ಚುಂಚಶ್ರೀಗಳ ಆಶೀರ್ವಾದ ಪಡೆದ ಮನ್ಸೂರ್ ಅಲಿಖಾನ್
ಸಂಜೆವಾಣಿ ವಾರ್ತೆ
ಮಂಡ್ಯ:ಮಾ.25:- ಕೆ.ಆರ್.ಪೇಟೆಯ ಸುಪುತ್ರ ರಾಜ್ಯ ಸಭೆಯ ಮಾಜಿ ಉಪ ಸಭಾಪತಿಗಳು ಹಾಗೂ ಕೇಂದ್ರದ ಮಾಜಿ ಸಚಿವ ಕೆ. ರೆಹಮಾನ್ ಖಾನ್ ಅವರ ಸುಪುತ್ರ ಕೃಷ್ಣರಾಜಪೇಟೆಯ ಮೊಮ್ಮಗ ಯುವನಾಯಕ, ಸಂಘಟನಾಚತುರ ಕೆ.ಮನ್ಸೂರ್ ಅಲಿಖಾನ್ ಅವರನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮುಂಬರುವ ಲೋಕಸಭಾ ಚುನಾವಣೆಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಕಾಂಗ್ರೆಸ್ ಹೈ ಕಮಾಂಡ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠಕ್ಕೆ ಭೇಟಿ ನೀಡಿ ಶ್ರೀ ನಿರ್ಮಲಾ
ನಂದನಾಥ ಶ್ರೀಗಳ ಆಶೀರ್ವಾದ ಪಡೆದರು.
ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್,ಕಾಂಗ್ರೆಸ್ ನಾಯಕರಾದ ವಿಜಯ್ ರಾಮೇಗೌಡ, ಬಿ. ಎಲ್.ದೇವರಾಜು, ಕಿಕ್ಕೇರಿ ಸುರೇಶ್, ಬಿ. ನಾಗೇಂದ್ರ ಕುಮಾರ್, ಹರಳಹಳ್ಳಿ ವಿಶ್ವನಾಥ್, ಸಿ.ಡಿ.ಗಂಗಾಧರ್, ಕೊಡಿಮಾರನಹಳ್ಳಿ ದೇವರಾಜು, ಚೇತನಾ ಮಹೇಶ್, ಡಿ. ಪ್ರೇಮಕುಮಾರ್, ಕೆ.ಸಿ. ಮಂಜುನಾಥ್, ಹೆಚ್.ಎನ್. ಪ್ರವೀಣ್, ಪುರಸಭೆ ಮಾಜಿ ಅಧ್ಯಕ್ಷ ಕೆ. ಗೌಸ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.