ಅಶೋಕ ಕರಂಜಿ ಮಾ.4ರಂದು ನನ್ನನ್ನು ಜಿಲ್ಲಾಧ್ಯಕ್ಷರೆಂದು ಒಪ್ಪಿಕೊಂಡು ಸಹಿ ಮಾಡಿದ್ದಾರೆ: ದಾಖಲೆ ಇಲ್ಲಿದೆನ್ಯಾಯಾಲಯಕ್ಕೆ ಗೌರವಿಸುತ್ತೇವೆ: ರಾಜ್ಯ ಸಂಘದ ನಿರ್ದೇಶನ ಬರುವ ವರೆಗೆ ನಾನೇ ಜಿಲ್ಲಾ ಅಧ್ಯಕ್ಷ ಡಿ.ಕೆ ಗಣಪತಿ
ಬೀದರ್: ಮಾ.24:ತಾನು ಇಲ್ಲಿಯ ಜಿಲ್ಲಾ ಪದಾಧಿಕಾರಿಗಳ ಒಪ್ಪಿಗೆ ಪಡೆದು ರಾಜ್ಯ ಸಂಘದ ನಿರ್ದೇಶನದಂತೆ ಜಿಲ್ಲಾ ಅಧ್ಯಕ್ಷನಾಗಿ ಈ ಹುದ್ದೆಗೆ ಬಂದಿರುವವನು. ಇತ್ತಿಚೀಗೆ ನ್ಯಾಯಾಲಯವು ನೀಡಿದ ನಿರ್ದೇಶನಕ್ಕೆ ತಲೆಬಾಗುತ್ತೇನೆ. ಆದರೆ, ತನಗೆ ನ್ಯಾಯಾಲಯದಿಂದ ಯಾವುದೇ ಸೂಚನೆಯಾಗಲಿ ಅಥವಾ ರಾಜ್ಯ ಘಟಕದ ಆದೇಶವಾಗಲಿ ಬಂದಿರುವುದಿಲ್ಲ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಘಟಕವು ತನಗೆ ನೀಡುವ ಸೂಚನೆಗೆ ಬದ್ದನಾಗಿರುತ್ತೇನೆ. ಅಲ್ಲಿಯ ವರೆಗೆ ನಾನೇ ಜಿಲ್ಲಾ ಅಧ್ಯಕ್ಷನಾಗಿರುತ್ತೇನೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಡಿ.ಕೆ ಗಣಪತಿ ತಿಳಿಸಿದರು.
ಶನಿವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, 2023 ಏಪ್ರಿಲ 19ರಂದು ಇಲ್ಲಿಯ ಜಿಲ್ಲಾ ಪದಾಧಿಕಾರಿಗಳ ಕೋರಿಕೆ ಮೆರೆಗೆ ರಾಜ್ಯ ಘಟಕವು ನನಗೆ ಸಂಘದ ನಿಯಮದಂತೆ ಪ್ರಭಾರ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ರಾಜ್ಯದ 8 ಸಾವಿರಕ್ಕೂ ಅಧಿಕ ಪತ್ರಕರ್ತರನ್ನು ಹೊಂದಿರುವ ನಾಡಿನ ಪತ್ರಕರ್ತರ ಧ್ವನಿಯಾಗಿರುವ ನಮ್ಮ ಸಂಘಟನೆ ಆದೇಶದಂತೆ ಕಳೆದ ಒಂದು ವರ್ಷದಿಂದ ಸೇವೆ ಸಲ್ಲಿಸುತ್ತಿರುವೆ. ಆದರೆ ಅಶೋಕಕುಮಾರ ಕರಂಜಿ ಅವರು ತಾನೇ ಅಧ್ಯಕ್ಷನೆಂದು ಹೇಳಿಕೊಂಡು ಪತ್ರಕರ್ತರಲ್ಲಿ ಗೊಂದಲ ಸೃಷ್ಟಿ ಮಾಡಲು ಹೊರಟಿರುವುದು ಹಾಸ್ಯಾಸ್ಪದ ಸಂಗತಿ ಎಂದರು.
ಅಶೋಕ ಕರಂಜಿ ಅವರು ರಾಜಕೀಯದಲ್ಲಿ ಬೀಜಿಯಾಗಿ ಪತ್ರಕರ್ತರನ್ನು ಮರೆತು ಈಗ ಮತ್ತೆ ನೆನಪಾಗಿ ಅಧ್ಯಕ್ಷನಾಗಲು ಹೊರಟು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಏಪ್ರಿಲ 15ರಂದು ಹೇರಿಂಗ್ ಇದ್ದು, ಅಲ್ಲಿಯ ವರೆಗೆ ಕಾದು ನೋಡಿ. ಅಂದು ನಮ್ಮ ಪರವಾಗಿ ತೀರ್ಪು ಏನೇ ಬಂದರೂ ನಾವು ನ್ಯಾಯಾಲಯಕ್ಕೆ ಗೌರವಿಸುತ್ತೇವೆ. ನಮ್ಮ ವಿರೂದ್ಧ ತೀರ್ಪು ಬಂದರೂ ರಾಜ್ಯ ಘಟಕದ ಸಲಹೆ ಹಾಗೂ ನಮ್ಮ ಜಿಲ್ಲಾ ಪದಾಧಿಕಾರಿಗಳ ಸಲಹೆ ಆಲಿಸಿ ಮುಂದಿನ ತಿರ್ಮನ ಕೈಗೊಳ್ಳುತ್ತೇನೆ. ರಾಜ್ಯ ಘಟಕದ ಯಾವುದೇ ನಿರ್ದೇಶನ ಬರುವ ವರೆಗೆ ನಾನೇ ಜಿಲ್ಲಾ ಅಧ್ಯಕ್ಷನಾಗಿ ಮುಂದುವರೆಯುತ್ತೇನೆ. ಜಿಲ್ಲೆಯ ಯಾರೊಬ್ಬ ಪತ್ರಕರ್ತರು ಗೊಂದಕ್ಕೊಳಗಾಗುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದರು.
ಮಾರ್ಚ್ 5ರಂದು ರಾಜ್ಯ ಉಚ್ಚ ನ್ಯಾಯಾಲಯದ ಸೂಚನೆಯಂತೆ ಕಾರ್ಮಿಕ ನ್ಯಾಯಾಲಯಕ್ಕೆ ಹಾಜರಾಗಲು ಹೋದಾಗ ಅಶೋಕ ಕರಂಜಿ ಅವರು ಕಕಾಪಸಂ ರಾಜ್ಯ ಕಚೇರಿಗೆ ಬಂದು ತನಗೆ ರಾಜ್ಯ ಸಂಘದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಿದರೆ ನನ್ನ ಕೇಸ್ ವಾಪಸ್ಸು ಪಡೆಯುತ್ತೇನೆ ಎಂದು ಒಪ್ಪಿಗೆ ಪತ್ರ ಬರೆದು ಕೊಟ್ಟಿರುವರು. ಆ ಸಮಯದಲ್ಲಿ ನಮ್ಮ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಹಾಗೂ ಭಾರತೀಯ ಪತ್ರಕರ್ತರ ಒಕ್ಕೂmದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ಜೊತೆಗಿದ್ದರು. ತಮ್ಮ ಕೈಯಾರೆ ಅಂದು ಬರೆದುಕೊಟ್ಟ ಒಪ್ಪಂದ ಪತ್ರವನ್ನು ಧಿಕ್ಕರಿಸಿ ಮತ್ತೆ ಬೇರೆ ನ್ಯಾಯಾಲಯಕ್ಕೆ ಹೋಗುವುದು ಎಷ್ಟರ ಮಟ್ಟಿಗೆ ಸರಿ?. ಮೇಲಿನ ನ್ಯಾಯಾಲಯದ ಆದೇಶದಂತೆ ಒಪ್ಪಂದಕ್ಕೆ ಸಹಿ ಮಾಡಿ ನಂತರ ಸಿಟಿ ಸಿವಿಲ್ ಕೋರ್ಟ್‍ಗೆ ಹೋಗಿರುವುದು ಉತ್ತಮ ಬೆಳವಣಿಗೆ ಇಲ್ಲ. ಆದರೂ ನ್ಯಾಯಾಲಯಕ್ಕೆ ನಾವು ಗೌರವಿಸುತ್ತೇವೆ. ಏಪ್ರಿಲ 15ರ ತೀರ್ಪಿಗೆ ತಲೆ ಬಾಗುತ್ತೇವೆ. ಅಲ್ಲಿಯ ವರೆಗೆ ಸಂಘದ ಯಾವುದೇ ಚಟುವಟಿಕೆಗಳು ನಡೆಯುದಿಲ್ಲ. ನಮ್ಮ ಗಮನಕ್ಕೆ ಬಾರದೇ ಹಿಂಬಾಗಿಲಿನಿಂದ ಏನಾದರೂ ಪಿತುರಿ ಮಾಡಿದರೆ ರಾಜ್ಯ ಸಂಘದ ಗಮನ ಸೆಳೆಯುವುದಾಗಿ ಗಣಪತಿ ಸ್ಪಷ್ಟಪಡಿಸಿದರು.
ಮಾರ್ಚ್ 5 ರಂದು ಬೆಂಗಳೂರಿನಲ್ಲಿ ಸಂಘದ ರಾಜ್ಯಾಧ್ಯಕ್ಷರ ಹಾಗೂ ಪ್ರಧಾನ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಜಿಲ್ಲಾಧ್ಯಕ್ಷ ಸ್ಥಾನ ಬಿಟ್ಟುಕೊಡುವುದಾಗಿಯೂ ಹಾಗೂ ಡಿ.ಕೆ.ಗಣಪತಿ ಅವರನ್ನು ಜಿಲ್ಲಾಧ್ಯಕ್ಷ ಎಂದು ಒಪ್ಪಿಕೊಂಡಿರುವುದಾಗಿಯೂ ಅಶೋಕ ಕರಂಜಿ ತಿಳಿಸಿ, ಕೈಯಲ್ಲಿ ಕೈ ಹೊಡೆದು ಪ್ರಮಾಣ ಮಾಡಿದ್ದಾರೆ. ಅಲ್ಲದೇ ಸ್ವತಃ ಬರೆದುಕೊಟ್ಟು ತಾವೇ ಸಹಿ ಮಾಡಿದ ಪ್ರತಿ ಕೂಡಾ ನಮ್ಮಲ್ಲಿದೆ. ಆದರೆ ಕರಂಜಿಯವರು ಮತ್ತೆ ಈಗ ತಿರುಗಿ ಬಿದ್ದಿದ್ದಾರೆ. ತಾನು ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಅವರು ಸ್ಪಷ್ಟಪಡಿಸಲಿ ಎಂದು ಡಿ.ಕೆ. ಗಣಪತಿ ಸವಾಲ್ ಎಸೆದರು.
ಸಂಘದ ನಿಯಮದ ವಿರುದ್ಧ ಹೋಗಿದ್ದಲ್ಲದೆ ಈಗ ಮಾನ್ಯ ನ್ಯಾಯಾಲಯದಲ್ಲೂ ದಾವೆ ಹೂಡಿದ್ದಾರೆ. ಏಪ್ರಿಲ್ 15 ರಂದು ಅಂತೀಮ ತೀರ್ಪು ಕೂಡಾ ಬರಲಿದೆ. ತೀರ್ಪು ಬರುವವರೆಗಾದರೂ ಸುಮ್ಮನಿರದೆ ಕಾನೂನುಬಾಹಿರವಾಗಿ ಪತ್ರಿಕಾಗೋಷ್ಠಿ ನಡೆಸಿ, ನಮ್ಮ ಮೇಲೆ ದಾವೆ ಹೂಡಿ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಕೆ ಒಡ್ಡುತ್ತಿದ್ದಾರೆ. ಆದರೆ ಈ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ನಮಗೂ ಕಾನೂನು ಗೊತ್ತಿಗೆ ಅಲ್ಲಿಯೇ ತಕ್ಕ ಉತ್ತರ ನೀಡುವುದಾಗಿ ಗಣಪತಿ ತಿಳಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪರಿಷತ್ ಸದಸ್ಯ ಬಸವರಾಜ ಕಾಮಶೆಟ್ಟಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಪತ್ರಿಕಾಗೋಷ್ಟಿಯಲ್ಲಿದ್ದರು.