ಸಂತಪೂರನಲ್ಲಿ ಹುತಾತ್ಮ ದಿನಾಚರಣೆ
ಔರಾದ : ಮಾ.24:ತಾಲೂಕಿನ ಸಂತಪೂರ ಗ್ರಾಮದ ಶ್ರೀ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಭಗತ್ ಸಿಂಗ್, ರಾಜಗುರು, ಸುಖದೇವ ರವರ ಹುತಾತ್ಮ ದಿನಾಚರಣೆ ಜರುಗಿತು.
ಬೆಂಗಳೂರು ಭಾರತೀಯ ಸೈನಿಕರ ತರಬೇತಿ ಕೇಂದ್ರದ ದೈಹಿಕ ತರಬೇತಿದಾರರಾದ ರಾಚಪ್ಪ ಕೋಣೆ ಅವರು ಮಾತನಾಡಿ ಭಾರತೀಯ ಸೈನ್ಯದ ಕಾರ್ಯ ತುಂಬಾ ದೊಡ್ಡದು. ಇಲ್ಲಿ ಜಾತಿ ವರ್ಗಗಳ ಮೀಸಲಾತಿಗೆ ಅವಕಾಶ ಇರುವುದಿಲ್ಲ, ಯೋಧರು ಎಲ್ಲವನ್ನು ತ್ಯಾಗ ಮಾಡಿ ದೇಶದ ಸೇವೆಗಾಗಿ ಹಗಲಿರುಳು ದುಡಿಯುತ್ತಾರೆ, ಇಲ್ಲಿ ಮಹಿಳೆಯರಿಗು ಕೂಡ ಸೈನ್ಯ ಸೇರುವ ಅವಕಾಶಗಳಿವೆ, ಯುವಕರು ಸೈನ್ಯ ಸೇರಿ ದೇಶ ಸೇವೆಗೆ ಮುಂದಾಗಬೇಕು ಎಂದು ತಿಳಿಸಿದರು.
ನಿವೃತ್ತ ಯೋಧ ಅರುಣ ಮುಕಾಶಿ ಅವರು ಮಾತನಾಡಿ ಭಗತ್ ಸಿಂಗ್,ರಾಜಗುರು,ಸುಖದೇವ್ ಭಾರತದ ಅಪ್ಪಟ ದೇಶಪ್ರೇಮಿಗಳು ಅವರ ತ್ಯಾಗ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಯುವ ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಇದೆ ವೇಳೆ 2024ನೇ ಸಾಲಿನಲ್ಲಿ ಭಾರತೀಯ ಸೈನ್ಯದಲ್ಲಿ ಅಗ್ನಿವೀರ ಯೋಧರಾಗಿ ನೇಮಕಗೊಂಡ ಆಕಾಶ ರಾಠೋಡ್, ಅವಿನಾಶ ಚೌಹಾಣ್, ಕಿರಣ ರಮೇಶ್, ಸುನಿಲ ವಿನಾಯಕ, ಸಿದ್ದಾಜಿ ಪವಾರ್, ನಿವೃತ ಯೋಧ ಅರುಣ ಮೋಕಾಶಿ, ತರಬೇತಿದರಾದ ರಾಚಪ್ಪಾ ಯೋಧರನ್ನು ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ನವೀಲಕುಮಾರ ಉತ್ಕಾರ್, ಪೆÇಲೀಸ್ ಪೇದೆ ಸಂಜುಕುಮಾರ ಉಪನ್ಯಾಸಕರಾದ ಶಿವಪುತ್ರ ಧರಣಿ, ರಾಜಕುಮಾರ ಹಳ್ಳಿಕರ್, ಸುಧಾ ಕೌಟಿಗೆ, ಮೀರಾತಾಯಿ ಕಾಂಬಳೆ, ಪ್ರಿಯಾಂಕಾ ಗೋನ್ನಳಿಕರ, ಕಲ್ಲಪ್ಪ ಬುಟ್ಟೆ,ವನದೇವಿ ಎಕ್ಕಳೆ, ಮೀನಾಕ್ಷಿ ಸ್ವಾಮಿ ಸೇರಿದಂತೆ ಇನ್ನಿತರರಿದ್ದರು.