ಮಾಗಣಗೇರಿ:ಗಾಂಜಾ ಮಾರಾಟ ವ್ಯಕ್ತಿಯ ಬಂಧನ
ಯಡ್ರಾಮಿ:ಮಾ.24:ತಾಲೂಕಿನ ಮಾಗಣಗೇರಿ ಗ್ರಾಮದಲ್ಲಿ ಹಗಲು ವೇಳೆಯಲ್ಲಿಯೇ ಗಾಂಜಾ ಮಾರಾಟ ಮಾಡುವ ವ್ಯಕ್ತಿಯನ್ನು ಯಡ್ರಾಮಿ ಪಿ.ಎಸ್.ಐ ವಿಶ್ವನಾಥ ಮುದರಡ್ಡಿ ಬಂಧನ ಮಾಡಿ ಜೈಲಿಗೆ ಅಟ್ಟಿದ್ದಾರೆ.
ಹಗಲು ವೇಳೆಯಲ್ಲಿ ಮಾಗಣಗೇರಿ ಗ್ರಾಮದ ಕೆಂಚರಾಯ ದೇವಸ್ಥಾನ ಹತ್ತಿರ ಭೀಮನಗೌಡ ಸುರಗೊಂಡ ಅನ್ನುವ ವ್ಯಕ್ತಿಯೂ ಮಾರಾಟ ಮಾಡುವ ಕುರಿತು ಎ.ಎಸ್.ಪಿ ಹಾಗೂ ಸಿ.ಪಿ.ಐ ಮಾರ್ಗದರ್ಶನ ಮೇರೆಗೆ ತಂಡ ರಚನೆ ಮಾಡಿಕೊಂಡು ಬಂಧನ ಮಾಡಿದ್ದಾರೆ.
950 ಗ್ರಾಂ ಗಾಂಜ ವಶಪಡಿಸಿಕೊಳ್ಳಲಾಗಿದೆ.ಇದರ ಮೊತ್ತ ಸುಮಾರು 19 ಸಾವಿರ ರೂಪಾಯಿ ಇದ್ದು.ಈ ಕುರಿತು ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲೆ ಮಾಡಿಕೊಂಡು ಆರೋಪಿಯನ್ನು ಜೈಲಿಗೆ ಕಳಿಸಲಾಗಿದೆ ಎಂದು ಠಾಣೆಯ ಪಿ.ಎಸ್.ಐ ತಿಳಿಸಿದ್ದಾರೆ.
ದಾಳಿಯ ವೇಳೆಯಲ್ಲಿ ವಿಶ್ವನಾಥ.ಎಮ್.ಮುದರೆಡ್ಡಿ ಪಿ.ಎಸ್.ಐ ಯಡ್ರಾಮಿ ಹಾಗೂ ಆರೋಗ್ಯ ಅಧಿಕಾರಿಗಳು ಮತ್ತು ಪೆÇಲೀಸ್ ಸಿಬ್ಬಂದಿವರ್ಗ ಇದ್ದರು .