ಸಂಘದ ಬೈಲಾ ಉಲ್ಲಂಘಿಸಿ ಚುನಾವಣೆಗೆ ಸ್ಪರ್ಧಿಸಿದ ಅಶೋಕ ಕರಂಜಿ: ಬಸವರಾಜ ಕಾಮಶೆಟ್ಟಿ ಗುಡುಗು
ಬೀದರ್: ಮಾ.24:ಜ್ಯಾತ್ಯಾತೀತ ಜನತಾದಳದ ವಕ್ತಾರನಾಗಿದ್ದುಕೊಂಡೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮೂರು ಬಾರಿಗೆ ಅಧ್ಯಕ್ಷಗಿರಿ ಅನುಭವಿಸಿರುವ ಅಶೋಕಕುಮಾರ ಕರಂಜಿ ಸಂಘದ ಬೈಲಾ ನಿಯಮ ಉಲ್ಲಂಘನೆ ಮಾಡಿ ಪ್ರಮಾದ ಎಸಗಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಬಸವರಾಜ ಕಾಮಶೆಟ್ಟಿ ತಿಳಿಸಿದರು.
ಶನಿವಾರ ಸುದ್ದಿಗೋಷ್ಟಿ ಉದ್ದೇಸಿಸಿ ಮಾತನಾಡಿರುವ ಅವರು, 2018ಕ್ಕಿಂತ ಮುಂಚೆ ಜರ್ನಲಿಸ್ಟ್ ಎನ್ನುವ ಸಂಘದಲ್ಲಿ ಅಧ್ಯಕ್ಷರಾಗಿ, ತದನಂತರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದೊಂದಿಗೆ ಅದನ್ನು ವಿಲಿನಗೊಳಿಸಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ನಂತರ ತನಗೆ ಅಧಿಕಾರ ಬಿಟ್ಟುಕೊಡುವುದಾಗಿ ಮೊಸ ಮಾಡಿ, ಅಲ್ಲಿಂದ ಇಲ್ಲಿಯವರೆಗೆ ಮೂರು ಬಾರಿ ಅಧ್ಯಕ್ಷನಾಗಿದ್ದರೂ ತೃಪ್ತಿ ಇಲ್ಲದೆ ನನ್ನ ವಿರೂದ್ಧ ಒಳಗೊಳಗೆ ರಾಜ್ಯ ಸಂಘದಲ್ಲಿ ದೂರು ನೀಡುತ್ತ, ಬಂದು ಈಗ ರಾಜ್ಯ ಸಂಘದ ವಿರೂದ್ದವೇ ಕೋರ್ಟ್ ಮೆಟ್ಟಿಲೇರಿ ಈಗ ತಾನೇ ಅಧ್ಯಕ್ಷನಾಗಿರುವುದಾಗಿ ಹೇಳಿಕೊಂಡು ಓಡಾಡುತ್ತಿರುವುದು ಮುರ್ಖತನದ ಪರಮಾವಧಿ ಎಂದು ಕಾಮಶೆಟ್ಟಿ ಹೇಳಿದರು.
ನಮ್ಮ ಸಂಘದ ನಿಯಮ ಪ್ರಕಾರ ಪ್ರಮುಖ ಹುದ್ದೆಗಳಾದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಹುದ್ದೆಗಳಲ್ಲಿ ಸಕ್ರಿಯ ರಾಜಕಾರಣಿಗೆ ಚುನಾವಣೆಗೆ ಸ್ಪರ್ಧೆ ಮಾಡಲಿಕ್ಕೆ ಬರುವುದಿಲ್ಲವೆಂಬ ನಿಯಮವಿದ್ದರೂ ಜೆಡಿಎಸ್ ಪಕ್ಷದ ಜಿಲ್ಲಾ ವಕ್ತಾರರಾಗಿದ್ದುಕೊಂಡೆ ಮೂರು ಬಾರಿ ಜಿಲ್ಲಾ ಅಧ್ಯಕ್ಷ ಗಾದಿ ಏರಿ, ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೇರಿ ಅಲ್ಲಿ ಸ್ವಲ್ಪ ದಿನ ಪ್ರಚಾರಗೈದು ನಂತರ ಕಹಳೆ ಚಿನ್ಹೆ ಇರುವ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿ ಹಿನಾಯ ಸೋಲುಂಡು ಮತ್ತೆ ಅಧ್ಯಕ್ಷನಾಗಲು ಕೋರ್ಟ್ ಮೆಟ್ಟಿಲೇರಿರುವುದು ಪತ್ರಿಕಾ ಧರ್ಮಕ್ಕೆ ಮಾಡಿದ ಘೋರ ಅಪಚಾರವಾಗಿದೆ ಎಂದರು.
2022ರ ಸಂಘದ ಚುನಾವಣೆ ಸಂದರ್ಭದಲ್ಲೂ ತಾನು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸಲು ಅರ್ಜಿ ತುಂಬಿರುವಾಗ ಅದನ್ನು ತಿರುಚಿ ರಾಜ್ಯ ಪರಿಷತ್ ಸದಸ್ಯರನ್ನಾಗಿ ಬರೆದರು. ತಾನು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಮುಂದಾದರೆ ಆರು ತಿಂಗಳ ಬಳಿಕ ಅಧಿಕಾರ ಬಿಟ್ಟುಕೊಡುವುದಾಗಿ ನಂಬಿಸಿ ಅಲ್ಲಿಯೂ ಮೋಸ ಮಾಡಿದ್ದರು 2018ರಿಂದ ಇಲ್ಲಿಯ ವರೆಗೆ ನಿರಂತರ ಸುಳ್ಳು ಹೇಳುತ್ತ ಬರುತ್ತಿರುವ ಇವರೊಬ್ಬ ಅಪ್ಪಟ ಸುಳ್ಳುಗಾರ. ನನ್ನ ವಿರೂದ್ಧ ಮಾತನಾಡಿದರೆ ನಮ್ಮ ವಿರೂದ್ಧ ಕೆಸ್ ದಾಖಲಿಸುವ ಧಮಕಿ ಮಾತಿಗೆ ಯಾರು ಜಗ್ಗುವುದಿಲ್ಲ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಮಟ್ಟದ ಸಂಘಟನೆಯಾಗಿದ್ದು, ರಾಜ್ಯ ಸಂಘದ ನಿಯಮಕ್ಕೆ ಎಲ್ಲರು ತಲೆಬಾಗಬೇಕು. ನ್ಯಾಯಾಲಯದ ಆದೇಶಕ್ಕೆ ನಾವು ತಲೆ ಬಾಗುತ್ತೇವೆ. ಆದರೆ ತಾವು ನಿನ್ನೆ ಪತ್ರಿಕಾ ಗೋಷ್ಟಿ ಮಾಡಿ ಸಂಘದ ಪದಾಧಿಕಾರಿಗಳಿಗೆ ಹೆದರಿಸಲು ಹೊರಟಿರುವುದು ಖಂಡನಿಯ. ಎಂದವರು ಹೇಳಿದರು.
ಕಳೆದ ನಾಲ್ಕೈದು ವರ್ಷ ತನ್ನ ಸಹಿ ಇಲ್ಲದೇ ಗುರುತಿನ ಕಾರ್ಡ್ ಮಾಡಿಸಲಾಗಿದೆ. ಕೆಲವರ ಹತ್ತಿರ ಎಳೆಂಟು ಸಾವಿರ ಹಣ ಪಡೆದು ಕಾರ್ಡ್ ಮಾಡಿಸಿಕೊಟ್ಟಿರುವ ಆರೋಪ ಅವರ ಮೇಲಿದೆ. ಅಲ್ಲದೇ 2022ರ ಸಂಘದ ಚುನಾವಣೆಯಲ್ಲಿ ಖರ್ಚಾಗಿ ಉಳಿದ ರು.31,000 ಹಣ ರಾಜ್ಯ ಸಂಘಕ್ಕೆ ಹಿಂತಿರುಗಿಸದೇ ಅವನ್ನು ನುಂಗಿ ನೀರು ಕುಡಿದಿರುವ ಬಗ್ಗೆ ಹಿಂದಿನ ಜಿಲ್ಲಾ ಚುನಾವಣಾಧಿಕಾರಿ ದೀಪಕ ಮನ್ನಳ್ಳಿ ಅವರ ಬಳಿ ಇಂದಿಗೂ ದಾಖಲೆ ಇದೆ. ತಿರಸ್ಕøತವಾದ ಕಾರ್ಡ್‍ದಾರರ ಶುಲ್ಕ ಸಹ ಎಂದಿಗೂ ವಾಪಸ್ಸು ಕೊಡಲಿಲ್ಲ. ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ವಸುಲಿ ಮಾಡಿದ ಹಣದ ಖರ್ಚು ವೆಚ್ಚ ಬಹಿರಂಗಪಡಿಸಲಿಲ್ಲ. ಸಾಯಿ ಫ್ಯಾಕ್ಟರಿ, ಅರ್.ಟಿ.ಒ ಕಚೇರಿ ಸೇರಿದಂತೆ ಇತರೆಡೆಗಳಲ್ಲಿ ಆಕ್ರಮ ಹಣ ತಂದು ತನ್ನ ಕಾರಿಗೆ ಚಕ್ರಗಳು ಹಾಕಿಕೊಂಡಿರತುವುದು ಬಹಳಷ್ಟಿದೆ. ಈ ಎಲ್ಲ ಅವ್ಯವಹಾರ ಮಾಡಿ ‘ಉಲ್ಟಾ ಚೋರ್ ಕೊತವಾಲ್ ಕೊ ಡಾಟೆ’ ಎನ್ನುವಂತೆ ನಡೆದುಕೊಳ್ಳುತ್ತಿರುವರು.
ಸಂಘದ ಜಿಲ್ಲಾ ಅಧ್ಯಕ್ಷ ಡಿ.ಕೆ ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಜೊತೆಗಿದ್ದರು.