ವಿಶ್ವ ಮಹಿಳಾ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭ
ಬೀದರ:ಮಾ.25:ಗ್ರಾಮ ವಿಕಾಸ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಆಣದೂರ ವತಿಯಿಂದ ಬೀದರ್ ತಾಲ್ಲೂಕಿನ ಆಣದೂರ ಗ್ರಾಮದ ಸರ್ವಜ್ಞ ಶಾಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಗಡಿನಾಡು ಅಭಿವೃದ್ದಿ ಪ್ರಾಧಿಕಾರದ ನೂತನ ಸದಸ್ಯರಾಗಿ ನೇಮಕಗೊಂಡಿರುವ ಶ್ರೀ ಸಂಜೀವಕುಮಾರ ಅತಿವಾಳೆ ಅವರು ‘ಮಹಿಳೆ ಹಳೆ ತಲೆಮಾರಿನ ಬಂಧನಗಳಿಂದ ಬಿಡುಗಡೆಗೊಳ್ಳುತ್ತ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳತಿದ್ದಾಳೆ. ಕುಟುಂಬಕ್ಕμÉ್ಟ ಸೀಮಿತಗೊಳ್ಳದೆ ಶೈಕ್ಷಣಿಕ, ಸಾಮಾಜಿಕ, ವೈಜ್ಞಾನಿಕ, ಸಂಶೋಧನೆ, ವ್ಯವಹಾರ, ಸಾಹಿತ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡುತಿದ್ದಾಳೆ.