ಹೋಳಿ ಹಬ್ಬ ಶಾಂತಯುತವಾಗಿ ಆಚರಿಸಿ: ಸಿಪಿಐ ಅಲ್ಲಾಪುರ್
ಚಿಟಗುಪ್ಪ:ಮಾ.24: ಚಿಟಗುಪ್ಪ ತಾಲೂಕು ಶಾಂತಿ ಮತ್ತು ಸುವ್ಯವಸ್ಥೆಗೆ ಹೆಸರುವಾಸಿಯಾಗಿದೆ ಇದನ್ನೇ ಕಾಯ್ದುಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ ಹೋಳಿ ಹಬ್ಬದಲ್ಲಿ ಬಣ್ಣ ಹಚ್ಚುವ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಹಬ್ಬದ ನೆಪದಲ್ಲಿ ಕಾನೂನು ಉಲಂಘಿಸುವವರ ವಿರುದ್ಧ ಕ್ರಮ ಜರುಗಿಸುವುದಾಗಿ ಸಿಪಿಐ ಶ್ರೀನಿವಾಸ ಅಲ್ಲಾಪುರ್ ಎಚ್ಚರಿಕೆ ನೀಡಿದರು. ಹೋಳಿ ಹಬ್ಬದ ನಿಮಿತ್ಯ ಶನಿವಾರ ಪಟ್ಟಣದ ಪೆÇಲೀಸ್ ಠಾಣೆಯ ಆವರಣದಲ್ಲಿ ಕರೆದ್ದಿದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಹಿಂದಿನಿಂದಲೂ ಪಟ್ಟಣದಲ್ಲಿ ಹಿಂದೂ ಮುಸ್ಲಿಂರು ಎಲ್ಲಾ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದದಿಂದ ಆಚರಿಸುತ್ತಿರುವುದು ಸಂತಸದ ಸಂಗತಿ ರಂಗ ಪಂಚಮಿ ದಿನ ರಾಸಾಯನಿಕ ಬಳಸದೆ ಒಣ ಬಣ್ಣ ಬಳಸುವುದು ಸೂಕ್ತ ಒತ್ತಾಯ ಪೂರ್ವಕವಾಗಿ ಯಾರ ಮೇಲೂ ಬಣ್ಣ ಹಾಕಬಾರದು ಎಂದು ತಿಳಿಸಿದ್ದರು. ಪಿಎಸ್‍ಐ ಬಾಷುಮಿಯಾ ಕೊಂಚೂರ್ ಮಾತನಾಡಿ ಭಾನುವಾರ ರಾತ್ರಿ 8 ಘಂಟೆಯ ಒಳಗೆ ಕಾಮದಾಹನ ಮಾಡಬೇಕು ಮರು ದಿನ ಹೋಳಿ ಹಬ್ಬವನ್ನು 12 ಘಂಟೆಯ ಒಳಗಡೆ ಶಾಂತಯುತವಾಗಿ ಆಚರಿಸಬೇಕು ಡಿಜೆ ಅಥವಾ ಧ್ವನಿವರ್ಧಕ ಅಳವಡಿಸಲು ಅನುಮತಿ ಇಲ್ಲ ಎಂದರು. ಈ ಸಂದರ್ಭದಲ್ಲಿ ಕ್ರೈಮ್ ಪಿಎ??? ಸುಭಾಷ, ಪಟ್ಟಣದ ಪ್ರಮುಖರಾದ ಬಾಬಾ ಬುಖಾರಿ, ಮಾರುತಿ ಶಿರ್ಕೆ, ರಾಶೀದ್ ಪಟೇಲ್. ನಸೀರ್ ಹಕ್ಕೀಮ್ ಶಾಮರಾವ್ ಭೂತಾಳೆ ಸಚಿನ್ ಮಠಪತಿ ಅನಿಲ್ ಶಿಂದೆ ಸೇರಿದಂತೆ ಪುರಸಭೆಯ ಸದಸ್ಯರು ಠಾಣೆಯ ವ್ಯಾಪ್ತಿಯ ಗ್ರಾಮಗಳ ಪ್ರಮುಖರು ಇದ್ದರು.