ಡೊಂಗರಗಾಂವ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ
ಕಲಬುರಗಿ:ಸೆ.18: ಜಿಲ್ಲೆಯ ಡೊಂಗರಗಾಂವ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ,ನಂದಕುಮಾರ ತಾಲೂಕ ಮಟ್ಟದ ಪ್ರೌಢ ಶಾಲಾ ಬಾಲಕರ ವಿಭಾಗದ ” 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ” ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಅದೇ ರೀತಿಯಾಗಿ ವಿದ್ಯಾರ್ಥಿಗಳು, ತಾಲೂಕ ಮಟ್ಟದ ಪ್ರೌಢ ಶಾಲಾ ಬಾಲಕರ ವಿಭಾಗದ “ಖೋ-ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ”,ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿನಿಯರು ಕೂಡ ಪ್ರೌಢ ಶಾಲಾ ಬಾಲಕಿಯರ ವಿಭಾಗದ “ಕಬ್ಬಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ “ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮತ್ತು 9ನೇ ತರಗತಿ ವಿಧ್ಯಾರ್ಥಿ ಕು, ಸಂಗಮೇಶ “800 ಮೀಟರ್ ಓಟದಲ್ಲಿ ತೃತೀಯ ಸ್ಥಾನ” ಪಡೆದುಕೊಂಡಿದ್ದಾನೆ.
ವಿಧ್ಯಾರ್ಥಿಗಳ ಈ ಸಾಧನೆಗೆ ಮುಖ್ಯೋಪಾಧ್ಯಾಯ ಸುನೀತಾ ಬಿರಾದಾರ, ದೈಹಿಕ ಶಿಕ್ಷಕ ರವಿಚಂದ್ರ, ಶಾಲೆಯ ಸಮಸ್ತ ಶಿಕ್ಷಕ ವರ್ಗ,Sಆಒಅ ಅಧ್ಯಕ್ಷ, ಸದಸ್ಯರು ವಿಧ್ಯಾರ್ಥಿಗಳ ಪಾಲಕರು ಮತ್ತು ಊರಿನ ನಾಗರಿಕರೂ ಹರ್ಷ ವ್ಯಕ್ತಪಡಿಸಿದ್ದಾರೆ.