ಕೋಕಿಲಾ ಮಹಾದೇವಪ್ಪ ಬಿರಾದಾರ ಅವರಿಗೆ ಅಭಿಮಾನದ ಅಭಿನಂದನ ಸಮಾರಂಭ
ಬೀದರಃ ಸೆ.18:ನಗರದ ರಾಂಪೂರೆ ಕಾಲೋನಿಯಲ್ಲಿರುವ ಶ್ರೀ ದತ್ತ ಮಂದಿರದಲ್ಲಿ ಶ್ರೀ ವೈಷ್ಣೋದೇವಿ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕರ್ನಾಟಕ ರಾಜ್ಯ ಘಟಕದ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಶ್ರೀಮತಿ ಕೋಕಿಲಾ ಮಹಾದೇವಪ್ಪ ಬಿರಾದಾರ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಂಡಿರುವುದು ಉತ್ತಮ ಕಾರ್ಯವಾಗಿದೆ ಎಂದು ಬಸವತತ್ವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೈಜಿನಾಥ ಕಮಠಾಣೆಯವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ವೀರಶೈವ ಲಿಂಗಾಯತ ಮಹಾಸಭೆಯನ್ನು ಹಾನಗಲ್ ಗುರುಕುಮಾರ ಶಿವಯೋಗಿಗಳವರು 120 ವರ್ಷಗಳ ಹಿಂದೆ ಹುಟ್ಟು ಹಾಕಿದ ಈ ಸಂಸ್ಥೆ ಇಂದು ಬೃಹತ್ ಪ್ರಮಾಣದಲ್ಲಿ ಬೆಳೆದು ಅಸಂಖ್ಯಾತ ಸದಸ್ಯರನ್ನೊಳಗೊಂಡು ಉತ್ತಮ ಕಾರ್ಯ ಮಾಡುತ್ತಿರುವುದು ಸಮಾಜಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ ಎಂದು ಬಣ್ಣಿಸಿದರು.
ಧರ್ಮ, ಸಂಸ್ಕøತಿ, ಸಂಸ್ಕಾರ ಉಳಿಯಲು ಇಂದಿನ ದಿನಮಾನಗಳಲ್ಲಿ ನಿಸ್ವಾರ್ಥ ಸೇವೆಯ ಅಗತ್ಯವಿದೆ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೀದರನ ಬ್ರಿಮ್ಸ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ. ಮಹೇಶ ಬಿರಾದಾರ ಕರೆ ನೀಡಿದರು. ಬಸವಾದಿ ಶಿವಶರಣರ ವಚನಗಳು ಅನಘ್ರ್ಯ ಸಂಪತ್ತುಗಳಾಗಿದ್ದು, ಅವುಗಳನ್ನು ತಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡಾಗ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯವೆಂದು ತಿಳಿಸಿದರು.
ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿಗಾಗಿ ಎಲ್ಲರೂ ಕೈಜೋಡಿಸಿದಾಗ ಮಾತ್ರ ಅದು ಎತ್ತರಕ್ಕೆ ಬೆಳೆಯಲು ಸಾಧ್ಯವೆಂದು ದಿವ್ಯ ಸಾನಿಧ್ಯವಹಿಸಿದ ಪೂಜ್ಯ ಮಾತೋಶ್ರೀ ಅಮೃತಾನಂದಮಯಿ ಬೆಳ್ಳೂರು ಅವರು ಆಶೀರ್ವಚನ ನೀಡಿದರು.
ವೈಷ್ಣೋದೇವಿ ಟ್ರಸ್ಟ್ ವತಿಯಿಂದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತಸದಾಯಕವಾಗಿದೆ. ಇಂತಹ ಅನೇಕ ಸಮಾಜೋಧಾರ್ಮಿಕ ಹಾಗೂ ರಚನಾತ್ಮಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಮಾಜದ ಸೇವೆಗಾಗಿ ಸದಾ ಸಿದ್ಧವಾಗಿದೆ ಎಂದು ಟ್ರಸ್ಟ್‍ನ ಅಧ್ಯಕ್ಷ ಸಂಗಮೇಶ ಬಿರಾದಾರ ತಿಳಿಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಸಿದ್ರಾಮಯ್ಯ ಹಿರೇಮಠ ಅವರು ಸಮಾಜದಲ್ಲಿ ಉತ್ತಮ ಸ್ಥಾನ ಹೊಂದಿದವರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವ ಶ್ರೀ ವೈಷ್ಣೋದೇವಿ ಟ್ರಸ್ಟ್ ಕಾರ್ಯ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಶೈಲಜಾ ಹುಡಗೆ ಆಗಮಿಸಿ ಮಾತನಾಡಿದರು. ಅತಿಥಿಗಳಾಗಿ ಸಂಗಮೇಶ ಮೂಲಗೆ, ಬಸವ ಮಿಷನ್‍ನ ಶರಣಯ್ಯ ಸ್ವಾಮಿ, ಟ್ರಸ್ಟ್‍ನ ಕಾರ್ಯದರ್ಶಿ ಭಾರತಿ ಬಿರಾದಾರ, ಕಿರಣ ಮಹಾರಾಜ, ಗುಂಡಪ್ಪ ಹುಡಗೆ, ಕಾಶಿನಾಥ ಭಂಗೂರೆ, ಚಂದ್ರಶೇಖರ ರೆಡ್ಡಿ, ಮಹಾಂತೇಶ ಬಿರಾದಾರ, ವಿರುಪಾಕ್ಷ ದೇವರು, ಬಸವರಾಜ ಸ್ವಾಮಿ, ಚಂದ್ರಕಾಂತ ನೆಮತಾಬಾದ, ಮಾಣಿಕೇಶ ಪಾಟೀಲ್, ರಾಜಕುಮಾರ ಕಾಡವಾದ, ಅರುಣ ಬಿರಾದಾರ ಮತ್ತು ಅಕ್ಕಮಹಾದೇವಿ ಭಜನಾ ಸಂಘ ಹಾಗೂ ರಾಧಾಕೃಷ್ಣ ಕೋಲಾಟ ಸಂಘದ ಪದಾಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಮೊದಲಿಗೆ ಕವಿತಾ ಸ್ವಾಮಿ ಹಾಗೂ ಸಂಗೀತಾ ಪಾಟೀಲ್ ಸ್ವಾಗತ ಗೀತೆ ಹಾಡಿದರು. ವೈಜಿನಾಥ ಪಾಟೀಲ್ ಸಿದ್ಧಾಪೂರ ನಿರೂಪಣೆ ಮಾಡಿದರೆ, ಸುಭಾಷ ಬಿರಾದಾರ ವಂದಿಸಿದರು.