ಏಳು ಬಣ್ಣಗಳಿಂದ ನವೊಲ್ಲಾಸಗಳು ತುಂಬಿ ಬರಲಿ
ಬೀದರಃಮಾ.25: ನಮ್ಮ ಭಾರತೀಯ ಸಂಸ್ಕøತಿ, ಸಂಪ್ರದಾಯದ ಪ್ರಕಾರ ವರ್ಷದ ಪ್ರಥಮ ಮತ್ತು ನೂತನÀ ಹಬ್ಬ ಯುಗಾದಿಯಾದರೆ ಕೊನೆಯ ವರ್ಷ ಹೋಳಿ ಹಬ್ಬವಾಗಿದೆ. ಈ ಹೋಳಿಯ ಹಬ್ಬದ ಕಾಮಹದನದ ಬೆಂಕಿಯಲ್ಲಿ ನಮ್ಮೆಲ್ಲರ ಸಿಟ್ಟು ಸಿಡುಕು, ದುರಾಚಾರ, ಅಹಂಕಾರಗಳೆಲ್ಲವೂ ಸುಟ್ಟುಹೋಗಲಿ, ನಮ್ಮೆಲ್ಲರ ಬದುಕಿನಲ್ಲಿ ಉಲ್ಲಾಸದ ಕೆಂಪು, ಸಮೃದ್ಧಿಯ ಹಸಿರು, ಸಂಭ್ರಮದ ಹಳದಿ, ಸಂತೋಷದ ಗುಲಾಬಿ, ಸಂಪತ್ತಿನ ನೇರಳೆ, ಜ್ಞಾನದ ಕೇಸರಿ, ಧನಾತ್ಮಕತೆಯ ನೀಲಿ ಈ ಏಳು ಬಣ್ಣಗಳಿಂದ ನವೋಲ್ಲಾಸಗಳು ತುಂಬಿ ಬರಲಿ, ಸರ್ವರ ಬಾಳು ಆನಂದಮಯವಗಿರಲಿ ಎಂದು ಸೂರ್ಯ ನಮಸ್ಕಾರ ಸಂಘದ ಅಧ್ಯಕ್ಷರಾದ ಕಮಶೆಟ್ಟಿ ಚಿಕಬಸೆ ಅವರು ನುಡಿದರು.
ಅವರು ನಗರದ ಬಿವಿಬಿ ಕಾಲೇಜಿನ ಆವರಣದಲ್ಲಿ ಸೂರ್ಯ ನಮಸ್ಕಾರ ಸಂಘವುÀ ಆಯೋಜಿಸಿದ ಹೋಳಿ ಹಬ್ಬ ಆಚರಣೆಯಲ್ಲ್ಲಿ ಮಾತನಾಡುತ್ತ ಸರ್ವರಿಗೂ ಹೋಳಿ ಹಬ್ಬದ ಶುಭ ಕೋರಿದರು.
ಈ ಹೋಳಿ ಹಬ್ಬ ಆಚರಣೆಯಲ್ಲಿ ಸೂರ್ಯ ನಮಸ್ಕಾರ ಸಂಘದ ಪದಾಧಿಕಾರಿಗಳಾದ ಅನೀಲ ಸೋರಳಿಕರ್, ಸಂತರೋಷ ಬೆಲ್ದಾಳೆ, ಸತ್ಯಪ್ರಕಾಶ, ಶ್ರೀಧರ ಜಾಧವ, ಶೀವರಾಜ, ಹರಿಪ್ರಸಾದ, ನವನೀತ ಪಾಟೀಲ, ಪ್ರದೀಪ ಪಾಂಚಾಳ, ಅನೀಲ, ಲೋಕೇಶ, ಶಿವಕುಮಾರ ಬಿರಾದಾರ, ಮಲ್ಲಿಕಾರ್ಜುನ ಧಾಬಕೆ, ಬಸವರಾಜ ಬುಳ್ಳಾ, ಬಸವರಾಜ ದಾನಿ, ವಿಜಯಕುಮಾರ ಜಾಧವ, ಸಂತೋಷ ಶೇರಿಕಾರ, ನಾಗರಾಜ ರಾಗಾ, ಬಳವಂತರೆಡ್ಡಿ, ಬಸವರಾಜ ಕರಪೂರ, ನಾಗಭೂಷಣ, ದತ್ತು, ಮನೋಹರ ರಾಥೋಡ, ಸುರೇಶ ಲಕ್ಕಶೆಟ್ಟಿ, ರಾಜಶೇಖರ ಪಾಟೀಲ, ಭದ್ರ ಸ್ವಾಮಿ, ಜಿ. ಎಂ. ಮರಕಲೆ, ಸೇರಿದಂಂತೆ ಮತ್ತಿತರರು ಭಾಗವಹಿಸಿ ಪರಸ್ಪರ ಶುಭ ಕೋರುವ ಮೂಲಕ ಹೋಳಿ ಹಬ್ಬದ ಸಂದೇಶ ರವಾನಿಸಿದರು.