ಸ್ಥಳದಲ್ಲೇ ಉಚಿತ ಚಿತ್ರ ಬರೆಯುವ ಸ್ಪರ್ಧೆಗೆ ಆಹ್ವಾನ

ಸಂಜೆವಾಣಿ ವಾರ್ತೆದಾವಣಗೆರೆ-ಮಾ.25:ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ದಾವಣಗೆರೆಯ ದುರ್ಗಾಂಬಿಕಾ ಜಾತ್ರೆಯ ಪ್ರಯುಕ್ತ ಸಾರ್ವಜನಿಕವಾಗಿ ಸ್ಥಳದಲ್ಲೇ ಉಚಿತ ಚಿತ್ರ ಬರೆಯುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.ದಾವಣಗೆರೆಯ ಪ್ರವಾಸಿ ಮಂದಿರದ ರಸ್ತೆಯಲ್ಲಿರುವ ರೋಟರಿ ಬಾಲಭವನದ ಮೊದಲನೇ ಮಹಡಿಯ ಸಭಾಂಗಣದಲ್ಲಿ ಮಾ.31 ರ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಈ ಸ್ಪರ್ಧೆಯಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಯಾರಾದರೂ ಭಾಗವಹಿಸಬಹುದು. ವಯಸ್ಸಿಗೆ ಅನುಗುಣವಾಗಿ ವಿವಿಧ ವಿಭಾಗಗಳಾಗಿ ವಿಂಗಡಿಸಲಾಗುವುದು. ಶ್ರೀ ಮಾರಿಕಾಂಬ, ಶ್ರೀ ದುರ್ಗಾಂಬಾ, ಶ್ರೀದೇವಿ ಚಿತ್ರ ಬರೆಯಬೇಕು. ಚಿತ್ರ ಬರೆಯವ ಹಾಳೆ (ಡ್ರಾಯಿಂಗ್ ಶೀಟ್) ಸಂಸ್ಥೆ ಉಚಿತವಾಗಿ ವಿತರಿಸಲಾಗವುದು ಇನ್ನುಳಿದ ಪರಿಕರ ಸ್ಪರ್ಧಿಗಳು ತರಬೇಕು.ಮಾ.30 ರೊಳಗೆ ಹಿರಿಯ ಚಿತ್ರ ಕಲಾವಿದ ತೀರ್ಪುರಾರರಾದ ಚಂದ್ರಶೇಖರ ಸಂಗ 9731062936 ಈ ಸನೀಹವಾಣಿಗೆ ಸಂಪರ್ಕಿಸಿ ಹೆಸರು ನೊಂದಾಯಿಸಬಹುದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9538732777 ಈ ಸನೀಹವಾಣಿಗೆ ಸಂಪರ್ಕಿಸಿಬಹುದು.