ನಿಸ್ವಾರ್ಥದ ಪ್ರತಿರೂಪವೇ ಹೆಣ್ಣು : ಡಾ.ಎಸ್.ಬಿ.ಹಂದ್ರಾಳ್
ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ24: ಗೃಹಿಣಿಯಾಗಿ ಯಾವಾಗಲೂ ಏನನ್ನು ಆಪೇಕ್ಷಿಸದ ಹೆಣ್ಣು ನಿಸ್ವಾರ್ಥದ ಪ್ರತಿರೂಪವಾಗಿದ್ದಾಳೆ ಆದರೂ ಆಕೆಯ ಶ್ರಮ ಗುರುತಿಸದಿರುವುದು ವಿಷಾದನೀಯ ಎಂದು ಖ್ಯಾತ ವೈದ್ಯ ಡಾ.ಎಸ್.ಬಿ.ಹಂದ್ರಾಳ್ ಅಭಿಪ್ರಾಯಪಟ್ಟರು.
ಅವರು ಪತಂಜಲಿ ಯೋಗ ಸಮಿತಿ, ಬಲ್ಡೋಟಾ ಪಾರ್ಕ್ ಯೋಗ ಕೇಂದ್ರ ಭಾನುವಾರ ಹಮ್ಮಿಕೊಂಡ ಯೋಗ ದಂಪತಿಗಳ  ದಿವಸ್ ಕಾರ್ಯಕ್ರಮದ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸರಳ ಹಾಗೂ ಸುಲಭ ಯೋಗವಿಧಾನಗಳ ಮಾಹಿತಿ ನೀಡಿ ಮಾತನಾಡುತ್ತಾ, ದುಡಿಯು ಪ್ರತಿಯೊಬ್ಬರಿಗೂ ಒಂದು ಸಮಯ, ಶ್ರಮಕ್ಕೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ ಆದರೆ ದಿನದ 24ಗಂಟೆಯೂ ಯಂತ್ರದಂತೆ ದುಡಿಯುವ ಮಹಿಳೆಯ ಶ್ರಮಕ್ಕೆ ಪ್ರತಿಫಲವಿಲ್ಲದಿದ್ದರೂ ನಿಸ್ವಾರ್ಥದ ಬದುಕು ಗುರುತಿಸದಿರುವುದು ನಿಜಕ್ಕೂ ಅಚ್ಚರಿಯ ಸಂಗತಿ ಹೀಗದ್ದರೂ ಶ್ರಮಕ್ಕೆ ಪ್ರತಿಫಲ ಆಪೇಕ್ಷಿಸದಿರುವುದು ಆಕೆಯ ಹಿರಿಮೆಗೆ ಗರಿಯೇ ಸರಿ ಎಂದು ಹೆಣ್ಣಿನ ಶ್ರಮ ಗುರುತಿಸುವಂತಾಗಬೇಕು, ಇಂತಹ ಕಾರ್ಯಕ್ರಮಗಳು ಆಕೆಯನ್ನು ಮತ್ತಷ್ಟು ಚೈತನ್ಯಭರಿತವಾಗುವಂತೆ ಮಾಡಲಿದ್ದು ಇಂತಹ ಅಭ್ಯಾಸಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದರು.
ಕಳೆದ ಒಂದು ತಿಂಗಳಿಂದ ನಿತ್ಯವೂ ಯೋಗ ದ್ಯಾನ ಪ್ರಾಣಾಯಾಮಗಳನ್ನು ದಂಪತಿಗಳಿಂದಲೇ ನೆರವೇರಿಸಿದ್ದು ಆ ಎಲ್ಲಾ ದಂಪತಿಗಳನ್ನು ಕರೆದು ಗೌರವಿಸುವ ಮೂಲಕ ದಂಪತಿ ದಿವಸ್ ಆಚರಿಸಲಾಯಿತು. ಇದೆ ಸಂದರ್ಭದಲ್ಲಿ ವಿವಾಹ ವಾರ್ಷಿಕೋತ್ಸವದ 48 ನೇ ಸಂಭ್ರಮದಲ್ಲಿ ಶ್ರೀನಿವಾಸರಾವ್ ದಂಪತಿಗಳು, ಇಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳುತ್ತಿದ್ದ ಡಾ.ಎಸ್.ಬಿ.ಹಂದ್ರಾಳ್ ದಂಪತಿಗಳನ್ನು ಸಹ ಸನ್ಮಾನಿಸಲಾಯಿತು. 
ಕಾರ್ಯಕ್ರಮಕ್ಕೆ ಡಾ.ಹಂದ್ರಾಳ್ ಪತ್ನಿ ವಿಜಯಲಕ್ಷ್ಮೀ, ರಾಜ್ಯ ಯುವ ಪ್ರಭಾರಿ ಕಿರಣ್‍ಕುಮಾರ, ಅನಂತ ಜೋಶಿ, ಡಾ.ರಾಜಶೇಖರ, ಡಾ.ಪಿ.ಡಿ.ವಿನಾಯಕ, ಭೂಪಾಳ ರಾಘವೇಂದ್ರಶೆಟ್ಟಿ, ಬಾಲಚಂದ್ರ ಶರ್ಮಾ, ಶ್ರೀನಿವಾಸ ಮಂಚಿಕಟ್ಟಿ, ಮಂಗಳಮ್ಮ, ಶ್ರೀನಿವಾಸರಾವ್, ಕಟ್ಟಾ ನಂಜಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.