ದಿವ್ಯವಾದಂತಹ ಶಕ್ತಿ ಶರಣರಲ್ಲಿದೆ:ಮಸೂತಿಶ್ರೀ
ತಾಳಿಕೋಟೆ:ಮಾ.25: ಗುರು ನಿರುಪಾದೀಶ್ವರರು ದೇಶ ಸಂಚಾರ ಮಾಡುತ್ತಾ ಸಾಗುತ್ತಾರೆ ಇನ್ನೂ ಗುರುವಿನ ಮಹತ್ವ ತಿಳಿದುಕೊಳ್ಳಬೇಕೆಂಬ ಆಸೆ ಹೊತ್ತ ನಿರುಪಾದೀಶ್ವರರು ಹೊರಟಾಗ ದಾರಿಯಲ್ಲಿ ಅನೇಕ ಸಮಸ್ಯೆಗಳು ಬರುತ್ತವೆ ಅವರು ದಿನದಲ್ಲಿ 5 ಮನೆ ಬಿಕ್ಷಾಟನೆ ಮಾಡಿ ಎರಡು ಹೊತ್ತು ಪ್ರಸಾದ ಮಾಡುತ್ತಿದ್ದರು ಆರನೇ ಮನೆಯವರು ಕರೆದರೆ ಅವರು ಹೋಗುತ್ತಿದ್ದಿಲ್ಲಾವೆಂದು ಖ್ಯಾತ ಪುರಾಣ ಪ್ರವಚನಕಾರರಾದ ಮಸೂತಿಯ ಪೂಜ್ಯ ಶ್ರೀ ಡಾ.ಶಿವಲಿಂಗಯ್ಯ ಶರಣರು ನುಡಿದರು.
ಸಾಂಭ ಪ್ರಭು ಶರಣ ಮುತ್ಯಾರವರ ಜರುಗಲಿರುವ ಜಾತ್ರೋತ್ಸವ ಕುರಿತು ರವಿವಾರರಂದು 14ನೇ ದಿನದಂದು ಜರುಗಿದ ಸುಕ್ಷೇತ್ರ ಅಂಕಲಿಯ ಶ್ರೀ ಗುರು ನಿರೂಪಾದೀಶ್ವರರ ಮಹಾ ಪುರಾಣ ಪ್ರವಚನದಲ್ಲಿ ಮಾತನಾಡುತ್ತಿದ್ದ ಅವರು ಯಾವ ರೀತಿ ಗುಡ್ಡಾಪೂರ ದಾನಮ್ಮ ದೇವಿ ದಿನಕ್ಕೆ 3 ರೀತಿಯ ರೂಪ ಬದಲಾವಣೆ ಮಾಡುತ್ತಿದ್ದಂತೆ ನಿರುಪಾದೀಶ್ವರರು ಕೂಡಾ ಬುಡುಬುಡಿಕೆನ ವೇಷದಲ್ಲಿ, ಪೋತ್ರಾಜನ ನಟನೆಯಲ್ಲಿ ಈ ರೀತಿ ಅನೇಕ ರೂಪ ದರಿಸುವದರೊಂದಿಗೆ ತಮ್ಮಲ್ಲಿ ಬೆತ್ತದಿಂದ ಭಕ್ತೋದ್ದಾರ, ಜನೋದ್ದಾರ ಮಾಡುತ್ತಾ ಸಾಗಿದ್ದರು.
ಒಂದು ಊರಲ್ಲಿ ಹಾಲುಮತದ ಮಹಿಳೆ ಭಕ್ತಿಯಿಂದ ಜಂಗಮರನ್ನು ಕರೆದು ದಿನನಿತ್ಯ ಪ್ರಸಾದ ಮಾಡಿಸುವಂತಹ ಕಾಯಕ ಮಾಡುತ್ತಿದ್ದಳು ಆಕೆಯ ಮಗ ಕುರಿ ಕಾಯುತ್ತಿದ್ದ ಕುರಿ ಮಾರಾಟ ಮಾಡಿಯೇ ಅವರು ಉಪಜೀವನ ನಡೆಸುತ್ತಿದ್ದ ಕುಟುಂಬ ಇದಾಗಿತ್ತು. ಶಿವಾಚಾರ್ಯರು ಓರ್ವರು 64 ಶೀಲದ ಗಂಟನ್ನು ಹೊತ್ತುಕೊಂಡು ಹೊರಟಿದ್ದ ಶಿವಾಚಾರ್ಯರನ್ನು ನೋಡಿ ನಮಸ್ಕಾರ ಮಾಡಿದ ಮಹಿಳೆಯನ್ನು ಕಂಡು ಶಿವಾಚಾರ್ಯರು ಆಕೆಗೆ ಕೇಳುತ್ತಾರೆ ನೀನು ಯಾಕೆ ನಮಸ್ಕಾರ ಮಾಡಿದೆ ಎಂದಾಗ ನಾನು ಮಹಾತ್ಮರನ್ನು ಕಂಡಾಗ ನಮಸ್ಕರಿಸುತ್ತೇನೆಂದು ಮಹಿಳೆ ಹೇಳುತ್ತಾಳೆ ಇದನ್ನು ಅರೀತ ಶಿವಾಚಾರ್ಯರು ನಮಸ್ಕಾರ ಮಾಡಿದ ಶಿವಮ್ಮಳ ಮನೆಗೆ ಬರುತ್ತಾರೆ ಗುರುಗಳು ಬಂದಿದ್ದಾರೆಂದು ಅವರ ಸ್ನಾನಕ್ಕೆ ನೀರು ಕೊಟ್ಟು ಪ್ರಸಾದವೆಂದು ಮಾಡಿದ ನುಚ್ಚನ್ನು ತಂದುಕೊಡುತ್ತಾಳೆ ಆದರೆ ಆ ಗುರು ನಾನು ನುಚ್ಚನ್ನು ಉಣ್ಣುವದಿಲ್ಲಾ ನನಗೆ ಮೃಷ್ಠಾನ್ನಾ ಭೋಜನ ಬೇಕು ಎಂದು ಹಠ ಹಿಡಿಯುತ್ತಾರೆ ಆಕೆಯ ಭಕ್ತಿ ಹೇಗಿದೆ ಎಂಬುದನ್ನು ಅರೀಯಲು ಶಿವಾಚಾರ್ಯರು ತಮಲ್ಲಿಯ 64 ಶೀಲದ ಮಂತ್ರದಿಂದ ಶಿವಾಚಾರ್ಯರು ನೀರು ಹೊಡೆದು ನುಚ್ಚಿನ ತಾಟಿನಲ್ಲಿ ಸಿಂಪಡಿಸಿದಾಗ ಆ ತಾಟಿನ ನುಚ್ಚಿನಲ್ಲಿ ಹುಳಗಳು ಎದ್ದು ಕಾಣುತ್ತವೆ ಆ ಹುಳಗಳನ್ನು ಶಿವಮ್ಮಳಿಗೆ ತೋರಿಸಿದ ಶಿವಾಚಾರ್ಯರು ನಿನ್ನಲ್ಲಿ ಭಕ್ತಿ ಇದ್ದರೆ ಆ ಹುಳಗಳನ್ನು ಹೋಗಲಾಡಿಸಿ ಮೃಷ್ಠಾನ ಪ್ರಸಾದ ಮಾಡು ಎಂದಾಗ ಶಿವಮ್ಮಳು ಭಕ್ತಿಯಿಂದ ಮನೆಯಲ್ಲಿ ಪೂಜಾ ಸ್ಥಾನಕ್ಕೆ ಹೋಗಿ ಅಲ್ಲಿದ್ದ ಗುರುವಿನ ಪಾದೋದಕ ತೆಗೆದುಕೊಂಡು ಬಂದು ಹುಳಗಳಾಗಿದ್ದ ಆ ನುಚ್ಚಿನ ತಾಟಕ್ಕೆ ಸಿಂಪಡಿಸುತ್ತಾಳೆ ಆ ಹುಳಗಳು ನಾಶವಾಗಿ ಆ ನುಚ್ಚಿನ ತಾಟು ಮೃಷ್ಠಾನ್ನಾ ಭೋಜನವಾಗಿ ಮಾರ್ಪಡುತ್ತದೆ ಎಂದು ಶ್ರೀಗಳು ಹೇಳಿದರು.
ಭಕ್ತಿ ಎನ್ನುವಂತಹದ್ದು ಮನುಷ್ಯರಿಗೆ ಮುಖ್ಯವಾಗಿ ಶಿವಾಚಾರ್ಯರು ಮಹಿಳೆಯ ಭಕ್ತಿಯನ್ನು ಮೆಚ್ಚಿ ಆಶಿರ್ವದಿಸಿ ಹೋಗುತ್ತಾರೆ ಈ ಆದ ಘಟನೆ ಕುರಿತು ಶಿವಾಚಾರ್ಯರು ನೀರುಪಾದೀಶ್ವರರಿಗೆ ತಿಳಿ ಹೇಳಿ ಆ ಮಹಿಳೆಯಲ್ಲಿದ್ದ ಭಕ್ತಿ ಕುರಿತು ತಿಳಿಸುತ್ತಾರೆಂದು ಶ್ರೀಗಳು ಹೇಳಿದರು. ದಿವ್ಯವಾದಂತಹ ಶಕ್ತಿ ಶರಣರಲ್ಲಿದೆ ನೀರುಪಾದೀಶ್ವರರಲ್ಲಿ ಗುರು ಕೊಟ್ಟಂತಹ ಮಂತ್ರ ಭಕ್ತಿ ಅರಿವು ಈ ಎಲ್ಲವನ್ನು ತಿಳಿದುಕೊಂಡು ಹೊರಡುತ್ತಾರೆ ನೀರು ಕಂಡಲ್ಲಿ ಸ್ನಾನ ಪ್ರಸಾದ ವಿದ್ದಲ್ಲಿ ಊಟ ಮಾಡುತ್ತಾ ಸಾಗಿದ ನಿರುಪಾದೀಶ್ವರರು ಹಾಸಿಗೆ ಇಲ್ಲದೇ ಮಲಗುತ್ತಾ ಸಾಗುತ್ತಾರೆ ಹಾಸಿಗೆಯ ಮೇಲೆ ಮಲಗುವವನಕ್ಕಿಂತ ಹಾಸಿಗೆ ಇರದೇ ಮಲಗುವವನೇ ನಿಜವಾದ ಶ್ರೀಮಂತವೆಂದು ಶ್ರೀಗಳು ಹೇಳಿದರು.
ದಾರಿಯಲ್ಲಿ ಮುಂದೆ ಸಾಗುತ್ತಾ ನಿರುಪಾದೀಶ್ವರರನ್ನು ನೋಡಿದ ವೃದ್ದ ನೋರ್ವ ಗುರುಗಳೇ ನನ್ನ ಮಗಳಿಗೆ ದೇವ್ವ ಬಡಿದಿದೆಯಂತೆ ಆಕೆಗೆ ಎಲ್ಲಿ ತೋರಿಸಿದರೂ ಕಡಿಮೆಯಾಗಿಲ್ಲಾ ಎಂದು ಆತ ಹೇಳಿದಾಗ ನೀರುಪಾದೀಶ್ವರರು ಆತನ ಮಗಳನ್ನು ಕರೆಯಿಸಿ ಆಕೆಗೆ ಪಂಚ ರುದ್ರಾಕ್ಷೀಯನ್ನು ಕೊಡುತ್ತಾರೆ ಇದನ್ನು ಮನೆಯಲ್ಲಿ ಪೂಜಿಸಿ ಕಟ್ಟಿಕೋ ಎಂದಾಗ ಆ ಮಹಿಳೆ ಮನೆಗೆ ಹೋಗಿ ರುದ್ರಾಕ್ಷೀ ಕಟ್ಟಿಕೊಳ್ಳಬೇಕೆಂಬ ಅಪೇಕ್ಷೆ ಪಟ್ಟಾಗ ಆಕೆಯ ಮನೆಯಲ್ಲಿ ಆಕೆಯ ಅತ್ತೆ ಈ ರುದ್ರಾಕ್ಷೀ ಎಲ್ಲಿಂದ ತಂದಿ ಇದು ಯಾರು ಕೊಟ್ಟಿದ್ದಾರೆ ನಮ್ಮ ಜಾತಿಯವರು ಕಟ್ಟಿಕೊಳ್ಳುವಂತಹದಲ್ಲಾ ಅದನ್ನು ತೆಗದಿಡು ಆಚೆಗೆ ಎಂದು ಹೇಳಿದಾಗ ಮರಳಿ ಬಂದು ಆ ಮಹಿಳೆ ಆದ ಘಟನೆ ಕುರಿತು ನಿರುಪಾದೀಶ್ವರರಿಗೆ ತಿಳಿಸುತ್ತಾಳೆ ನಿರುಪಾದೀಶ್ವರರೇ ಆ ರುದ್ರಾಕ್ಷೀಯನ್ನು ತೆಗೆದುಕೊಂಡು ತಮ್ಮಲ್ಲಿದ್ದ ದಾರದಲ್ಲಿ ರುದ್ರಾಕ್ಷೀಯನ್ನು ಪೊಣಿಸಿ ಆಕೆಯ ಕೊರಳಿಗೆ ಕಟ್ಟಿದಾಗ ಆಕೆಗೆ ಬಡೆದಂತ ದೆವ್ವ ಒಮ್ಮಿಂದೊಮ್ಮಲೇ ಶ್ರೀಗಳಿಗೆ ನಮಿಸಿ ಮನುಷ್ಯನಾಗಿ ಮಾರ್ಪಟ್ಟನಂತೆ ಈ ವಿಷಯ ಕುರಿತು ಮಾನವನಾದ ಆತ ತಾನು ಹಿಂದೆ ಮಾಡಿದ ಪಾಪದ ಕುರಿತು ತಿಳಿ ಹೇಳಿ ನಿಮ್ಮ ಪಾದಸ್ಪರ್ಷದಿಂದ ನಾನು ಮನುಷ್ಯನಾಗಿರುವದು ಹರ್ಷ ತಂದಿದೆ ನಾನು ಇಂದು ಪಾಪ ಮುಕ್ತನಾಗಿದ್ದೇನೆ ಇನ್ನುಮುಂದೆ ಯಾವುದೇ ಪಾಪದ ಕೆಲಸ ಮಾಡುವದಿಲ್ಲಾವೆಂದ ಮನುಷ್ಯನಾದ ಆತ ಮನುಷ್ಯನಾಗಿಯೇ ಉಳಿದನೆಂದು ಶ್ರೀಗಳು ಹೇಳಿದರು.
ಮನುಷ್ಯನ ಮನಸ್ಸು ಯಾವಾಗ ಸ್ವಚ್ಚವಾಗುತ್ತದೆ ಎಂದರೆ ಸದ್ಗುರುವಿನ ಸ್ಥಾನಕ್ಕೆ ಬಂದಾಗ ಸ್ವಚ್ಚವಾಗುತ್ತದೆ ಕಲ್ಲನ್ನು ಬಂಗಾರವನ್ನಾಗಿ ಮಾರ್ಪಡಿಸುತ್ತಿದ್ದ ನಿಂಗಮ್ಮ ಎಂಬವಳಿಗೆ ದಾನಮ್ಮ ಎಂದು ಬಸವಣ್ಣನವರು ಹೆಸರು ಇರಿಸಿದರೆಂದು ಹೇಳಿದ ಶ್ರೀಗಳು ಅಡವಿ ಸಿದ್ದೇಶ್ವರರು ಹೇಳಿದಂತೆ ಭಕ್ತಿ ಎಂಬುದು ಬಹಳೇ ದೊಡ್ಡದಿದೆ ಗರಗದ ಮಡಿವಾಳೇಶ್ವರರು, ಶಿಶುನಾಳ ಶರೀಪರು, ಅಡವಿ ಸಿದ್ದೇಶ್ವರರು ಹಾಗೂ ಸಾಂಭ ಪ್ರಭು ಶರಣಮುತ್ಯಾರನ್ನು ನೆನಿಸಿದಂತೆ ಇವರಲ್ಲಿ ಎಲ್ಲರೂ ತಮ್ಮ ಶ್ರೇಷ್ಠತೆಯನ್ನು ಪಡೆದು ಭಕ್ತೋದ್ದಾರ, ಜನ್ನೋದ್ದಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟದ್ದರೆಂದು ಹೇಳಿದರಲ್ಲದೇ ಬಾಳಿ ಎಲೆ ನಾನು ಶ್ರೇಷ್ಠವೆಂದು ಕರಿಭೇವಿನ ಎಲೆ ನಾನು ಶ್ರೇಷ್ಠವೆಂದು ವಿಳೆದೆಲೆ ನಾನು ಶ್ರೇಷ್ಠನೆಂದು ತಮ್ಮ ತಮ್ಮ ಶ್ರೇಷ್ಠತೆ ಕುರಿತು ಜಗಳವಾಡುತ್ತಿದ್ದ ಈ ಎಲೆಗಳು ಈ ಜಗಳವನ್ನು ಅರೀತ ನಾನೇ ಶ್ರೇಷ್ಠವೆಂದು ಪತ್ರಿದಳ ತಿಳಿ ಹೇಳಿ ಗುರು ಜಂಗಮರ ಲಿಂಗದ ಮೇಲೆ ಕಾಣುತ್ತಿದ್ದೇನೆ ನಾನೇ ಎಲ್ಲದರಕ್ಕಿಂತ ಶ್ರೇಷ್ಠವೆಂದು ಪತ್ರಿ ಎಲೆ ಹೇಳಿದ್ದರ ಕುರಿತು ಕಿರು ಕಥೆಯೊಂದನ್ನು ಹೇಳಿ ಭಕ್ತ ಸಮೂಹಕ್ಕೆ ತಿಳಿ ಹೇಳಿದರು.
ವೇದಿಕೆಯ ಮೇಲೆ ಬಸಣ್ಣಮುತ್ಯಾ ಶರಣರ, ಶರಣಪ್ಪಮುತ್ಯಾ ಶರಣರ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಶರಣಗೌಡ ಪೊಲೀಸ್‍ಪಾಟೀಲ, ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಶ್ರೀಮತಿ ಕಾಶಿಬಾಯಿ ಶರಣರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.