ಮಾರ್ಚ್-27ರಂದು ವಿಶ್ವ ರಂಗಭೂಮಿ ದಿನಾಚರಣೆ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.೨೫: ರಂಗಸೌರಭ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ -2024 ಕಾರ್ಯಕ್ರಮವನ್ನು ಮಾರ್ಚ್ 27ರಂದು ಬೆಳಿಗ್ಗೆ 10-30ಕ್ಕೆ ನಗರದ ಕೆ.ಬಿ.ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಲಾಗಿದೆ.ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಜಿ.ಎಸ್.ಉಜ್ಜಿನಪ್ಪ ಉದ್ಘಾಟಿಸುವರು. ಪ್ರಾಚಾರ್ಯ ಡಾ.ಎ.ಜಿ.ಬಸವರಾಜಪ್ಪ ಅಧ್ಯಕ್ಷತೆ ವಹಿಸುವರು. ನಿವೃತ್ತ ಮುಖ್ಯಶಿಕ್ಷಕ ಹಾಗೂ ಸಾಹಿತಿ ಹುರುಳಿ ಬಸವರಾಜ್ ಶಿಕ್ಷಣದಲ್ಲಿ ರಂಗಭೂಮಿಯ ಪ್ರಸ್ತುತತೆ ವಿಷಯವಾಗಿ ಉಪನ್ಯಾಸ ನೀಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಉಪನ್ಯಾಸಕರಾದ ನಟರಾಜ, ಸ್ವಾತಿ, ಹೇಮಲತ, ಪಲ್ಲವಿ, ಆರ್.ಕಾವೇರಿ, ಈ.ಮಹಾಂತೇಶ್ ಮುಖ್ಯಅತಿಥಿಯಾಗಿ ಉಪಸ್ಥಿತರಿರುವರು. ರಂಗ ನಿರ್ದೇಶಕ ಕೆಪಿಎಂ. ಗಣೇಶಯ್ಯ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಾರ್ವೆ ದೇಶದ ವಿಶ್ವವಿಖ್ಯಾತ ನಾಟಕಕಾರ, ಹಿರಿಯ ಸಾಹಿತಿ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಜಾನ್ ಪೋಸ್ಸೇ ವಿರಚಿತ ರಂಗಸAದೇಶವನ್ನು ವಾಚಿಸುವರು.ರಂಗಸೌರಭ ಕಲಾವಿದರು ರಂಗಜAಗಮ ಬಿ.ವಿ.ಕಾರಂತ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ನಾಟಕಕಾರ ಚಂದ್ರಶೇಖರ ಕಂಬಾರ, ಪು.ತಿ.ನರಸಿಂಹಾಚಾರ್ ಮುಂತಾದ ನಾಟಕಕಾರರ ಹಾಗೂ ಹೆಸರಾಂತ ನಿರ್ದೇಶಕರ ಸಂಗೀತ ಸಂಯೋಜನೆಯ ಗೀತೆಗಳನ್ನು ಹಾಡುವರು. ರಂಗಭೂಮಿ ಕಲಾವಿದರಾದ ಪ್ರಕಾಶ್ ಬಾದರದಿನ್ನಿ, ಶ್ರೀನಿವಾಸ.ವಿ.ಮಳಲಿ, ವಕೀಲ ಎಸ್.ವಿಜಯ್‌ಕುಮಾರ್, ನನ್ನಿವಾಳ ಹನುಮಂತಪ್ಪ, ಚನ್ನಬಸಪ್ಪ, ಗಾಯಕರಾದ ಗಂಗಾಧರ.ಕೆ, ಮೈಲಾರಿ, ಹಿಮಂತರಾಜು ಮುಂತಾದ ಕಲಾವಿದರು ಭಾಗವಹಿಸಲಿದ್ದಾರೆ ಎಂದು ರಂಗಸೌರಭ ಕಲಾ ಸಂಘದ ಡಾ.ಕೆ.ಮೋಹನ್‌ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.