ಜಾತ್ರೆ ಪುರಾಣಗಳಿಂದ ಜಾತಿ ರಹಿತ ಸಮಾಜ ನಿರ್ಮಾಣ:ಸುಣಗಾರ
ಯಡ್ರಾಮಿ:ಮಾ.24:ಜಾತ್ರೆ ಪುರಾಣಗಳಿಂದ ಜಾತಿ ರಹಿತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುವುದು ಎಂದು ಮಾಜಿ ಸಿಂದಗಿ ಶಾಸಕ ಶರಣಪ್ಪ ಸುಣಗಾರ ಅವರು ಮಾಣಶಿವಣಗಿ ಗ್ರಾಮದ ಪುರಾಣ ಕಾರ್ಯಕ್ರಮದಲ್ಲಿ ವ್ಯಕ್ತಪಿಡಿಸಿದರು.
ತಾಲೂಕಿನ ಮಾಣಶಿವಣಗಿ ಗ್ರಾಮದ ರೇಣುಕಾ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಮುಗಳಖೋಡದ ಶ್ರೀ ಯಲ್ಲಾಲಿಂಗ ಮಹಾರಾಜರ ಮಹಾಪುರಾಣದಲ್ಲಿ ಮಾತನಾಡಿದ ಶಾಸಕರು.
ಜಾತ್ರೆ ಸರ್ವಜನಾಂಗದ ಜನರನ್ನು ಒಂದು ಮಾಡುವ ಕಾರ್ಯ ಆದರೆ ಪುರಾಣ ಮನುಷ್ಯನಿಗೆ ಸಂಸ್ಕಾರದ ಜೊತೆಗೆ ಇತಿಹಾಸವನ್ನು ತಿಳಿಸುತ್ತದೆ.ಪ್ರತಿಯೊಬ್ಬರು ಪುರಾಣದಲ್ಲಿ ಬರುವಂತಹ ಒಳ್ಳೆಯ ವಿಚಾರಗಳು ಜೀವನದಲ್ಲಿ ಅಳವಡಿಸಿಕೊಂಡು.
ಪುರಾಣದಲ್ಲಿಯ ಇತಿಹಾಸ ಮುಂದಿನ ಜನಾಂಗಕ್ಕೆ ತಿಳಿಸು ಕಾರ್ಯ ಮಾಡಿದಾಗ ಮಾತ್ರ ಜಾತ್ರೆ ಮತ್ತು ಪುರಾಣಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.
ಪೂಜ್ಯ ಶಿವಲಿಂಗ ಶರಣರು ಹೊತಪೇಟ ಕಾರ್ಯಕ್ರಮದ ಸಾನಿದ್ಯವಹಿಸಿ ಮಾತನಾಡುತ್ತ.ಪುರಾಣದಲ್ಲಿ ಬರುವಂತ ಒಳ್ಳೆಯ ವಿಚಾರಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಈ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ.
ಪುರಾಣ ಕೇವಲ ಕೇಳಿ ಬಿಡುವದರಿಂದ ಭಕ್ತಿ ಬರುವದಿಲ್ಲ ಅದನ್ನು ಜೀವನದ್ದುಕ್ಕೂ ಅಳವಡಿಸಿಕೊಂಡಾಗ ಭಕ್ತಿಯ ಭಾವ ಬರುತ್ತದೆ ಇಲ್ಲ ಅಂದ್ರೆ ಅದು ವ್ಯರ್ಥವಾಗುತ್ತದೆ.
ಆದ್ದರಿಂದ ಪುರಾಣದಲ್ಲಿ ಬರುವಂತಹ ಒಳ್ಳೆಯ ಸಂಸ್ಕಾರ ಸಂಸ್ಕøತಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಾನವರಾಗಿ ಬದುಕಲು ಸಾದ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೂಜ್ಯ ಶಿವಲಿಂಗಯ್ಯ ಶಾಸ್ತ್ರಿಗಳು ಪುರಾಣ ಮಠ ಗರೂರ,ಶರಣಪ್ಪ ಸುಣಗಾರ ಮಾಜಿ ಶಾಸಕರು ಸಿಂದಗಿ,ಬಸಲಿಂಗಪ್ಪ ಕವಾಲ್ದಾರ ಕಡಕೋಳ,ವಿಠ್ಠಲ ಕವಲ್ದಾರ,ಶಾಂತಗೌಡ ಮಾಲಿ ಪಾಟೀಲ ಕಡಕೋಳ,ಹಣಮಂತ್ರಾಯ ಸಾಹು ಹೆಡಗಿಜೋಳ ಆಲೂರ,ಮಲ್ಲಿಕಾರ್ಜುನ ಚಬನೂರ,ಹಣಮಂತ್ರಾಯ ಕಾಚಾಪೂರ, ಕಮೀಟಿಯ ಸದಸ್ಯರಾದ ಮಲ್ಲಯ್ಯ ಕರಬಸಯ್ಯ ಹಿರೇಮಠ,ಶಂಕರಲಿಂಗಯ್ಯ ಸುಬೇದಾರ,ಸಿದ್ದಣ್ಣ ನಾಯ್ಕೊಡಿ,ಅಪ್ಪಾಸಾಬ್ ಕುಡಿ,ದೇವಣ್ಣ ನಾಯ್ಕೊಡಿ,ಕಾಂತಪ್ಪ ವಾಲಿಕಾರ,ಮಾಹಾಂತಪ್ಪ ನಾಯ್ಕೊಡಿ ನಿಂಗಣ್ಣ ಚೌಡಕಿ ವಿಠ್ಠಲ ಚೌಡಕಿ ಬಸವರಾಜ ದೊಡಮನಿ ಇತರರು ಉಪಸ್ಥಿತರಿದ್ದರು.
ಸುಣಗಾರ ದಂಪತಿಗಳು 201 ಮುತೈದ ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಿಸಿದ್ದರು.