ಹೋಳಿ ರಂಜಾನ್ ಹಬ್ಬದಲ್ಲಿ ಶಾಂತಿ ಕಾಪಾಡಬೇಕು:ಮುದರೆಡ್ಡಿ
ಯಡ್ರಾಮಿ:ಮಾ.24:ಮುಂಬರುವ ಹೋಳಿ ಹಾಗೂ ರಂಜಾನ ಹಬ್ಬದಂದು ಸಮಾಜದ ಪ್ರತಿಯೊಬ್ಬರು ಶಾಂತಿ ಕಾಪಾಡಬೇಕು ಎಂದು ಪಿ.ಎಸ್.ಐ ವಿಶ್ವನಾಥ ಎಮ್ ಮುದರಡ್ಡಿ ಸಾರ್ವಜನಿಕರಿಗೆ ಸಲಹೆ ನೀಡಿದರು.
ಯಡ್ರಾಮಿ ಠಾಣೆಯಲ್ಲಿ ಹೋಳಿ ಹಾಗೂ ರಂಜಾನ್ ಹಬ್ಬದ ನಿಮಿತ್ಯ ಹಮ್ಮಿಕೊಂಡ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿ.ಹೋಳಿಯ ಕಾಮದಹನ ಪ್ರಕ್ರೀಯೆ ಯಾರಿಗೂ ತೂಂದರೆಯಾಗುವ ರೀತಿಯಲ್ಲಿ ಮಾಡಬಾರದು.
ಬಣ್ಣ ಹಚ್ಚುವ ಸಂದರ್ಭದಲ್ಲಿ ಅನುಮತಿ ಇಲ್ಲದೇ ಇತರೆ ಸಮಾಜದ ಬಾಂಧವರಿಗಾಗಲಿ ಮಹಿಳೆಯರಿಗೆ ಹಾಗೂ ಮುಖ್ಯವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ ಇರುವದರಿಂದ ಮಕ್ಕಳಿಗೆ ತೊಂದರೆ ಯಾಗದರೀತಿಯಿಂದ ಆಚರಣೆ ಮಾಡಬೇಕು ಎಂದು ಹೇಳಿದರು.
ತಾಲ್ಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಅಹಿತಕರ ಘಟನೆಗಳು ಅಂದರೆ ಮಧ್ಯ ಮಾರಾಟ ಮಾ:23 ರಿಂದ ರಾತ್ರಿಯಿಂದ ಹೋಳಿ ಹಬ್ಬ ಮುಗಿಯುವ ತನಕ ಸಂಪೂರ್ಣ ಬಂದ್ ಇರುತ್ತದೆ.
ಮಧ್ಯ ಮಾರಾಟ ಹಾಗೂ ಅಹಿತಕರ ಘಟನೆ ಕಂಡು ಬಂದರೆ ತಕ್ಷಣ ಸಾರ್ವಜನಿಕರು ಠಾಣೆಗೆ ಅಥವಾ 112 ಕಾಲ್ ಮಾಡಬೇಕು ಎಂದು ಸೂಚನೆ ನೀಡಿದರು.
ಹಬ್ಬದ ವೇಳೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು.ಅಂತಹ ಘಟನೆಗಳು ಕಂಡುಬಂದಲ್ಲಿ ಯಾವ ವ್ಯಕ್ತಿಯಾದರೂ ಸಹ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಲವಾರು ಸಾಮಾಜದ ಮುಖಂಡರು ಮಾತನಾಡಿ ನಮ್ಮ ತಾಲೂಕು ಶಾಂತಿಗೆ ಸಂಕೇತವಾದ ತಾಲೂಕು ಯಾವುದೇ ಅಹಿತಕರ ಘಟನೆ ಆಗುವುದಿಲ್ಲ ಎಂದು ಭರವಸೆ ನೀಡಿದರು.
ಈ ಸಭೆಯಲ್ಲಿ ನಾಗಣ್ಣ ಹಾಗರಗುಂಡಗಿ, ಹಯ್ಯಾಳಪ್ಪ ಗಂಗಾಕರ್,ಮಂಜು ಕುಲಕರ್ಣಿ, ವರ್ತಕರ ಸಂಘದ ಅಧ್ಯಕ್ಷರು,ಅಜಮೀರ ಪಟೇಲ್ ಚಿಂಚೊಳ್ಳಿ,ಗೋಲ್ಲಾಳಪ್ಪ ಗೇಜ್ಜಿ ತಾಲೂಕಿನ ಸಮಸ್ತ ಸಂಘಟನೆ ಸದಸ್ಯರು ಅಧ್ಯಕ್ಷರು ಮತ್ತು ಪೆÇಲೀಸ್ ಸಿಬ್ಬಂದಿವರ್ಗ ಇತರರು ಭಾಗವಹಿಸಿದ್ದರು.