ಭಗವಾನ್ ವಿಶ್ವಕರ್ಮರು ವಿಶ್ವದ ಪ್ರಥಮ ಇಂಜೀಯರ್ :ರಮೇಶ ಪೋದ್ದಾರ
ಇಂಡಿ :ಸೆ.18: ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಇಂಡಿ ಘಟಕ ವತಿಯಿಂದ ಇಂದು ವಿಶ್ವಕರ್ಮ ಜಯಂತೋತ್ಸವ ಅದ್ದೂರಿಯಾಗಿ ಅಚರಣೆ ಮಾಡಲಾಯಿತು.
ಈ ಸಂಧರ್ಬದಲ್ಲಿ ವಿಶ್ವಕರ್ಮಮಹಾಸಭಾ ಇಂಡಿ ಘಟಕದ ಅಧ್ಯಕ್ಷ ರಮೇಶ ಪೋದ್ದಾರ ಮಾತನಾಡಿ ವಿಶ್ವಕರ್ಮ ಜಯಂತಿ ಮಂಗಳಕರ ಹಿಂದೂ ಹಬ್ಬವಾಗಿದೆ. ಭಗವಾನ ವಿಶ್ವಕರ್ಮನನ್ನು ಬ್ರಹ್ಮಾಂಡದ ಪ್ರಥಮ ವಾಸ್ತುಶಿಲ್ಪಿ ಅಥವಾ ಎಂಜೀನಿಯರ್ ಎಂದು ಪರಿಗಣಿಸಲಾಗಿದೆ ಆದ್ದರಿಂದಲೆ ಜನರು ತಮ್ಮ ಕೆಲಸ ಸ್ಥಳಗಳಲ್ಲಿ ಅಂಗಡಿಗಳಲ್ಲಿ ,ಕಾರ್ಖಾನೆಯಲ್ಲಿ ಇತರೆ ಸಂಸ್ಥೆಗಳಲ್ಲಿ ವಿಶ್ವಕರ್ಮ ಅವರನ್ನು ಪೂಜಿಸುತ್ತಾರೆ. ಕಾರ್ಖಾನೆ ಕೆಲಸಗಾರರು, ವಾಸ್ತುಶಿಲ್ಪಿಗಳು, ಬಡಗಿಗಳು ಮತ್ತು ಶಿಲ್ಪಿಗಳು ಭಗವಾನ ವಿಶ್ವಕರ್ಮನ ಆರಾಧನೆಯು ಮಹತ್ತರವಾದ ಮಹತ್ವ ಹೊಂದಿದೆ. ತಮ್ಮ ಪ್ರಯತ್ನಗಳಲ್ಲಿ ಯಶಸ್ವಿಗೆ ಭಗವಾನ ವಿಶ್ವಕರ್ಮರ ಆರ್ಶೀವಾದ ಬಯಸುತ್ತಾರೆ. ದೇವತೆಗಳ ಶಿಲ್ಪಿಯೇ ವಿಶ್ವಕರ್ಮ ಇಡೀ ಸೃಷ್ಠಿಯ ಎಲ್ಲಾ ವಸ್ತುಗಳು ಅವನಿಂದಲೆ ನಿರ್ಮಿತವಾಗಿವೆ ಎನ್ನುವುದು ಪುರಾಣಗಳಿಂದ ತಿಳಿದು ಬ ರುತ್ತದೆ. ಪರಮಾತ್ಮ ವಿಶ್ವಕರ್ಮನನ್ನು ಅಂದರೆ ಈ ಭೂಮಿಯಲ್ಲಿ ಪ್ರಥಮವಾಗಿ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ ಜಗತ್ತಿನ ಮೂದಲ ವ್ಯಕ್ತಿ ವಿಶ್ವಕರ್ಮ ಖುಷಿಗಳು ಅದು ನಾವು ಅವರ ಕುಲದಲ್ಲಿ ಹಿಟ್ಟಿರೋದೆ ನಮ್ಮ ಭಾಗ್ಯ,
ಇಂದು ನಮ್ಮ ಸಮುದಾಯದ ಜನರು ತಮ್ಮ ಮೂಲ ಕುಲಕಸಬಿನೊಂದಿಗೆ ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ.ಸಮಾಜದಲ್ಲಿ ಕೂಡಾ ಅನೇಕ ಜನರು ಬಡವರಿದ್ದಾರೆ ಉಳ್ಳವರು ಇಲ್ಲದವರಿಗೆ ಸಹಾಯ ಮಾಡಿ ವಿಶ್ವಕರ್ಮರು ಕಾಯಕದಲ್ಲಿ ದೇವರನ್ನು ಕಂಡಿದ್ದಾರೆ ಇಂತಹ ವಶಂಸ್ಥರಾದ ನಾವು ಬೇರೆ ಸಮುದಾಯದೊಂದಿಗೆ ಪ್ರೀತಿ ,ವಿಶ್ವಾಸ ಸಾಮರಸ್ಯ ಜೀವನಸಾಗಿಸೋಣ ಎಂದರು.
ಸರಾಫ್ ಸಂಘದ ಅಧ್ಯಕ್ಷ ಸೋಮಶೇಖರ ಬಿರಾದಾರ. ವ್ಹಿ.ಡಿ ಮಹೇಂದ್ರಕರ್ ಮಾತನಾಡಿದರು.
ಸುಜೀತಕುಮಾರ ಲಾಳಸಂಗಿ, ಸರಾಫ್ ಸಂಘದ ಅಧ್ಯಕ್ಷ ಸೋಮಶೇಖರ ಬಿರಾದಾರ, ಎನ್.ಡಿ ಡಂಗೆ, ವ್ಹಿ.ಡಿ ಮಹೇಂದ್ರಕರ್, ಶ್ರೀಶೈಲ ಅರ್ಜುಣಗಿ, ವಿಜು ಡಂಗೆ, ಎಸ್.ಎಸ್ ಕೊಪ್ಪಾ, ಗಂಗಾಧರ ಪತ್ತಾರ್, ಸಂಜು ಮುಳವಾಡ, ಕುಮಾರ ಪತ್ತಾರ, ಪ್ರವೀಣ ಪೋದ್ದಾರ, ಗುರು ಬಡಿಗೇರ, ಮಹಾದೇವ ಪತ್ತಾರ , ವೆಂಕಟೇಶ ಪತ್ತಾರ, ಸುರೇಶ ಪತ್ತಾರ, ದಿನೇಶ ಪತ್ತಾರ, ಕುಮಾರ ಪತ್ತಾರ, ಧಾನೇಶ ಪೋದ್ದಾರ, ಶ್ರೀಕಾಂತ ಬಡಿಗೇರ, ರಾಜು ಬಡಿಗೇರ, ರಂಘ ಲಾಳಸಂಗಿ ಸೇರಿದಂತೆ ಪೋದ್ದಾರ , ವಿಶ್ವಕರ್ಮ ಸಮಾಜದ ಬಂಧುಗಳು ಹಾಗೂ ಇನೀತರ ಗಣ್ಯರು, ರಾಜಕೀಯ ಮುಖಂಡರು ಸರಾಫ್ ವರ್ತಕರು ಇದ್ದರು.
ಸರಾಫ್ ಸಂಘದ ಅಧ್ಯಕ್ಷ ಸೋಮಶೇಖರ ಬಿರಾದಾರ ವಿಶ್ವಕರ್ಮ ಭಾವಚಿತ್ರ ಪೂಜೆ ಮಾಡಿದರು. ಎನ್.ಡಿ ಡಂಗೆ ಧ್ವಜಾರೋಹಣ ಮಾಡಿದರು.
ಸುಜೀತ ಲಾಳಸಂಗಿ ಕಾರ್ಯಕ್ರಮ ನಿರೂಪಿಸಿದರು.