ಮಾತೋಶ್ರೀ ಶಕುಂತಲಾಬಾಯಿ ಬೆಳ್ಳಿ ಪಬ್ಲಿಕ್ ಶಾಲೆಯ ಮಕ್ಕಳ ಸಾಧನೆ
ವಿಜಯಪುರ ಮಾ.24:ಜಿಲ್ಲೆಯ ನಿಡಗುಂದಿ ತಾಲೂಕಿನ ಮುಕಾರ್ತಿಹಾಳ ಗ್ರಾಮದ ಮಾತೋಶ್ರೀ ಶಕುಂತಲಾಬಾಯಿ ಬೆಳ್ಳಿ ಪಬ್ಲಿಕ್ ಶಾಲೆಯ ಮಕ್ಕಳು ವಾರ್ಷಿಕ ಪರೀಕ್ಷೆಯಲ್ಲಿ ಅಧಿಕ ಅಂಕ ಮ ಗಳಿಸಿ ಗಣನೀಯ ಸಾಧನೆ ಮಾಡಿದ್ದಾರೆ.
ಶಾಲೆಯ ಮಕ್ಕಳಾದ ಅಪೂರ್ವಾ ಬಿರಾದಾರ(ಎಲ್.ಕೆ.ಜಿ) ಶೇ.97.05, ಆರಾಧ್ಯಾ ಹಡಲಗೇರಿ(ಯು.ಕೆ.ಜಿ) ಶೇ.98, ಮಹಾಂತಗೌಡ ಬಿರಾದಾರ (1ನೇ ತರಗತಿ) ಶೇ.95.05, ಹರ್ಷಾ ಬಿರಾದಾರ (2ನೇ ತರಗತಿ) ಶೇ.97, ತೃಪ್ತಿ ಮಹಮದ್ಕೋಟಿ (3ನೇ ತರಗತಿ) ಶೇ,95,.75, ಸುಶೀಲ ಕಲ್ಯಾಣಿ (4ನೇ ತರಗತಿ) ಶೇ.88.25 ಮತ್ತು ವಿನಾಯಕ ಲಮಾಣಿ (5ನೇ ತರಗತಿ) ಶೇ.90.75ರಷ್ಟು ಅಂಕ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳನ್ನು ಅಬಿನಂದಿಸಿ ಮಾತನಾಡಿದ ಶಾಲಾ ಅದ್ಯಕ್ಷ ಡಾ. ರವೀಂದ್ರ ಬೆಳ್ಳಿ, ಅತೀ ಕಡಿಮೆ ಅವಧಿಯಲ್ಲಿ ಶಾಲೆಯ ಮಕ್ಕಳು ಹೆಚ್ಚಿನ ಸಾಧನೆ ಮಾಡಿದ್ದು, ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಮಕ್ಕಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿ ಮಕ್ಕಳಿಗೆ ಉನ್ನತ ಗುರಿ ಮುಟ್ಟಲು ಅನುಕೂಲ ಕಲ್ಪಿಸಲಾಗುವದೆಂದರು. ಪಾಲಕರು ಮಕ್ಕಳಿಗಾಗಿ ಆಸ್ತಿಯನ್ನು ಮಾಡದೇ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು. ಮಕ್ಕಳಿಗೆ ಮೊಬೈಲ್ನಿಂದ ದೂರವಿಡಬೇಕು ಎಂದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಕೆ. ಎಲ್. ದಶವಂತ, ವಿಜಯಕುಮಾರ ಸಿ, ಮುಖ್ಯ ಗುರುಮಾತೆ ನಿವೇದಿತಾ ರೂಡಗಿ, ಶಿಕ್ಷಕಿಯರಾದ ರೇಣುಕಾ ಗುಣಕಿ, ಚೈತ್ರಾ ಗುಳೇದಗುಡ್ಡ, ಕೀರ್ತಿ ಚಿಮ್ಮಲಗಿ, ರೂಪಾ ಪಟ್ಟಣಶೆಟ್ಟಿ, ಕಾಶಿಬಾಯಿ, ಮಹಾದೇವ ಮೇಟಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.