ಅಭಿವೃದ್ಧಿಗೆ ಇಂಜಿನಿಯರ್ ಪಾತ್ರ ಅತಿಮುಖ್ಯ:ದರ್ಶನಾಪುರ
ಕಲಬುರಗಿ,ಸೆ 18: ಜಗತ್ತಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಇಂಜಿನಿಯರ್ ಅವರ ಪಾತ್ರ ಬಹಳ ಮುಖ್ಯವಾದುದು. ಆರೋಗ್ಯ ಕ್ಷೇತ್ರ, ಕಟ್ಟಡ ಕ್ಷೇತ್ರ, ನೀರಾವರಿ ಕ್ಷೇತ್ರ, ಕೈಗಾರಿಕಾ ಕ್ಷೇತ್ರ ,ಬಾಹ್ಯಾಕಾಶ , ಎಲೆಕ್ಟ್ರಾನಿಕ್ ಉದ್ಯಮ ಕ್ಷೇತ್ರದಲ್ಲಿ ಇಂಜಿನಿಯರಗಳ ಕೊಡುಗೆ ಬಹಳ ದೊಡ್ಡದು.ಇವತ್ತು ಇಂಜಿನಿಯರ್ ತಮ್ಮ ಬುದ್ದಿಮತ್ತೆಯಿಂದ ಉನ್ನತ ಮಟ್ಟದ ಜೀವನ ಶೈಲಿಯ ಬದಲಾವಣೆಗೆ ಕಾರಣೀಭೂತರಾಗಿದ್ದಾರೆ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳು ಇಲಾಖೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಅವರು ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಇಂಡಿಯಾ ಕಲಬುರ್ಗಿ ಸ್ಥಾನಿಕ ಕೇಂದ್ರದ ವಿಶ್ವೇಶ್ವರಯ್ಯ ಭವನದಲ್ಲಿ ಆಯೋಜಿಸಲಾಗಿದ್ದ 57ನೇ ಇಂಜಿನಿಯರ್ಸ್ ಡೇ ಮತ್ತು 163 ನೇ ವಿಶ್ವೇಶ್ವರಯ್ಯ ಜಯಂತಿಯ ನಿಮಿತ್ತ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.ಅವರು ಮುಂದುವರೆದು ಮಾತನಾಡಿ
ಇನ್ನು ಮುಂದೆ ನಾವು ಪ್ರಾಮಾಣಿಕ ನಿಷ್ಠೆಯಿಂದ ಕೆಲಸ ಮಾಡಿ ನಮ್ಮ ಕಲ್ಯಾಣ ಕರ್ನಾಟಕ ಅಲ್ಲದೆ ಭಾರತ ಮತ್ತು ವಿಶ್ವಕ್ಕೂ ಕೂಡ ವಿಶ್ವವಿಖ್ಯಾತ ಮೋಕ್ಷಗೊಂಡಂ ವಿಶ್ವೇಶ್ವರಯ್ಯ ಅವರಂತೆ ಇಂಜಿನಿಯರ್ ಗಳು ಇನ್ನೂ ಹೆಚ್ಚಿನ ಕೊಡುಗೆಯನ್ನು ಕೊಡಬೇಕು ಎಂದರು.
ಗೌರವ ಅತಿಥಿಗಳಾಗಿ ಆಗಮಿಸಿದ ಹೆಸರಾಂತ ಇತಿಹಾಸಕಾರರು ಹಾಗೂ ಸಿವಿಲ್ ಇಂಜಿನಿಯರ್ ಧರಮೇದ್ರ ಅರೇನಳ್ಳಿ ಅವರು, ಇತಿಹಾಸ ತಿಳಿದಾಗ ಮಾತ್ರ ಇತಿಹಾಸ ರಚಿಸಲು ಸಾಧ್ಯವಾಗುತ್ತದೆ. ಆದ ಕಾರಣ ನಮ್ಮ ಭಾಗದ ಕನ್ನಡ ನಾಡಿನ, ಕನ್ನಡ ಕ್ಷೇತ್ರದ ,ಕಲಬುರ್ಗಿ ಕ್ಷೇತ್ರದ ಎಲ್ಲಾ ಇತಿಹಾಸಗಳನ್ನು ನಾವು ತಿಳಿದುಕೊಳ್ಳಬೇಕು. ಇಡೀ ಜಗತ್ತಿಗೆ ನಮ್ಮ ಭಾರತ ಬೇಕಾದುದ್ದನ್ನು ಕೊಟ್ಟಿದೆ, ಸಂಸ್ಕøತಿ ಕೊಟ್ಟಿದೆ, ಸಂಸ್ಕಾರ ಕೊಟ್ಟಿದೆ, ವಿಜ್ಞಾನ ಕ್ಷೇತ್ರದಲ್ಲಿ ನಾವೇನು ಹಿಂದೆ ಉಳಿದಿಲ್ಲ ಬಹಳ ಮುಂದುವರಿದಿದ್ದೇವೆ ಎಂದು ತೋರಿಸಿದ್ದೇವೆ ಎಂದು ತಿಳಿಸಿದರು. ಅಧ್ಯಕ್ಷರಾದ ಶ್ರೀಧರ್ ಪಾಂಡೆ ಅವರು ಅಧ್ಯಕ್ಷತೆ ವಹಿಸಿದ್ದರು. ಇಂದಿನ ಕಾಲದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಮಷೀನ್ ಲನಿರ್ಂಗ್ ಕ್ಷೇತ್ರದ ಉಪಯೋಗದ ಬಗ್ಗೆ ಕುರಿತು ಇಂ. ಸುನಿಲ್ ಕುಲಕರ್ಣಿ ಅವರು ದಿಕ್ಸೂಚಿ ಭಾಷಣವನ್ನು ನೀಡಿದರು ಇದೇ ಕಾರ್ಯಕ್ರಮದಲ್ಲಿ ಕಲಬುರ್ಗಿಯ ಎಮಿನೆಂಟ್ ಇಂಜಿನಿಯರ್ ಗಳಾದ ಇಂ .ಗಿರಿಧರ್ ಕುಲ್ಕರ್ಣಿ ಚೀಫ್ ಇಂಜಿನಿಯರ್ ಕೆಪಿಟಿಸಿಎಲ್, ಇಂ. ನಾಗೇಂದ್ರ ಬಿರಾದಾರ್ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಇರಿಗೇಶನ್,ಡಾ.ಬಸವರಾಜ ಗಾದಗೆ ರೀಜನಲ್ ಡೈರೆಕ್ಟರ್ ವಿಟಿಯು ಕಲಬುರ್ಗಿ, ಇಂ. ಸಂಪತ್ ಗಿಲಡಾ ಖ್ಯಾತ ಉದ್ಯಮಿಗಳು,ಇಂ. ಶ್ರೀಯಾಂಕಾ ಧನಶ್ರೀ ಕೆ ಎ ಎಸ್, ತಹಶೀಲ್ದಾರ್ ಸೇಡಂ, ಇಂ. ಅನಿಲ್ ಕುಮಾರ್ ಕಾಡಾದಿ ಖ್ಯಾತ ಉದ್ಯಮಿಗಳು, ಡಾ. ನಾಗೇಂದ್ರ ಹೆಚ್ ಪ್ರಾಧ್ಯಾಪಕರು ಪಿ ಡಿ ಎ ಎಂಜಿನಿಯರಿಂಗ್ ಕಾಲೇಜು ಅವರನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಡಾ. ಶ್ರೀಧರ್ ಪಾಂಡೆ ಸ್ವಾಗತಿಸಿದರು ಮತ್ತು ಗೌರವ ಕಾರ್ಯದರ್ಶಿ ಇಂ.ಸೀತಾರಾಮರೆಡ್ಡಿ ಮುನ್ನೂರು ಅವರು ವಂದಿಸಿದರು.
ಇಂ ಉದಯಕುಮಾರ ಬಳ್ಳಾರಿ, ಇಂ ಚಂದ್ರಶೇಖರ್ ಭೋಗಲೇ ಮತ್ತು ಆರ್ಕಿಟೆಕ್ಟ್ ಭರತಭೂಷಣ ಅವರು ಅತಿಥಿಗಳನ್ನು ಪರಿಚಯಿಸಿದರು.
ಇಂ. ಪ್ರಶಾಂತ ಕಾಂಬ್ಳೆ ಮತ್ತು ಇಂ. ಚಂದ್ರಶೇಖರ ಸುಲೇಪೇಟಕರ್ ಅವರು ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯ ಸದಸ್ಯರಾದ ಇಂ. ಜಿ ಆರ್ ಮುತ್ತಗಿ, ಇಂ. ಬಸವರಾಜ ಪಾಟೀಲ, ಡಾ. ಬಾಬುರಾವ್ ಸೇರಿಕಾರ, ಇಂ. ಸುಭಾಷ ಸೂಗೂರು ಇಂ. ಚಂದ್ರಶೇಖರ ಕಕ್ಕೇರಿ, ಇಂ. ಹಣಮಂತರೆಡ್ಡಿ ಇಂ. ಹಣಮಂತ ಪ್ರಭು, ಇಂ. ಚನ್ನವೀರಯ್ಯ ಸ್ವಾಮಿ, ಇಂ.ಚಂದ್ರಕಲಾ ತೆಗನೂರ, ಇಂ ವಿಶ್ವನಾಥರೆಡ್ಡಿ, ಡಾ .ಅಮರೇಶ ಗಣಾಚಾರಿ, ಡಾ. ಪವನ ರಂಗದಳ ಮತ್ತು ಇತರರು ಉಪಸ್ಥಿತರಿದ್ದರು.