ಮಾದರಿ ನೀತಿ ಸಂಹಿತೆಯ ನಿಯಮ ಪಾಲಿಸಿ : ಆಶಪ್ಪ ಕೆಎಎಸ್
ಸೇಡಂ, ಮಾ,24: ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಸಹಾಯಕ ಮತದಾರರ ಚುನಾವಣಾ ಅಧಿಕಾರಿ ಆಶಪ್ಪ ಕೆ ಎ ಎಸ್ ಅಧ್ಯಕ್ಷತೆಯಲ್ಲಿ ಅಬಕಾರಿ ಇಲಾಖೆಯ ಒಳಪಡುವ ಸಿಎಲ್- 2, ಸಿಎಲ್- 7 ಹಾಗೂ ಸಿಎಲ್ 8 ಒಳಗೊಂಡಂತೆ ವಿವಿಧ ಬಗೆಯ ಬಾರ್ ಹಾಗೂ ರೆಸ್ಟೋರೆಂಟ್ ಗಳ ಮಾಲೀಕರು ಹಾಗೂ ತಾಲ್ಲೂಕಿನಲ್ಲಿರುವ ಡಾಬಾ ಮಾಲೀಕರ ಸಭೆ ಕರೆಯಲಾಯಿತು.ಸಭೆಯನ್ನುದ್ದೇಶಿಸಿ ಮಾತನಾಡಿದ ಆಶಪ್ಪ ಕೆ ಎ ಎಸ್ ಅವರು ಮಾದರಿ ನೀತಿ ಸಂಹಿತೆಯ ನಿಯಮಗಳನ್ನು ಪ್ರತಿಯೊಬ್ಬ ಡಾಬಾ ರೆಸ್ಟೋರೆಂಟ್ ಗಳ ಮಾಲೀಕರು ಪಾಲಿಸುವಂತೆ ಖಡಕ್ ಸೂಚನೆ ನೀಡಿದರು. ಈ ವೇಳೆಯಲ್ಲಿ ತಹಸಿಲ್ದಾರ್ ಶಿವಾನಂದ್ ಮೇತ್ರೆ, ಗ್ರೇಟ್ ಟು ತಹಸಿಲ್ದಾರ್ ನಾಗನಾಥ, ಅಬಕಾರಿ ಇಲಾಖೆ ಅಧಿಕಾರಿ ಸತ್ಯ ನಾರಾಯಣ ಡಾಬಾ ಮಾಲೀಕರು ಇದ್ದರು.