ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ ಪರೀಕ್ಷೆ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ
ಹುಮನಾಬಾದ್ :ಮಾ.24: ಮಾ. 25ರಿಂದ ಹುಮನಾಬಾದ್ ತಾಲೂಕಿನಲ್ಲಿ 18 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭಗೊಂಡು ಏ.6ರ ವರೆಗೆ ನಡೆಯಲಿದ್ದು ಇದಕ್ಕಾಗಿ ಶಿಕ್ಷಣ ಇಲಾಖೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ತಾಲೂಕಿನ ವ್ಯಾಪ್ತಿಯಲ್ಲಿ 18 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಹೊಸಬರು ಹಾಗೂ ರಿಪೀರ್ಟ ಸೇರಿ ಒಟ್ಟು 6559 ವಿದ್ಯಾರ್ಥಿಗಳು ಈ ಸಾಲಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಸೂಕ್ಷ್ಮ ಕೇಂದ್ರ 3, ಅತಿಸೂಕ್ಷ್ಮ 1 ಹಾಗೂ 18 ಪರೀಕ್ಷಾ ಕೇಂದ್ರಗಳಲ್ಲಿ 280 ಪರೀಕ್ಷಾ ಕೊಠಡಿಗಳಿವೆ.
ಸರಕಾರದ ನಿರ್ದೇಶನದಂತೆ ಪರೀಕ್ಷೆಯಲ್ಲಿ ನಕಲು ಮತ್ತು ಕೇಂದ್ರಗಳ ಸುತ್ತಲಿನ ವೀಕ್ಷಣೆಗಾಗಿ ತಾಲೂಕಿನಲ್ಲಿ ಮೊದಲ ಬಾರಿಗೆ ಪರೀಕಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಮಾ. 25ರಂದು ಕನ್ನಡ, ಮಾ. 27ರಂದು ಸಮಾಜ ವಿಜ್ಞಾನ, ಮಾ. 30ರಂದು ವಿಜ್ಞಾನ, ಏ.2ರಂದು ಗಣಿತ, ಏ. 4ರಂದು ತೃತೀಯ ಭಾಷೆ, ಏ. 6ರಂದು ದ್ವತೀಯ ಭಾಷೆ ವಿಷಯಗಳ ಪರೀಕ್ಷೆ ಜರುಗಲಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಸುವ್ಯವಸ್ಥೆ ಕಾಪಾಡುವ ನಿಟ್ಟನಲ್ಲಿ ಮಾರ್ಗಸೂಚಿ ಅಧಿಕಾರಿಗಳು, ಸ್ಥಿರ ಜಾಗೃತಿ ಗಳ, ಅಧೀಕ್ಷಕರ ಹಾಗೂ ಹೆಚ್ಚುವರಿ ಅಧಿಕ್ಷಕರ ತಂಡ ರಚಿಸಿಲಾಗಿದೆ. ತಾಲೂಕಿನ ಎಲ್ಲ ಪರಿಕ್ಷಾ ಕೇಂದ್ರಗಳ ಸುತ್ತಲೂ ಪರೀಕ್ಷೆ ನಡೆಯುವ ಸಂದರ್ಭದಲ್ಲಿ 200 ಮೀ. ವ್ಯಾಪ್ತಿಯಲ್ಲಿ ನಿಷೀಧಾಜ್ಞೆ ಜಾರಿಗೊಳಿಸಲಾಗಿದೆ.
ಪರೀಕ್ಷಾ ಕೇಂದ್ರಗಳ ಸುತ್ತಲೂ ಯಾರು ಅನಗತ್ಯವಾಗಿ ಓಡಾಡಬಾರದು. ಪರೀಕ್ಷಾರ್ಥಿಗಳು ಸುಸೂತ್ರವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಬೇಕು. ಪರೀಕ್ಷಾ ಕೇಂದ್ರದಲ್ಲಿ ಮಕ್ಕಳು ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲದ ವಿಚಾರಗಳನ್ನು ಮಾಡಿಕೊಂಡು ಭಯಪಡಬಾರದು. ಉತ್ತಮ ರಿತೀಯಲ್ಲಿ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಪಡೆಯಬೇಕು.
ವೆಂಕಟೇಶ ಗೂಡಾಳ
ಕ್ಷೇತ್ರ ಶಿಕ್ಷಣಾಧಿಕಾರಿ, ಹುಮನಾಬಾದ್