ಜನಪದ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ: ಡಾ ಮಹಾದೇವ ಶಿವಾಚಾರ್ಯ
ಸಂಜೆವಾಣಿ ವಾರ್ತೆ,
ವಿಜಯಪುರ.ಮಾ.25:ಜನಪದ ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಡಾ. ಮಹಾದೇವ ಶಿವಾಚಾರ್ಯರು ಹೇಳಿದರು.
19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಜಾನಪದ ಸಂಬ್ರಮ ಗೋಷ್ಠಿಯ ದಿವ್ಯ ಸಾನ್ನಿಧ್ಯ ವಹಿಸಿದ ಅವರು ಮಾತನಾಡಿ, ಮರೆಯಾಗುತ್ತಿರುವ ಜಾನಪದ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಆಗಬೇಕಾಗಿದೆ ಎಂದರು.
ಬಾಳನಗೌಡ ಪಾಟೀಲ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ಜಾನಪದವು ಅನುಭವದಲ್ಲಿ ಕಂಡು ಬಂದ ವಿಶೇಷ ಕಲೆ. ಜಾನಪದವು ಆಚಾರ, ವಿಚಾರ, ಸಂಸ್ಕೃತಿಯನ್ನು ಒಳಗೊಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಸಂಗಮೇಶ ಮೇತ್ರಿ ಮಾತನಾಡಿ, ಸಾಹಿತ್ಯ ಸಮ್ಮೇಳನಗಳಲ್ಲಿ ಜನಪದ ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಉಪನ್ಯಾಸಗಳನ್ನು ಏರ್ಪಡಿಸುವುದರಿಂದ ವಿದ್ಯಾರ್ಥಿಗಳಿಗೆ ಜನಪದ ಸಂಸ್ಕೃತಿಯ ಮಹತ್ವ ಮತ್ತು ಅರಿವು ಮೂಡಿಸಲು ಸಹಕಾರಿಯಾಗುತ್ತದೆ ಎಂದರು.
ಜನಪದರು ಕಂಡ ಶಿವಶರಣ-ಶಿವಶರಣೆಯರ ಕುರಿತು ಉಪನ್ಯಾಸ ನೀಡಿದ ಡಾ. ಸೋಮಶೇಖರ ವಾಲಿ, ಜಾನಪದ ಸಾಹಿತ್ಯ ಕಲ್ಲು ಸಕ್ಕರೆ ಇದ್ದಂತೆ. ನಮ್ಮ ಜೀವನಕ್ಕೆ ಬೇಕಾದ ಆದರ್ಶಗಳನ್ನು ಜಾನಪದವು ನೀಡುತ್ತದೆ. ಇಂದಿನ ಮಕ್ಕಳಿಗೆ ಜಾನಪದ ಹಾಡು ಹಾಗೂ ಸಾಹಿತ್ಯವನ್ನು ಪರಿಚಯಿಸುವ ಅವಶ್ಯಕತೆ ಇದೆ ಎಂದರು.
ಮರೆಯಾಗುತ್ತಿರುವ ಜಾನಪದ ಸಂಸ್ಕೃತಿ ವಿಷಯದ ಕುರಿತು ಮಾತನಾಡಿದ ಡಾ. ಎಂ. ಎಸ್. ಮಾಗಣಗೇರಿ, ಜಾನಪದವು ನಮ್ಮ ಮೂಲ ಸಂಸ್ಕೃತಿ ಆಗಿದೆ. ಇಂದು ಯಂತ್ರೋಪಕರಣಗಳನ್ನು ಬಳಸುತ್ತಿರುವ ನಾವು ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಜೋಗುಳ ಪದ, ಹಂತಿ ಹಾಡು, ಅವಿಭಕ್ತ ಕುಟುಂಬಗಳು ಇಲ್ಲವಾಗಿವೆ. ಇಂದಿನ ಮಕ್ಕಳಿಗೆ ಕೌಟುಂಬಿಕ ಮೌಲ್ಯಗಳನ್ನು ಕಲಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಹೇಳಿದರು.
ಜಾನಪದ ಸಾಹಿತ್ಯ ಮತ್ತು ಮಹಿಳೆ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ಶಿವಲೀಲಾ ಮುರಾಳ, ಜಾನಪದ ಸಾಹಿತ್ಯ ಕಟ್ಟಿದವಳು ತಾಯಿ. ಇಂದಿನ ತಾಯಂದಿರಗಳಾದ ನಾವುಗಳು ಆ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ಅತ್ಯವಶ್ಯಕವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರೇವಣಸಿದ್ದಪ್ಪ ಕೊಪ್ಪದ, ರಾವತ ತಳಕೇರಿ, ಶಿವಾನಂದ ಮಂಗಾನವರ, ಸಾರವಾಡ ಜಾನಪದ ಗಾಯನ ಪ್ರಸ್ತುತಪಡಿಸಿದರು.
ಮನಗೂಳಿಯ ಪೂಜ್ಯ ಶ್ರೀ ಅಭಿನವ ಸಂಗನಬಸವ ಸ್ವಾಮಿಗಳು, ಇಂಗಳೇಶ್ವರದ ಡಾ. ಚನ್ನಬಸವ ಸ್ವಾಮಿಗಳು ಹಾಗೂ ಸಿಂದಗಿಯ ಶ್ರೀ ಶಾಂತಗಂಗಾಧರ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಸಿದ್ದು ಮೇಲಿನಮನಿ ಹಾಗೂ ತಂಡದವರು ಜಾನಪದ ಗೀತೆಗಳನ್ನು ಹಾಡಿದರು. ಪೆÇ್ರ. ಶರಣಗೌಡ ಪಾಟೀಲ ಸ್ವಾಗತಿಸಿದರು. ಪೆÇ್ರ. ದಾನಮ್ಮ ಗಿಡವೀರ ನಿರೂಪಿಸಿದರು. ಪೆÇ್ರ. ಮಯೂರ ತಿಳಗುಳಕರ ಹಾಗೂ ಸದಾಶಿವ ಪೂಜಾರಿ ನಿರ್ವಹಿಸಿದರು. ಪೆÇ್ರ.ಸುಭಾಷಚಂದ್ರ ಕನ್ನೂರ ವಂದಿಸಿದರು.
ಕಾರ್ಯಕ್ರಮದಲ್ಲಿ ಸುರೇಶ ಜತ್ತಿ,, ಭಾರತಿ ಪಾಟೀಲ, ರವಿ ಕಿತ್ತೂರ, ಮಹಾದೇವಿ ತೆಲಗಿ, ಮನು ಪತ್ತಾರ, ಅನ್ನಪೂರ್ಣ ಬೆಳ್ಳೆಣ್ಣವರ ಹಾಗೂ ಸಾಹಿತಿಗಳು ಉಪಸ್ಥಿತರಿದ್ದರು.