ಭಗತ್ ಸಿಂಗ್ ರಾಜಗುರು ಸುಖದೇವ್ ಬಲಿದಾನದಂಗವಾಗಿ ವೀರ ನಮನ
ಬೀದರ್:ಮಾ.24:ಭಾರತ ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಭಾರತಾಂಬೆಯ ಹೆಮ್ಮೆಯ ಪುತ್ರ ಕ್ರಾಂತಿಕಾರಿ ಭಗತ್ ಸಿಂಗ್ ರಾಜಗುರು ಸುಖದೇವ್ ಅವರ ಬಲಿದಾನ ದಿವಸದ ಪ್ರಯುಕ್ತ ನಗರದ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ವೀರ ನಮನ ಸಲ್ಲಿಸಲಾಯಿತು. ವಿದ್ಯಾರ್ಥಿಗಳಾದ ನಾವುಗಳು ದೇಶದ ಸ್ವತಂತ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಲಕ್ಷಾಂತರ ವೀರ ಯೋಧರ ಬಲಿದಾನವನ್ನು ಸ್ಮರಿಸಬೇಕು ಭಗತ್ ಸಿಂಗ್ ಅವರ ವಿಚಾರಧಾರೆಗಳು ಚಿಂತನೆಗಳನ್ನು ಮೈಗೂಡಿಸಿಕೊಂಡು ನಾವು ದೇಶಪ್ರೇಮ, ರಾಷ್ಟ್ರಪ್ರೇಮ, ಮತ್ತು ಸಮಾಜಸೇವಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯನಿರ್ವಹಿಸುತ್ತಿದೆ ಒಳ್ಳೆ ನಾಗರಿಕರಾಗಿ ಬದುಕಲು ಪ್ರಯತ್ನಿಸಬೇಕು ಈ ವಿದ್ಯಾರ್ಥಿ ಜೀವನ ಕೇವಲ ದೇಹ ಪ್ರೇಮಕ್ಕೆ ಸೀಮಿತಗೊಳಿಸದೆ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು ಎಂದು ಡಾ ಸಂತೋಷ್ ಕುಮಾರ್ ಎಬಿವಿಪಿ ನಗರಾಧ್ಯಕ್ಷರು ಮಾತನಾಡಿದರು ಈ ಸಂದರ್ಭದಲ್ಲಿ ಶಶಿಕಾಂತ ಜಿಲ್ಲಾ ಸಂಚಾಲಕ ಸಾಯಿಕಿರಣ್, ನಾಗರಾಜ್, ಅಮರ್, ಓಂಕಾರ್ ,ಶಿವಾನಿ ,ಸಂಗೀತ ಇನ್ನಿತರ ವಿದ್ಯಾರ್ಥಿಗಳು ಭಾಗವಹಿಸಿದರು.