“ಮೌನ ಮಿಡಿದ ಮಾತು” ಲೋಕಾರ್ಪಣೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.24: ನಗರದ ವಿಮ್ಸ್ ವೈದ್ಯರ ಭವನದಲ್ಲಿ ಮೊನ್ನೆ ಸಂಜೆ ವಿಮ್ಸ್ ಕನ್ನಡ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ
 ಡಾ. ಗಡ್ಡಿ ದಿವಾಕರ್ ಅವರ “ಮೌನ ಮಿಡಿದ ಮಾತು” ಎಂಬ ಪ್ರಥಮ ಕವನ ಸಂಕಲದ ಕೃತಿ ಲೋಕಾರ್ಪಣೆ ಮತ್ತು ಪತ್ರಕರ್ತ ಗಣೇಶ ಆಮೀನಗಡವರ
 ಏಕ ವ್ಯಕ್ತಿ ನಟನೆಯ “ಕೌದಿ” ನಾಟಕ ಪ್ರದರ್ಶನ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ನಿಷ್ಟಿ ರುದ್ರಪ್ಪ ಕೃತಿ ಬಿಡುಗಡೆ ಮಾಡಿದರು. ಡಾ ಗುಡಿ ಕೃತಿ ಕುರಿತು ಮಾತನಾಡಿದರು.
ವಿಮ್ಸ್ ನಿರ್ದೇಶಕ ಡಾ. ಗಂಗಾಧರ ಗೌಡ ಅಧ್ಯಕ್ಷತೆ ವಹಿಸಿದ್ದರು.  ಡಾ. ಪರಸಪ್ಪ ಬಂದ್ರಕಳ್ಳಿ, ಡಾ. ಕೆ ಶಿವಲಿಂಗಪ್ಪ ಹಂದಿಹಾಳು, ಕಸಾಪ ಗ್ರಾಮೀಣ ಘಟಕದ ಅಧ್ಯಕ್ಷ ಎ ಯರ್ರಿಸ್ವಾಮಿ ವೇದಿಕೆಯಲ್ಲಿದ್ದರು.