ಬಳ್ಳಾರಿಯಲ್ಲಿ 26 ಲಕ್ಷ ರೂ ನಗದು ವಶ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಮಾ.24: ನಗರದ ಹಳೇ ಬಸ್ ನಿಲ್ದಾಣದ ಬಳಿ ಬೈಕ್ ನಲ್ಲಿ ಇಬ್ಬರು ವ್ಯಕ್ತಿಗಳು ದಾಖಲೆಗಳಿಲ್ಲದೇ ತೆಗೆದುಕೊಂಡು ಹೋಗುತ್ತಿದ್ದ 26 ಲಕ್ಷ ರೂಗಳನ್ನು ಚುನಾವಣಾ ಹಿನ್ನಲೆಯಲ್ಲಿ ಪೊಲೀಸರು ನಿನ್ನೆ  ವಶಪಡಿಸಿಕೊಂಡಿದ್ದಾರೆ.
ಸ್ಪಷ್ಟ  ಮಾಹಿತಿ ಪಡೆದ ಪೊಲೀಸರು,  ನ್ರದ ನಿವಾಸಿಗಳಾದ ಸುರೇಶ್ ಮತ್ತು ಸುರೇಶ್  ಗುಪ್ತ ಎಂಬುವವರು 26 ಲಕ್ಷ ರೂಗಳ ನಗದು ಹಣವನ್ನು ತೆಗೆದುಕೊಂಡು ಹೋಗುತ್ತಿದ್ದರು.
ಅವರನ್ನು ತಡೆದು ಹಣದ ಮೂಲದ ಬಗ್ಗೆ ಕೇಳಿದರೆ ಸ್ಪಷ್ಟ, ಸೂಕ್ತ ದಾಖಲೆ ನೀಡದ ಕಾರಣ ವಶಪಡಿಸಿಕೊಂಡು ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.