ವಿಶ್ವ ಕರ್ಮ ಸಮುದಾಯದ ಜನರು ಕಠಿಣ ಶ್ರಮಜೀವಿಗಳು:ಸಚಿವ ಈಶ್ವರ ಬಿ. ಖಂಡ್ರೆ
ಬೀದರ. ಸೆ. 18: ವಿಶ್ವ ಕರ್ಮ ಸಮುದಾಯದ ಜನರು ಕಠಿಣ ಶ್ರಮಜೀವಿಗಳಾಗಿದ್ದು ಕಾಯಕವೇ ಕೈಲಾಸ ಎಂದು ನಂಬಿದವರು ತಮ್ಮ ದುಡಿಮೆಗೆ ಹೆಚ್ಚಿನ ಪ್ರತಿಫಲ ಸಿಗಬೇಕೆಂದು ಅರಣ್ಯ. ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ವಿಶ್ವ ಕರ್ಮ ಜಯಂತಿ ಅಂಗವಾಗಿ ವಿಶ್ವ ಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದರು.
ದೊಡ್ಡ-ದೊಡ್ಡ ಕಟ್ಟಡ, ದೇವಾಲಯ, ಬುನಾದಿ ಹಾಕುವ ತಮ್ಮ ನೈಪುಣ್ಯತೆ ಎಲ್ಲರಿಗೂ ಬರುವದಿಲ್ಲ ನಿಮ್ಮ ಅದೊಂದು ವಿಶೇಷ ಪ್ರತಿಭೆಯಾಗಿದೆ. ಇಂದಿನ ಯಾವುದೇ ಮಶಿನಗಳು ಬಂದರು ತಮ್ಮ ಇತಿಹಾಸದ ಮೂಲ ಸಂಸ್ಕøತಿ ಮತ್ತು ಪರಂಪರೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು.
ತಮ್ಮಗೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಇಲ್ಲದಿದ್ದರು ನಿಮ್ಮ ಬೇಡಿಕೆಗಳಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೆವೆ. ನಮ್ಮ ಸರಕಾರ ಬಡವರು, ಹಿಂದುಳಿದವರು, ಶೋಷಿತ ತಳ ಸಮುದಾಯದವರ ಪರ ಇದೆ. ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಬಹಳಷ್ಟು ತಮ್ಮ ಮಕ್ಕಳು ಇಂಜಿನಿಯರ, ವಿಜ್ಞಾನಿಗಳು ಆಗಿದ್ದಾರೆ ಎಂದು ಹೇಳಿದರು.
ಜನರಿಗೆ ಬೇಕಾಗುವ ಕಿಟಕಿ, ಬಾಗಿಲು, ದೇವರ ಮೂರ್ತಿಗಳನ್ನು ಮಾಡುವ ಕಲೆ ತಮ್ಮಲಿದೆ. ನಾಗರಿಕತೆ ಇಷ್ಟೊಂದು ದೊಡ್ಡದಾಗಿದೆ, ಶ್ರೀಮಂತವಾಗಿದೆ ಎಂದರೆ ಮನುಕುಲಕ್ಕೆ ತಮ್ಮದೇಯಾದ ಒಂದು ವಿಶೇಷ ಕೊಡುಗೆ ಇದೆ. ವಿಶ್ವ ಕರ್ಮ ಜಗತ್ತಿನ ಸೃಷ್ಟಿಕರ್ತ ಎಂದು ಹೇಳಲಾಗುತ್ತದೆ. ತಮಗೆಲ್ಲರಿಗೂ ವಿಶ್ವ ಕರ್ಮ ಜಯಂತಿ ಶುಭಾಶಯಗಳು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಶಿಂಧೆ, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾದ ಮಹೇಶ ಪಾಂಚಾಳ, ಉಪಾಧ್ಯಕ್ಷರಾದ ಪಾಂಡುರಂಗ ಪಾಂಚಾಳ, ಕಾರ್ಯದರ್ಶಿ ಶಿವಾನಂದ ಸಿದ್ಧಾರೂಢ ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.