ಜಾತಿ ನಿಂದನೆ ಹಿನ್ನೆಲೆ ಬಹಿರಂಗ ಕ್ಷಮೆಗೆ ಆಗ್ರಹ
ಅಫಜಲಪುರ:ಮಾ.25: ಜಿ.ಪಂ ಮಾಜಿ ಸದಸ್ಯ ತುಕಾರಾಮಗೌಡ ಪಾಟೀಲ ಬಾಸಗಿ ಅವರು ಬಂಜಾರ ಸಮುದಾಯಕ್ಕೆ ಜಾತಿ ನಿಂದನೆ ಮಾಡುವ ಮೂಲಕ ಬಂಜಾರಾ ಸಮುದಾಯದ ಜನರಿಗೆ ನೋವುಂಟು ಮಾಡಿದ್ದಾರೆ. ಅವರ ಹೇಳಿಕೆ ಇಡೀ ಬಂಜಾರಾ ಸಮುದಾಯ ಒಕ್ಕೂರಲಿನಿಂದ ಖಂಡನೆ ಮಾಡುತ್ತದೆ. ಹೀಗಾಗಿ ಈ ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಬಂಜಾರಾ ಸಮುದಾಯದ ಮುಖಂಡ ಅಪ್ಪು ರಾಠೋಡ ಆಗ್ರಹಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡಿಸಿ ಮಾತನಾಡಿದ ಅವರು ಮಾ.22 ರಂದು ಅಫಜಲಪುರ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಶಿವಕುಮಾರ ನಾಟೀಕಾರ ನೇತೃತ್ವದಲ್ಲಿ ಭೀಮಾ ನದಿಗೆ ನೀರು ಹರಿಸಲು ಒತ್ತಾಯಿಸಿ ಹಮ್ಮಿಕೊಂಡ ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ಜಿ.ಪಂ ಮಾಜಿ ಸದಸ್ಯ ತುಕಾರಾಮಗೌಡ ಪಾಟೀಲ ಭಾಸಗಿ ಅವರು ಬಂಜಾರಾ ಸಮುದಾಯದ ಬಗ್ಗೆ ‘ಲಮಾಣ್ಯಾ’ ಎಂಬ ಕೀಳಾಗಿ ಪದ ಬಳಕೆ ಮಾಡಿದ್ದಾರೆ. ಅವರು
ಭಾಷಣ ಮಾಡುವ ಆವೇಶದಲ್ಲಿ ನಮ್ಮ ಸಮುದಾಯದ ಹಿರಿಯ ನಾಯಕರು ಹಾಗೂ ಲೋಕಸಭಾ ಸಂಸದರು ಆಗಿರುವ ಡಾ. ಉಮೇಶ ಜಾಧವ ಅವರ ಹೆಸರನ್ನು ಪ್ರಸ್ತಾಪ ಮಾಡುತ್ತಾ ಲಮಾಣ್ಯಾ ಎಂದು ಕೀಳಾಗಿ ಮಾತನಾಡಿದ್ದಾರೆ. ಈಗಾಗಲೇ ಅಫಜಲಪುರ ಪೆÇಲೀಸ್ ಠಾಣೆಯಲ್ಲಿ ಎಸ್.ಸಿ/ಎಸ್.ಟಿ. ಕಾಯ್ದೆಯ ಅಡಿಯಲ್ಲಿ ಜಾತಿ ನಿಂದನೆ ದೂರು ಸಲ್ಲಿಸಿರುವುದಾಗಿ ತಿಳಿಸಿದ ಅವರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ನಂತರ ಬಂಜಾರ ಸಮುದಾಯದ ಮುಖಂಡರಾದ ಮನೋಹರ ರಾಠೋಡ, ದತ್ತು ಪವಾರ, ನಾಥುರಾಮ ರಾಠೋಡ ಮಾತನಾಡಿ ಬಂಜಾರಾ ಸಮುದಾಯ ಎಲ್ಲಾ ಸಮುದಾಯದ ಜೊತೆ ಸೌಹಾರ್ದತೆಯಿಂದ ಗುರುತಿಸಿಕೊಂಡಿದೆ. ಆದರೆ ಮಾಜಿ ಜಿ.ಪಂ ಸದಸ್ಯ ತುಕರಾಮಗೌಡ ಪಾಟೀಲ ಅವರು ಭಾಷಣ ಮಾಡುವಾಗ ಒಂದು ಸಮುದಾಯದ ವಿರುದ್ಧ ಕೀಳಾಗಿ ಮಾತನಾಡಿದ್ದಾರೆ. ಹೀಗಾಗಿ ಜಾತಿ ನಿಂದನೆ ಮಾಡಿದ ತುಕರಾಮಗೌಡ ಪಾಟೀಲ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಕೇಶ ಟಿ.ರಾಠೋಡ, ತಾರಾಸಿಂಗ್ ರಾಠೋಡ, ಆನಂದ ರಾಠೋಡ, ಪುನ್ನು ಪವಾರ, ಕಾಂತು ಪವಾರ, ರವಿ ರಾಠೋಡ, ಶಶಿಕಾಂತ ರಾಠೋಡ, ರಾಮು ರಾಠೋಡ, ಉಮೇಶ ರಾಠೋಡ, ಶಿವು ರಾಠೋಡ, ಹರೀಶ ರಾಠೋಡ, ವಿನೋದ ಚವಾಣ, ರಾಜು ಚವಾಣ, ಸಂತೋಷ ಚವಾಣ, ಅಪ್ಪು ಕಾಶು ಸೇರಿದಂತೆ ಅನೇಕರಿದ್ದರು.