ಮೋದಿ ಆಡಳಿತದಿಂದ ವಿಶ್ವದ ದೃಷ್ಠಿ ಭಾರತದತ್ತ : ಶ್ರೀರಾಮುಲು
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಮಾ.24 ಕೇಂದ್ರದಲ್ಲಿ 10 ವರ್ಷ ಆಡಳಿತ ಮಾಡಿದ ಮೋದಿ ಸರ್ಕಾರದ ಉತ್ತಮ ಕೆಲಸ ಇಡೀ ವಿಶ್ವವೇ ದೇಶದ ಕಡೆ ನೋಡುವಂತಾಗಿದೆ ಎಂದು ಬಳ್ಳಾರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಹೇಳಿದರು.
 ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಬಿಜೆಪಿ ಬೂತ್ ವಿಜಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ದೇಶದ ಜನ  ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಎಂದು ಸಂಕಲ್ಪ ಮಾಡಿದ್ದಾರೆ. ರಾಜ್ಯದಲ್ಲಿ ಯಾವಾಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಅವಾಗಲೇ ಬರ ಬರುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅತ್ಯುತ್ತಮ ಮಳೆಯಾಗಿ ಎಲ್ಲಾ ಜಲಾಶಯಗಳು ತುಂಬಿ ತುಳುಕುತ್ತಿದ್ದವು ಆದರೆ ಈಗ ನೀರಿಗಾಗಿ ಜನರು ಪರದಾಡುವಂತಾಗಿದೆ. ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಲೋಕಸಭಾ ಚುನಾವಣೆಯಲ್ಲಿ ಜನರು 28 ಕ್ಷೇತ್ರಗಳಲ್ಲಿ ಬಿಜೆಪಿ ಆರಿಸಿ ಕಳಿಸಬೇಕೆಂದು ನಿರ್ಧಾರ ಮಾಡಿದ್ದಾರೆ. ಅದರಂತೆ ನಮ್ಮ ನಾಯಕರು ಯಡಿಯೂರಪ್ಪ ಮತ್ತು ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಸಂಕಲ್ಪ ಮಾಡಿದ್ದಾರೆ ಎಂದರು.
 ವಿಧಾನ ಪರಿಷತ್ ಸದಸ್ಯ ಲೋಕಸಭಾ ಉಸ್ತುವಾರಿ ರವಿಕುಮಾರ್ ಮಾತನಾಡಿ ಬಳ್ಳಾರಿ ಲೋಕಸಭಾ ಮೊದಲು ಕಾಂಗ್ರೆಸ್ ಗೆಲ್ಲುತ್ತಿತ್ತು ಸುಷ್ಮಾ ಸ್ವರಾಜ್ ನಂತರ ಇಲ್ಲಿ ಬಿಜೆಪಿ ಸತತ ಗೆಲುವು ಸಾಧಿಸುತ್ತಾ ಬಂದಿದೆ. ಇಲ್ಲಿಯ ಮತದಾರರು ಭೌತಿಕ ಸಾಮರ್ಥ್ಯ ಹೊಂದಿದ್ದಾರೆ . ಲೋಕಸಭೆಯಲ್ಲಿ ಯಾರನ್ನು ಗೆಲ್ಲಿಸಬೇಕೆಂಬುವುದು ಅವರು ತೀರ್ಮಾನಿಸಿದ್ದಾರೆ ಎಂದರು.
 ಹಡಗಲಿ ಶಾಸಕ  ಕೃಷ್ಣ ನಾಯಕ್ ವಿಜಯನಗರ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಬಲ್ಲಾಹುಣಿಸಿ ರಾಮಣ್ಣ,ಮುಟುಗನಹಳ್ಳಿ ಕೊಟ್ರೇಶ್, ವೀರೇಶ್ವರ ಸ್ವಾಮಿ, ಮರಿಯಮ್ಮನಹಳ್ಳಿ ಕೃಷ್ಣ ನಾಯಕ್, ಮಾತನಾಡಿದರು.
 ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಬೆಣಕಲ್ ಪ್ರಕಾಶ್  ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬುಡ್ಡಿ ಬಸವರಾಜ್ ಓದೋ ಗಂಗಪ್ಪ ಕರಂಗಿ ಸುಭಾಷ್, ನರೇಗಲ್ಲ ಕೊಟ್ರೇಶ್, ಕಿಚಡಿ ಕೊಟ್ರೇಶ್, ಟಿ. ಮಹೇಂದ್ರ, ಜೋಗಿ ಹನುಮಂತ ಇತರರಿದ್ದರು.