಮೂಲಕ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ಸಧ್ಯ ಮಕ್ಕಳ ಸಾಮಥ್ರ್ಯಕ್ಕೆ ತಕ್ಕಂತೆ ಶಿಕ್ಷಣ ನೀಡಲು ನಮ್ಮ ನಾಗರಬೆಟ್ಟ ಆಕ್ಸಫರ್ಡ ಮಠ್ಸ್ ಶಿಕ್ಷಣ ಸಮೂಹ ಸಂಸ್ಥೆಯು ಜೀನಿಯಸ್ ಅವಾರ್ಢ ಆಯೋಜಿಸುವ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ವಿದ್ಯಾರ್ಥಿಗಳಲ್ಲಿ ಚೈತನ್ಯ ತುಂಬುವ ಉದ್ದೇಶ ಇದಾಗಿದೆ.
ವಿದ್ಯಾರ್ಥಿಗಳು ಸದ್ಯ ತಾವು ಪಾಸಾಗಲಿಲ್ಲ ಎಂಬ ಕೊರಗು ತಮ್ಮ ಮನಸ್ಸಲ್ಲಿ ಬರಬಾರದು ಸೋಲು ಯಾವುತ್ತಿಗೂ ಗೆಲುವಿನ ಸ್ಪೂರ್ತಿಯಾಗಿದೆ ಎಂಬುದನ್ನು ಅರಿತುಕೊಂಡು ಗುಣಮಟ್ಟ ಶಿಕ್ಷಣದತ್ತು ಮುಂದೆ ಸಾಗಬೇಕು ಎಂದರು.
ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಸ್ಪರ್ಧೆಯಲ್ಲಿ ಒಟ್ಟು 1300 ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳು ಬಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.
5ನೇತರಗತಿಯಲ್ಲಿ ಪ್ರಥಮ ಸ್ಥಾನವನ್ನು ವಿದ್ಯಾರ್ಥಿ ಪ್ರವೀಣ ಹುಡೇದ(ನಾಗಬೇನಾಳ) 20ಸಾವಿರ ನಗದು ಬಹುಮಾನ ,ದ್ವೀತಿಯ ಸ್ಥಾನ ರಾಹುಲ ಪಾಟೀಲ (ಪಡೇಕನೂರ) 15 ಸಾವಿರ ನಗದು ಬಹುಮಾನ, ತೃತೀಯ ಸ್ಥಾನ ತನಿಷ್ಕಾ ಬಿಜ್ಜೂರ, ಮುದ್ದೇಬಿಹಾಳ 10ಸಾವಿರ ನಗದು ಬಹುಮಾನ, ಚತುರ್ಥಿ ಸ್ಥಾನ ನಾಗಮ್ಮ ಸಾಗರ( ಯರಗುಂಟಿ) 5ಸಾವಿರ ನಗದು ಬಹುಮಾನ, 6ನೇತರಗತಿಯಲ್ಲಿ ಪ್ರಥಮ ಸ್ಥಾನ ಚೈತನ್ಯ ಮುತ್ತಣ್ಣನವರ (ನಿಡಗುಂದಿ)ದ್ವೀತಿಯ ಸ್ಥಾನ ಸುಧಿ ಬಿರಾದಾರ(ಮುದ್ದೇಬಿಹಾಳ) ಸ್ಥಾನ ಗಂಗಾ ಮುರಾಳ(ನಾಗರಬೆಟ್ಟ) ಸ್ಥಾನ ಶ್ರಾವ್ಯಾ ಮಠ(ಮುದ್ದೇಬಿಹಾಳ) ಶ್ರೀನಿಧಿ ಮಾಶೇಟ್ಟಿ(ಮುದ್ದೇಬಿಹಾಳ) ಅಮೃತಾ ಬಿರಾದಾರ (ಮುತ್ತಗಿ) ತೃತೀಯ ಪ್ರೇರಣಾ ಬೆಳಗಲ್ಲ(ಮುದ್ದೇಬಿಹಾಳ) ಅಮೃತಾ ಕರೇಕಲ್(ಗೆದ್ದಲಮರಿ,) ಶ್ರೇಯಸ್ ಪೂಜಾರಿ(ಮುದ್ದೇಬಿಹಾಳ) ಭವ್ಯಾ ಬಿರಾದಾರ(ಶಿವಪೂರ) ಶಂಕರ ನಾಯಕ(ಹಿರೇಹುಪ್ಪೇರಿ) ರವಿ ಬಿರಾದಾರ(ನಡಹಳ್ಳಿ) 7ನೇತರಗತಿಯಲ್ಲಿ ಪ್ರಥಮ ಸ್ಥಾನ ಪ್ರತೀಕ್ಷಾ ಬಿ ಸಜ್ಜನ (ಕುಂಟೋಜಿ) ದ್ವೀತಿಯ ಸ್ಥಾನ ಅಮೋಘ ಎಂ ಮನಹಳ್ಳಿ(ತಂಗಡಗಿ) ತೃತೀಯ ಸ್ಥಾನ ಭುವನ ವಿ ಮಾಶೇಟ್ಟಿ(ಮುದ್ದೇಬಿಹಾಳ) ಚತುರ್ಥಿ ಸ್ಥಾನ ಶಿವರಾಜ ಹೆಬ್ಬಾಳ, ಅಶೋಕ ಶಿ ನಾಲತವಾಡ (ಮುದ್ದೇಬಿಹಾಳ) 8ನೇ ತರಗತಿಯಲ್ಲಿ ಪ್ರಥಮ ಸ್ಥಾನ ಸಿಂಧೂ ಎಸ್ ಕರನಾಳ(ವಿಜಯಪುರ) ತೃತೀಯ ಸ್ಥಾನ ಪ್ರತಿಭಾ ಡಂಬಳ (ತಾಳಿಕೋಟಿ) ಸಂಗಮೇಶ ಬಗಲಿ(ವಿಜಯಪುರ) ಚತುರ್ಥಿ ಸ್ಥಾನ ಸಂದೀಪ ಅಂಬ್ಯಾಳ (ತಾಳಿಕೋಟಿ) ಅರ್ಪೀತಾ ತುಂಬಗಿ (ಮಡಿಕೇಶ್ವರ) ಪ್ರೇರಣಾ ಕುಲಕರ್ಣಿ (ನಾಲತವಾಡ) 9ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪವನಕುಮಾರ ಬಿರಾದಾರ(ಶಿವಪೂರ) ಸಾನಿಕ ಭಂಗಿ(ನಾಲತವಾಡ) ಸಚೀನ ಸಜ್ಜನ (ನಾಲತವಾಡ) ದ್ವೀತಿಯ ಸ್ಥಾನ ಕಾರ್ತೀಕ ಕನಕರೆಡ್ಡಿ(ತಾಳಿಕೋಟಿ) ವಸಂತಗೌಡ ಬಂಗಾರಗುಂಡ(ಯರಗಲ್ಲ) ತೃತೀಯ ಸ್ಥಾನ ಶ್ರೇಯಾ ಬ ಕಟ್ಟಿ(ಮುದ್ದೇಬಿಹಾಳ) ಅಬ್ಧುಲಖಾದರ ವಾಲಿಕಾರ(ಬ, ಬಾಗೇವಾಡಿ) ನಾಗರತ್ನಾ ಬಡದಾನಿ, ಎಸ್ ಎಸ್ ಎಲ್ ಸಿ ತರಗತಿಯಲ್ಲಿ ಸೃಷ್ಠಿ ನ್ಯಾಮಣ್ಣವರ (ವಿಜಯಪುರ) ದ್ವೀತಿಯ ಸ್ಥಾನ ಭೂಮಿ ವಾಲಿ(ನಾಲತವಾಡ) ಮಹಮ್ಮದ ಮರಿನಾಳ(ಶಿರೋಳ) ತುನುಶ್ರೀ ವಾಲಿಕಾರ(ನಾಲತವಾಡ) ಸೃಷ್ಠಿ ದೇಸಾಯಿ (ವಿಜಯಪುರ)ತೃತೀಯ ಸ್ಥಾನ ಅನ್ವೇಶ ಡಿಗ್ಗಿ,(ನಾಲತವಾಡ) ಚತುರ್ಥಿ ಸ್ಥಾನ ರಕ್ಷೀತ ತಳವಾರ( ಹಿರೂರ) ನ್ನೂಳಿದ 7 ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನಕ್ಕೆ ತೃಪ್ತಿಯಾದರು.
ಈ ವೇಳೆ ಜೀನಿಯಸ್ ಟ್ಯಾಲೇಂಟ್ ಅವಾರ್ಢದ ಮಾರ್ಗದರ್ಶಕ ಕುಮಾರ ಬೆಂಗಳೂರ, ಶರಣರಾದ ಬಸವಪ್ರಭು ಹಿರೇಮಠ, ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶಿವಾನಂದ ಮೇಟಿ, ಶಿಕ್ಷಕ ವಿ ಎಚ್ ಮಳಗಿ, ಅಂಚೆ ಇಲಾಖೆಯ ಕುಮಾರಸ್ವಾಮಿ ಹಿರೇಮಠ, ಶಿಕ್ಷಕ ಟಿ ಡಿ ಲಮಾಣಿ, ಹೀರೂ ನಾಯಕ ನಿರೂಪಿಸಿದರು, ಶಿವಯ್ಯ ಮಠ ವಂದಿಸಿದರು