ವಿದ್ಯಾರ್ಥಿಗಳಿಗೆ ಸೃಜನಶೀಲತೆ ಹೊಂದುವುದು ಇಂದಿನ ಅಗತ್ಯತೆ
ಬೀದರ್ ಮಾ. 25:ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳು ಸಿಗುತ್ತವೆ ಆದರೇ ಸೃಜನಶೀಲತೆ ಹೊಂದುವುದು ಇಂದಿನ ಅಗತ್ಯತೆ ಎಂದು ಬೆಂಗಳೂರಿನ ಸಿ. ಎಸ್. ಜಿ ಇಂಟರನ್ಯಾಷನಲ್‍ನ ಹಿರಿಯ ಆರ್ಕಿಟಕ್ಟ್ ಡಾ. ರವೀಂದ್ರ ಪಾಟೀಲ ಅಭಿಪ್ರಾಯಪಟ್ಟರು.
ಅವರು ನಗರದ ಸ್ಥಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕ.ರಾ.ಶಿ ಸಂಸ್ಥೆಯ ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗಣಕಯಂತ್ರ ವಿಜ್ಞಾನ ವಿಭಾಗದಿಂದ ಆಯೋಜಿಸಲಾಗಿದ್ದ ಒಂದು ದಿನದ “ಟ್ರೆಂಡಿಂಗ್ ಟೆಕ್ನೋಲೋಜಿಸ್ ಅವೆರನೆಸ್” ಕಾರ್ಯಗಾರ ಉದ್ಘಾಟಿಸಿ ಮಾತನಾಡುತ್ತ ಐ.ಟಿ-ಬಿ.ಟಿ ಕಂಪನಿಗಳಲ್ಲಿ ನೌಕರಿ ಪಡೆಯಲು ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ಸೃಜನಶೀಲತೆಯನ್ನು ಹೊಂದುವುದು ಅತ್ಯಂತ ಅವಶ್ಯವಾಗಿದೆ.
ಡೇಟಾ ಸಂಗ್ರಹಣೆ ಮತ್ತು ಆರ್ಟಿಫಿಸಿಯಲ್ ತಂತ್ರಜ್ಞಾನದಿಂದ ಸುಸಂಬದ್ಧತೆಗಳನ್ನು ಸಾಧಿಸಲು ಸಂಪನ್ಮೂಲಗಳ ಬಳಕೆ ಎ. ಆಯ್ ಮೇಲೆ ಅವಲಂಬಿತವಾಗಿದೆ. ಆರ್ಟಿಫಿಸಿಯಲ್ ಇಂಟೆಲಿಜನ್ಸಗಳು ಚಾಟ್ ಜಿಪಿಟಿಗಳು ನಿರ್ದಿಷ್ಟ ಅಪ್ಲಿಕೇಶನಗಳಲ್ಲಿ ಪರಿಣಿತ ವ್ಯವಸ್ಥೆಗಳು, ವಿಶೇಷವಾಗಿ ಡೇಟಾ ಸಂಗ್ರಹಣೆ ಮತ್ತು ಪವರ್ ಕಂಪ್ಯೂಟಿಂಗಳಿಂದ ಸುಸಂಬದ್ಧತೆಗಳನ್ನು ಸಾಧಿಸಲು ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿದೆ ಮತ್ತು ವಿಶಿಷ್ಟವಾಗಿ ಪಾವತಿಸುವ ಮಾದರಿಗಳನ್ನು ಬಳಸುತ್ತವೆ.
ಓಲಾದಂಥ ತಂತ್ರಜ್ಞಾನಗಳು ಇವತ್ತು ದೈತ್ಯಾಕಾರದಲ್ಲಿ ಬೆಳೆದಿರುವುದೆ ಇದಕ್ಕೆ ಉದಾಹರಣೆ. ಇಂಥಹ ತಂತ್ರಗಳನ್ನು ಉಪಯೋಗಿಸಿ ವೆಚ್ಚಗಳನ್ನು ತಗ್ಗಿಸಬಹುದಲ್ಲದೆ ಇಂದಿನ ದಿನಗಳಲ್ಲಿ ತಂತ್ರಜ್ಞಾನಗಳಲ್ಲಿ ಆಗುತ್ತಿರುವ ಬದಲಾವಣೆಗಳು ಸೇರಿದಂತೆ ಹೆಚ್ಚಿನ ಮಟ್ಟದಲ್ಲಿ ಉಪಯೋಗಿಸುವ ಅಪ್ಲಿಕೇಶನಗಳು ಸರಿಯಾದ ದಿಕ್ಕಿನಲ್ಲಿ ಬಳಸಿಕೊಂಡರೆ ನಮ್ಮ ಜೀವನ ಕೂಡ ಉಜ್ವಲವಾಗುವುದರಲ್ಲಿ ಸಂದೇಹವಿಲ್ಲ ಎಂದು ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಪೆÇ್ರೀ. ಅನಿಲಕುಮಾರ ಚಿಕ್ಕಮಣೂರ ಮಾತನಾಡಿ ನಮ್ಮ ಮಹಾವಿದ್ಯಾಲಯದಲ್ಲಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳುವ ಉದ್ದೇಶ ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮನೋಭಾವ ಮೂಡಿಸಿ ಸಂಶೋಧನೆಗಳಲ್ಲಿ ತೊಡಗುವಂತೆ ಪ್ರೇರೆಪಿಸಿ ಹೊಸ ಹೊಸ ವಿಷಯಗಳನ್ನು ಕಲಿಯಲು ಅನುವು ಮಾಡಿಕೊಟ್ಟು ವಿದ್ಯಾರ್ಥಿಗಳ ಸರ್ವೋತೊಮುಖ ಬೆಳವಣಿಗೆಯೆ ನಮ್ಮ ಪರಮ ಧ್ಯೇಯವೆಂದು ನುಡಿದರು. ಕಾರ್ಯಗಾರದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಹಂಗರಗೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗಣಕಯಂತ್ರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪೆÇ್ರೀ. ಶ್ರೀಕಾಂತ ದೊಡ್ಡಮನಿ, ಸಹಾಯಕ ಪ್ರಾಧ್ಯಾಪಕರಾದ ಅಶೋಕ ಹುಡೇದ್, ಅನಿತಾ ಮಾರ್ಗೆ, ಶಿವಲೀಲಾ ಪಾಟೀಲ, ರೇಣುಕಾ ಭಗವತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕ ಡಾ. ಬಿ. ವಿ. ರವಿಚಂದ್ರ ನಿರೂಪಿಸಿದರು, ಜಗದೀಶ ಬೋರಾಳೆ ವಂದಿಸಿದರು.