ಶ್ರೇಷ್ಠ ಸವಿತಾ ಸಮಾಜ ರತ್ನ ಪ್ರಶಸ್ತಿ ವಾರಿಕಕ್ಕೆ ಗೌರವ
ಕಲಬುರ್ಗಿ, ಮಾ,24: ಮಹಾರಾಷ್ಟ್ರದ ಸೋಲಾಪುರ ನಗರದಲ್ಲಿ ಶ್ರೀ ಸಂತ ಸೇನಾ ನಾವಿಕ ಬಹು ಉದ್ದೇಶ ಸೇವಾ ಪ್ರತಿಷ್ಠಾನ ಸೋಲಾಪುರ ಮತ್ತು ಮಹಾರಾಷ್ಟ್ರ ನಾವಿಕ ಮಹಾಮಂಡಳ ಮುಂಬೈ ಅವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸವಿತಾ ಸಮಾಜ ವಿಭಾಗೀಯ ಕಾರ್ಯದರ್ಶಿ ಕಲಬುರಗಿ ಜಿಲ್ಲಾ ಸವಿತಾ ಸಮಾಜ ಯುವಕ ಸಂಘದ ಜಿಲ್ಲಾಧ್ಯಕ್ಷ ಆನಂದ ವಾರಿಕ ಅವರಿಗೆ ಅವರ ಸಾಮಾಜಿಕ ಸೇವೆ ವೈದ್ಯಕೀಯ ಸೇವೆಯ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಶ್ರೇಷ್ಠ ಸವಿತಾ ಸಮಾಜ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು ಇದೆ ಸಂದರ್ಭದಲ್ಲಿ ಮಹಾರಾಷ್ಟ್ರ ನಾವಿಕ ಮಹಾಮಂಡಳ ಅಧ್ಯಕ್ಷರಾದ ಹಿಂದುರಾವ ಗೋರೆ ಮುಖ್ಯಸ್ಥರಾದ ಸಿದ್ರಾಮ ರುದ್ರಾರ ಸುಭಾನ್ ಪಟೇಲ್ ಕಲಬೇನೂರ ಮಹೇಶ ಪಾಣೆಗಾಂವ ನರಸಿಂಹಲು ಅಡಕಿ ಅಂಬರೀಷ್ ಇಟಗಾ ಅನೀಲಕುಮಾರ ಗೋಗಿ ಕೃಷ್ಣ ಅನೇಕ ಮುಖಂಡರು ಉಪಸ್ಥಿತರಿದ್ದರು.