ರಹಿಮಾನಸಾಬ ಕನಕಾಲರವರಿಗೆ ಕರುನಾಡ ಚೇತನ ಪ್ರಶಸ್ತಿ
ದೇವರಹಿಪ್ಪರಗಿ :ಸೆ.18:ಬೆಂಗಳೂರಿನಲ್ಲಿ ಸ್ಫೂರ್ತಿ ಕಲಾ ಟ್ರಸ್ಟ್ ವತಿಯಿಂದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಕನ್ನಡ ಪರ ಯುವ ಹೋರಾಟಗಾರದ ರಹಿಮಾನಸಾಬ್ ಕಣಕಲ್ ಅವರಿಗೆ ಸ್ಪೂರ್ತಿ ಕಲಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಕರುನಾಡ ಚೇತನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡ ನೆಲ ಜಲ ಭಾಷೆಗಾಗಿ ಸುಮಾರು ಕನ್ನಡಪರ ಹೋರಾಟಗಳನ್ನು ಮಾಡುತ್ತಾ. ಸಮಾಜ ಸೇವೆಯನ್ನು ನಿರಂತರವಾಗಿ ತೊಡಹಿಸಿಕೊಂಡು ಅಂಗವಿಕಲರಿಗೆ ಸಹಾಯ, ಮಾಡುವದು,ವೃದ್ಧಾಶ್ರಮಗಳಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾ ಬಂದಿದ್ದು ಇವರ ಸಮಾಜ ಸೇವೆಯನ್ನು ಪರಿಗಣಿಸಿ ಬೆಂಗಳೂರಿನಲ್ಲಿ ನಡೆದ ಸ್ಪೂರ್ತಿ ಕಲಾ ಟ್ರಸ್ಟ್ ವತಿಯಿಂದ ಕರುನಾಡ ಚೇತನ ಪ್ರಶಸ್ತಿಯನ್ನು ನೀಡಿ ಸನ್ಮಾನ ಮಾಡಿ ಇವರಿಗೆ ಗೌರವಿಸಲಾಯಿತು.
ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಇವರಿಗೆ ಗೌರವಿಸಿವೆ, ಕುಟುಂಬಸ್ಥರು,ಕನ್ನಡಪರ ಮುಖಂಡರು ರೈತರು ಸಮಾಜಸೇವಕರು ಹರ್ಷ ವ್ಯಕ್ತಪಡಿಸಿದ್ದಾರೆ.