ಹಬ್ಬಗಳ ಆಚರಣೆಯಿಂದ ಸಂಸ್ಕøತಿ, ಸಂಪ್ರದಾಯ ಉಳಿಯಲಿದೆ:ಕಟ್ಟಿಮನಿ
ತಾಳಿಕೋಟೆ:ಮಾ.24: ಭಾರತ ದೇಶದ ಸನಾತನ ಪರಂಪರೆಯಲ್ಲಿ ಆಚರಿಸುತ್ತಾ ಸಾಗುಬರಲಾಗಿರುವ ಅನೇಕ ಹಬ್ಬ ಹರಿದಿನಗಳಲ್ಲಿ ತನ್ನದೇ ಆದ ವೈಶಿಷ್ಟತೆಗಳು ಅಳವಡಿಸಿಕೊಂಡಿವೆ ಅಂತಹ ಹಬ್ಬಗಳನ್ನು ಸಂಪ್ರಾದಾಯ ಮತ್ತು ಸಂಸ್ಕøತಿಯ ಪರಂಪರೆಯಲ್ಲಿ ಆಚರಿಸುತ್ತಾ ಬರುತ್ತಿರುವದರಿಂದ ಸನಾತನ ಸಂಸ್ಕøತಿಗೆ ಗಟ್ಟಿನೆಲೆ ಸಿಕ್ಕಿದೆ ಎಂದು ಆರ್.ಎಸ್.ಎಸ್.ಹಿರಿಯ ಸ್ವಯಂ ಸೇವಕ ಪ್ರಕಾಶ ಕಟ್ಟಿಮನಿ ಅವರು ಹೇಳಿದರು.
ಶನಿವಾರರಂದು ಪಟ್ಟಣದಲ್ಲಿ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಹೂಳಿ ಹಬ್ಬದ ನಿಮಿತ್ಯವಾಗಿದೆ ಏರ್ಪಡಿಸಲಾದ ಬೃಹತ್ ಹಲಗೆ ಮೇಳಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ಈ ನಮ್ಮ ಹಿಂದೂ ರಾಷ್ಟ್ರ ಭಾರತ ದೇಶದಲ್ಲಿ ವರ್ಷಪೂರ್ತಿ ಅನೇಕ ಹಬ್ಬಗಳಿಂದ ಕಂಗೊಳಿಸುತ್ತದೆ ಪ್ರತಿ ಹಬ್ಬಗಳಲ್ಲಿಯೂ ಕೂಡಾ ಸಂಭ್ರಮಾಚರಣೆಯನ್ನು ಕಾಣುತ್ತೇವೆ ಮತ್ತು ನಮ್ಮ ದೇಶದ ಮೂಲ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಈ ಹಬ್ಬಗಳ ಪಾತ್ರ ಬಹುಮುಖ್ಯವಾಗಿದೆ ಹೋಳಿ ಹಬ್ಬದಲ್ಲಿ ಕಾಮದಹನ ಮಾಡುವದರೊಂದಿಗೆ ಬಣ್ಣದಾಟದೊಂದಿಗೆ ಸಂಬ್ರಮಿಸುತ್ತೇವೆ ಈ ಹಬ್ಬದ ವಿಶಿಷ್ಠತೆ ಜೀವನದಲ್ಲಿ ಕಾಮ, ಕ್ರೋದ, ಮದ, ಮತ್ಸರಗಳನ್ನು ತೆಜಿಸಿ ಒಳ್ಳೆಯದಾರಿಯತ್ತ ಎಲ್ಲರನ್ನು ಕೊಂಡೊಯುವಂತಹ ಹಬ್ಬವಾಗಿದೆ ಈ ಹಬ್ಬದ ನಿಮಿತ್ಯ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಬೃಹತ್ ಹಲಗೆ ಮೇಳವನ್ನು ಆಯೋಜಿಸಿ ಸಂಪ್ರದಾಯ ಪರಂಪರೆಯನ್ನು ಉಳಿಸಿ ಬೆಳೆಸಲು ಮುಂದಾಗಿರುವದು ಶ್ಲಾಘನೀಯವಾಗಿದೆ ಎಂದರು.
ಪಟ್ಟಣದ ಶ್ರೀ ಅಂಬಾಭವಾನಿ ಮಂದಿರದಿಂದ ಪ್ರಾರಂಭಗೊಂಡ ಹಲಗೆ ಮೇಳವು ಕತ್ರಿ ಬಜಾರ, ಶಿವಾಜಿ ಮಹಾರಾಜರ ವೃತ್ತ, ನಾಗರಕಲ್ಲ ಬಡಾವಣೆ, ರಾಜವಾಡೆಯ ಮೂಲಕ ಕತ್ರಿ ಭಜಾರ ಮಾರ್ಗವಾಗಿ ಮರಳಿ ಶ್ರೀ ಅಂಬಾಭವಾನಿ ಮಂದಿರ ತಲುಪಿ ಮುಕ್ತಾಯಗೊಳಿಸಲಾಯಿತು.
ಈ ಬೃಹತ್ ಹಲಗೆ ಮೇಳದಲ್ಲಿ ನೂರಾರು ಯುವಕರು ಅನೇಕ ಮಜಲುಗಳನ್ನು ಹಾಕುವದರೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಈ ಹಲಗೆ ಮೇಳದ ನೇತೃತ್ವವನ್ನು ಹಿಂದೂ ಜಾಗರಣ ವೇದಿಕೆಯ ಮುಖಂಡರುಗಳು ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ವಹಿಸಿದ್ದರು.
ಈ ಹಲಗೆ ಮೇಳೆದಲ್ಲಿ ಯಾವುದೇ ತರಹದ ಅಹೀತಕರ ಘಟನೆ ಜರುಗದಂತೆ ಸ್ಥಳೀಯ ಪಿಎಸ್‍ಐ ಮಹ್ಮದತೋಸೀಫ್ ಘೋರಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಯೋಗ್ಯ ಬಂದೋಬಸ್ತ ಕೈಗೊಂಡಿದ್ದರು.