ಉಧೋ ಉಧೋ ದೇವನಗರಿ ದುಗ್ಗಮ್ಮ’ ಆಲ್ಬಮ್ ಹಾಡು ಬಿಡುಗಡೆ

ಸಂಜೆವಾಣಿ ವಾರ್ತೆ
ದಾವಣಗೆರೆ ಮಾ.24 ;ದಾವಣಗೆರೆಯ ಯುವ ಪ್ರತಿಭೆಗಳೆಲ್ಲ ಒಟ್ಟಿಗೆ ಸೇರಿ ನಿರ್ಮಿಸಿರುವ “ಉಧೋ ಉಧೋ ದೇವನಗರಿ ದುಗ್ಗಮ್ಮ” ಭಕ್ತಿ ಹಾಡನ್ನು ನಗರದ ನಿಮ್ಮ ಸಿನಿಮಾ ಮಿನಿ ಥಿಯೇಟರಲ್ಲಿ ಚಿತ್ರ ತಂಡದ ಹಿರಿಯ ಕಲಾವಿದರಾದ ವಿಜಯ ವೀರೇಂದ್ರ ರವರು ಲೋಕಾರ್ಪಣೆ ಮಾಡಿದರು.ರತ್ನು ಕ್ರಿಯೇಷನ್ಸ್ ಅಡಿಯಲ್ಲಿ ಮೂಡಿಬಂದಿರುವ 2ನೇ ಹಾಡು ಇದಾಗಿದ್ದು ಶೀತಲ್ ಬಂಜಾರ ಅವರ ನಿರ್ಮಾಣದಲ್ಲಿ ನಿರ್ಮಾಣಗೊಂಡು ಬಂಜಾರ ಅಫೀಷಿಯಲ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ದೀಪಾಂಜಲಿ ಯು.ಎಂ ಆವರಗೆರೆ ಸಾಹಿತ್ಯ ಬರೆದಿದ್ದು, ಬಂಜಾರ ಗಾಯಕ್ ಕುಬೇರ ನಾಯ್ಕ್ ಸಂಗೀತ ನಿರ್ದೇಶನ ನೀಡಿದ್ದಾರೆ. ಅಜಯ್ ವಾರಿಯರ್ ಅವರು ಹಾಡು ಹಾಡಿದ್ದು, ನಿಹಾರಿನ ರಾಥೋಡ್ ಹಾಗೂ ನೇತ್ರಾವತಿ ಉಮ್ಮಾ ನಾಯ್ಕ್ ರವರ ಸಹಗಾಯನವಿದೆ.ಇನ್ನು ಈ ಹಾಡಿಗೆ ಹರೀಶ್ ಲಕ್ಕಿ ನಿರ್ದೇಶನ ಮಾಡಿದ್ದು, ಅಭಿ ಬಂಜಾರ ಅವರ ಸಹ ನಿರ್ದೇಶನವಿದೆ, ಪ್ರೊಡಕ್ಷನ್ ಮ್ಯಾನೇಜರಾಗಿ ವಸಂತ್ ಜೊಳ್ಳಿ, ನವಾಜ್ ಕಾರ್ಯನಿರ್ವಹಿಸಿದ್ದು ಛಾಯಾಗ್ರಹಣ ಹಾಗೂ ಸಂಕಲನವನ್ನು ಜಬಿ ದೇವರಬೆಳಕೆರೆ, ಹರ್ಷ ವರ್ಧನ್, ವಿ.ಎಫ್.ಎಕ್ಸ್ ರಾಜ್ ಕಿರಣ್, ಪೋಸ್ಟರ್ ಡಿಸೈನ್ ಅರುಣ್ ಕುಮಾರ್ ಮಾಡಿದ್ದಾರೆ.ತಾರಾಗಣದಲ್ಲಿ ಶೀತಲ್ ಬಂಜಾರ, ತಿಲಕ್ ರತ್ನು, ಡಿ.ಜೆ ಕಮಾರ್, ವಸಂತ್ ಜೊಳ್ಳಿ, ಅಭಿ ಬಂಜಾರ, ಧನರಾಜ್, ಆಕಾಶ್ ಗುಪ್ತ, ರಾಜ್ ಕಿರಣ್, ನವದುರ್ಗೆ ಅವತಾರದಲ್ಲಿ ಆಶಾ, ರಮ್ಯ, ನಂದಿನಿ, ಪ್ರಕೃತಿ, ನೀಮಿತಾ ರಾಥೋಡ್, ನಿಹರೀಕಾ ರಾಥೋಡ್, ಸ್ಪಂದನ ನಾಯ್ಕ್, ಸಂಜನಾ ನಾಯ್ಕ್, ಚಂದನ, ಸಂಗೀತಾ ಕಾಣಿಸಿಕೊಂಡಿದ್ದು ಸಹ ಕಲಾವಿದರಾಗಿ ಜೋಯಾ, ಬೀನಾ, ಮೀನಾಕ್ಷಿ ವೆಂಕಟೇಶ್, ನೇತ್ರಾವತಿ ಉಮಾನಾಯ್ಕ್, ವಿಜಯ ವೀರೇಂದ್ರ, ಅನ್ನಪೂರ್ಣ, ಸುಜಾತಾ, ಅನುಶ್ರೀ, ನೇತ್ರಾವತಿ, ಶಕುಂತಲಾ, ಜ್ಯೋತಿ ಟಿಕ್ ಟಾಕ್, ಶೋಭಾ, ವೇಧ, ದೀಪಾ, ತಾರ, ರೂಪ ಕೆ, ನಿರ್ಮಲ, ಮೋನಿಷಾ, ಮಾನಸ, ಮುರಳಿ (ರಾಹುಲ್ಲ) ಮತ್ತಿತರರು ಅಭಿನಯಿಸಿದ್ದಾರೆ.ಹಾಡು ಬಿಡುಗಡೆ ವೇಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಿಪ್ಪೇಶ್ ನಾಯ್ಕ್, ಶೋಭಾ, ಸಯ್ಯದ್ ಅಮ್ಜದ್, ದೀಪಕ್, ತೇಜು, ಡಿಜೆ ನಿಂಗನಾಯ್ಕ್, ಭಿಮೇಶ್, ಸಂತೋಷ್ ಮತ್ತಿತರರು ಇದ್ದರು